ಹನಿ ನಿರಾವರಿ
ಹನಿ ನೀರಾವರಿ
ಪರಿವಿಡಿ
ಅಧ್ಯಾಯ 1 : ನೀರಿನ ಸಂಪನ್ಮೂಲಗಳ ಬಳಕೆ
ಅಧ್ಯಾಯ 2: ಹನಿ ನೀರಾವರಿಯ ಇತಿಮಿತಿಗಳು
ಅಧ್ಯಾಯ 3: ವ್ಯವಸ್ಥೆಯ ವಿವರಗಳು
ಅಧ್ಯಾಯ ೪: ಹನಿ ನೀರಾವರಿ ವ್ಯವಸ್ಥೆ ಹಾಗೂ ಬೆಳೆ ನಿರ್ವಹಣೆ
ಅಧ್ಯಾಯ ೫: ಹನಿ ನೀರಾವರಿಯ ವೆಚ್ಚ - ಲಾಭಗಳು
ಆಧಾರ ಗ್ರಂಥ/ಲೇಖನಗಳು (ಆಂಗ್ಲ ಭಾಷೆಯಲ್ಲಿ)
- Anonymous, 1981, Trickle Irrigation, ch-7, Section 15 of Irrigation National Engineering Hand Book of United States Department of Agriculture P-1-126.
- Anonymous, 1992, National Seminar on Drip Irrigation, organized by Indian Petrochemicals corporation Ltd., on 28-11-1991. Oxford & IBH, P-1-91.
- Black. J.D.F, 1976, Trickle Irrigation-A Review Hort Abstr. 46(1), 1-8.
- Bucks, D.A., Nakayama, F.S. and Warrick, A.W., 1982, Principles, practices and potentialities of Trickle (Drip) Irrigation, Advan. Irrig., 1, p-220-298. 1986, Trickle Irrigation for Crop Production, Elsevier, Netherlands, P-1-380.
- James, Larry, G., 1988, Principles of Farm Irrigation System Design, John Wiley and Sons, New York, PP-260-300
- Micheal. A.M., 1978, Irrigation Theory and Practice. Vikas Publishing House, New Delhi, P-585-683.
- Nakayama, F.S., and Bucks, D.A., 1991, Wat er quality in drip/trickle irrigation; A review, Irrig. Sci., 12; 187-192.
- Scott, S.F. and Kandaiah, A., 1990, Water resources management for sustainable agriculture, in sustainable Agriculture, Issues, Perspectives and Prospects in Semi Arid Tropics-Vol.2, Indian Society Agronomy, New Delhi, P-216, 234.
- Shivanappan, R.K. Padmakumari, O. and Kumar, V., 1987, Drip Irrigation, Keerthi Publishing House, Coimbatore, P-1-406.
ಅಧ್ಯಾಯ 1 : ನೀರಿನ ಸಂಪನ್ಮೂಲಗಳ ಬಳಕೆ
ನೀರಿನ ಸಂಪನ್ಮೂಲಗಳು-ಸಮೃದ್ಧಿಯ ನಡುವೆ ದುರ್ಲಭ-ಅತಿಯಾದರೆ ಅಮೃತವೂ-ವಿಷ-ಸಣ್ಣದು ಸುಂದರ-ನಮ್ಮ ಗುರಿ ನಿರಂತರ ಕೃಷಿ - ಸಾಂಪ್ರದಾಯಿಕ ನೀರಾವರಿ ಪದ್ಧತಿಗಳು-ಹನಿ ನೀರಾವರಿ ಬೆಳೆದ ದಾರಿ.
ನೀರಿನ ಸಂಪನ್ಮೂಲಗಳು ಮತ್ತು ಬಳಕೆ
ಸಮೃದ್ಧಿ ನಡುವೆ ದುರ್ಲಭ್ಯ
ಭೂಮಿಯ ಮೇಲಿರುವ ಒಟ್ಟು ನೀರಿನ ಪ್ರಮಾಣವು 1400 ದಶಲಕ್ಷ ಘನ ಕಿಲೋ ಮೀಟರುಗಳಷ್ಟಿದ್ದರೂ ಸಹ, ಸಮುದ್ರದಲ್ಲಿರುವ ಉಪ್ಪು ನೀರು, ಮಂಜುಗಡ್ಡೆಯ ರೂಪದಲ್ಲಿ ಘನೀಕೃತಗೊಂಡ ನೀರು, ಸಾಮಾನ್ಯ ಬಳಕೆಗೆ ದೊರೆಯದಷ್ಟು ಆಳವಾಗಿ ಅಡಗಿರುವ ಅಂತರ್ಜಲ ಇವುಗಳನ್ನು ಹೊರತು ಪಡಿಸಿದರೆ, ಮಾನವನ ಬಳಕೆಗೆ ದೊರೆಯುವ ನೀರು ಕೇವಲ ಸುಮರು 3 ದಶಲಕ್ಷ ಘನ ಕಿಲೋ ಮೀಟರಿನಷ್ಟು (ಕೋಷ್ಟಕ-1.1)
| ಕ್ರ.ಸ | ಮೂಲ | ಪ್ರಮಾಣ |
|---|---|---|
| 1 | ಭೂಮಿಯಲ್ಲಿರುವ ಒಟ್ಟು ನೀರು | 1400 ದಶಲಕ್ಷ ಘನ ಕಿ.ಮೀ. |
| 2 | ಸಮುದ್ರದಲ್ಲಿರುವ ಉಪ್ಪು ನೀರು | 1360 ದಶಲಕ್ಷ ಘನ ಕಿ.ಮೀ. |
| 3 | ಸಿಹಿ ನೀರು | 40 ದಶಲಕ್ಷ ಘನ ಕಿ.ಮೀ. |
| ಅ. ಧ್ರುವ ಮತ್ತಿತರ ಪ್ರದೇಶಗಳಲ್ಲಿರುವ ಮಂಜುಗಡ್ಡೆ ಮತ್ತು ಹಿಮನದಿಗಳು | 30 ದಶಲಕ್ಷ ಘನ ಕಿ.ಮೀ | |
| ಆ. ಮಾನವನಿಗೆ ದೊರಕಲಾಗದ ಅಂತರ್ಜಲ | 6 ದಶಲಕ್ಷ ಘನ ಕಿ.ಮೀ. | |
| ಇ. ಜಲ ಚಕ್ರದಲ್ಲಿರುವ ನೀರು | 41000 ಘನ ಕಿ.ಮೀ. ಪ್ರತಿ ವರ್ಷ | |
| - ನಿಗದಿಯಾಗಿ ಹರಿಯುವ ನೀರಿನ ಪ್ರಮಾಣ | 14000 ಘನ ಕಿ.ಮೀ. ಪ್ರತಿ ವರ್ಷ | |
| - ಜನಸಂಖ್ಯಾ ರಹಿತ ಪ್ರದೇಶದಲ್ಲಿ ಹರಿಯುವ ನೀರಿನ ಪ್ರಮಾಣ | 5000 ಘನ ಕಿ.ಮೀ. ಪ್ರತಿ ವರ್ಷ | |
| - ಜನ ಬಳಕೆಗೆ ದೊರೆಯುವ ಹರಿಯುವ ನೀರಿನ ಪ್ರಮಾಣ | 9000 ಘನ ಕಿ.ಮೀ. ಪ್ರತಿ ವರ್ಷ |
ಭೂ ಭಾಗಗಳಲ್ಲಿ ನೀರಿನ ಇರುವಿಕೆ ಹಾಗೂ ಜನಸಂಖ್ಯೆಯಲ್ಲಿನ ವ್ಯತ್ಯಾಸಗಳಿಂದಾಗಿ, ಪ್ರತಿ ವ್ಯಕ್ತಿಗೆ ದೊರೆಯುವ ನೀರಿನ ಪ್ರಮಾಣವು ದೇಶ ದಿಂದ ದೇಶ ಕ್ಕೆ ಹೆಚ್ಚಿನ ವ್ಯತ್ಯಾಸವನ್ನು ತೋರಿಸುತ್ತದಲ್ಲದೇ, ಅನೇಕ ದೇಶಗಳ ಕೃಷಿಯ ಮುನ್ನಡೆ, ಕೈಗಾರಿಕೀಕರಣ ಮತ್ತು ಜೀವನ ಮಟ್ಟ ಸುಧಾರಣೆಗೆ ನೀರಿನ ಕೊರತೆಯೇ ಮುಖ್ಯ ಅಡಚಣೆಯಾಗಿದೆ. ಇಂದಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೃಷಿಯೇ ಹೆಚ್ಚು ನೀರು ಬಳಸುತ್ತಿರುವ ಕ್ಷೇತ್ರವಾಗಿದ್ದರೂ ಸಹ (1967ರಲ್ಲಿ ಶೇ. 80ರಷ್ಟು), ಏರುತ್ತಿರುವ ಜೀವನ ಮಟ್ಟ, ಬೆಳೆಯುತ್ತಿರುವ ಕೈಗಾರಿಕೀಕರಣಗಳಿಂದಾಗಿ, ಕ್ರಿ.ಶ. 2000ದ ಹೊತ್ತಿಗೆ ಕೃಷಿಯಲ್ಲಿ ನೀರಿನ ಬಳಕೆಯು ಒಟ್ಟು ಬಳಕೆಯ ಕೇವಲ ಶೇ. 53ರಷ್ಟಾಗಬಹುದೆನ್ನುವ ಅಂದಾಜಿದೆ.
ಅತಿಯಾದರೆ ಅಮೃತವೂ ವಿಷ
ಉಪಯೋಗವೆಂದು ಕಂಡು ಬರುವ ವಸ್ತುವಿನ ಅತಿ ಬಳಕೆಯು ಮಾನವನ ಸಾಮಾನ್ಯ ದೌರ್ಬಲ್ಯಗಳಲ್ಲಿ ಒಂದು. ನೀರಿನ ಅತಿ ಬಳಕೆಯಿಂದ ಮನುಕುಲವು ಹಿಂದೆ ಅನೇಕ ತೊಂದರೆಗಳನ್ನು ಅನುಭವಿಸಿರುವುದೇ ಅಲ್ಲದೆ, ಈಗಲೂ ಸಹ ಈ ಕಾರಣದಿಂದ ಗಣನೀಯ ಪ್ರದೇಶದ ಜಮೀನು ಕೃಷಿಗೆ ಅಯೋಗ್ಯವಾಗಿದೆ. ಈಗ ಪ್ರಪಂಚದಲ್ಲಿ ನೀರಾವರಿಯಾಗುತ್ತಿರುವ ಒಟ್ಟು 270 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 60 ರಿಂದ 80 ದಶಲಕ್ಷ ಹೆಕ್ಟೇರ್ ಪ್ರದೇಶವು ಅಧಿಕ ಲವಣ ಹಾಗೂ ಜೌಗಿನಿಂದ ಸ್ವಲ್ಪ ಮಟ್ಟಿನ ತೊಂದರೆಗೊಳಗಾಗಿದ್ದರೆ, ಸುಮಾರು 20 ರಿಂದ 30 ದಶಲಕ್ಷ ಹೆಕ್ಟೇರ್ ಪ್ರದೇಶವು ಇದೇ ಕಾರಣಗಳಿಂದ ತೀವ್ರ ತೊಂದರೆಗೊಳಗಾಗಿದೆ.
ಸಣ್ಣದು ಸುಂದರ ಮತ್ತು ನಿರಂತರ
ಸ್ವಾತಂತ್ಯಾನಂತರ ಭಾರತ ದೇಶದಲ್ಲಿ ಮಧ್ಯಮ ಹಾಗೂ ಭಾರೀ ನೀರಾವರಿ ಯೋಜನೆಗಳಿಗೆ ಅಧಿಕ ಪ್ರಾಶಸ್ತ್ಯಬ್ ನೀಡಲಾಗಿದೆ. ಈ ಯೋಜನೆಗಳಲ್ಲಿ ಪ್ರತಿ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು, ವಿವಿಧ ಅಂದಾಜುಗಳ ಪ್ರಕಾರ, ಜಲಾನಯನ ಅಭಿವೃದ್ಧಿ ಹಾಗೂ ಬಸಿಗಾಲುವೆಗಳ ಅಭಿವೃದ್ಧಿ ವೆಚ್ಚವನ್ನು ಹೊರತುಪಡಿಸಿ, ಸುಮಾರು 40 ಸಾವಿರ ರೂಪಾಯಿಗಳಿಂದ 60 ಸಾವಿರ ರೂಪಾಯಿಗಳಷ್ಟು ವೆಚ್ಚ ತಗುಲಬಹುದು. ಸಣ್ಣ ನೀರಾವರಿ ಯೋಜನೆಗಳಲ್ಲಿ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನೀರಾವರಿ ಕಲ್ಪಿಸಬಹುದಲ್ಲದೇ, ಭಾರೀ ನೀರಾವರಿ ಯೋಜನೆಗಳಲ್ಲಿ ಬರುವ ಇತರೆ ತೊಂದರೆಗಳಾದ ಗ್ರಾಮಗಳ, ಜಮೀನಿನ ಹಾಗೂ ಅರಣ್ಯದ ಮುಳುಗಡೆ, ಪರಿಸರ ಅಸಮತೋಲನ, ದೊಡ್ಡ ಕಾಲುವೆಗಳಿಗೆ ಉಪಯುಕ್ತ ಜಮೀನಿನ ನಷ್ಟ, ನಿರ್ವಸತಿಗರ ಪುನರ್ವಸತಿ, ಜಲಮಾಲಿನ್ಯ ಮುಂತಾದವುಗಳೂ ಇರುವುದಿಲ್ಲ. ಮುಖ್ಯವಾಗಿ ಸಣ್ಣ ನೀರಾವರಿ ಯೋಜನೆಗಳಲ್ಲಿ ನೀರಿನ ಬಳಕೆಯ ಸಾಮರ್ಥ್ಯವು ಹೆಚ್ಚಿಗೆ ಇರುತ್ತದೆ.
ನಮ್ಮ ಗುರಿ - ನಿರಂತರ ಕೃಷಿ
ನಿರಂತರ ಕೃಷಿ ಉತ್ಪಾದನೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನೀರಿನ ಬಳಕೆಯ ಬಗ್ಗೆ 90ರ ದಶಕದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿರುವ ಕ್ಷೇತ್ರಗಳ ಬಗ್ಗೆ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯವರು ಸಿದ್ಧಪಡಿಸಿ, ವಿಶ್ವ ಸಂಸ್ಥೆಯವರು ಒಪ್ಪಿಗೆ ನೀಡಿರುವ ನೀತಿ ಸಂಹಿತೆಯು ಕೆಳಕಾಣಿಸಿದಂತಿದೆ.
- (ಅ) ಸಣ್ಣ ಪ್ರಮಾಣದ ನೀರಿನ ಬಳಕೆಗೆ ಕಾರ್ಯಕ್ರಮಗಳನ್ನು ಯೋಜಿಸುವುದು.
- (ಆ) ಹಿಡುವಳಿ ಮಟ್ಟದಲ್ಲಿ ನೀರಿನ ಬಳಕೆಯ ಸಮರ್ಪಕತೆಯನ್ನು ಹೆಚ್ಚಿಸುವುದು
- (ಇ) ಸವಳು, ಜೌಗು ಮುಂತಾದವುಗಳಿAದ ಜಮೀನು ಹಾಳಾಗದಂತೆ ಎಚ್ಚರವಹಿಸುವುದು. ಮತ್ತು
- (ಈ) ನೀರಿನ ಗುಣಮಟ್ಟ ಕಾಪಾಡಿಕೊಂಡು ಅಂತರ್ಜಲ ಹಾಗೂ ಇತರೆ ನೀರಿನ ಸಂಗ್ರಹಗಳ ಮಾಲಿನ್ಯ ತಡೆಗಟ್ಟುವುದು.
ನಮ್ಮ ದೇಶದಲ್ಲಿ ಮಳೆ ಆಧಾರಿತ ಕೃಷಿಯ ಪ್ರದೇಶವೇ ಹೆಚ್ಚಾಗಿದ್ದು, ನೀರಾವರಿ ಸೌಲಭ್ಯಗಳನ್ನು ಎಷ್ಟೇ ಹೆಚ್ಚಿಸಿದರೂ ಸಹ, ಮುಂಬರುವ ವರ್ಷಗಳಲ್ಲಿ ಶೇಕಡಾ 50ರಷ್ಟು ಪ್ರದೇಶವು ಮಳೆ ಆಶ್ರಿತವಾಗಿಯೇ ಉಳಿಯಲಿದೆ. ಮಳೆ ಆಶ್ರಿತ ಕೃಷಿಯಿಂದ ಬರುವ ಆದಾಯದಲ್ಲಿ ಸಾಮಾನ್ಯವಾಗಿ ಕಂಡು ಬರುವ ಏರುಪೇರನ್ನು ತಪ್ಪಿಸಿ, ಆದಾಯದ ನಿಶ್ಚಿತತೆಯನ್ನು ಹೆಚ್ಚಿಸುವಲ್ಲಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳು, ವಾರ್ಷಿಕ ಹೊಲದ ಬೆಳೆಗಳಿಗಿಂತಲೂ ಹೆಚ್ಚು ಸಹಕಾರಿಯಾಗಿವೆ. ಆದಾಯದ ನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿ, ಮಳೆಯಾಶ್ರಿತ ಕೃಷಿಕರ ಆದಾಯವನ್ನು, ಕೊಳ್ಳುವ ಶಕ್ತಿಯನ್ನೂ ಹೆಚ್ಚಿಸಲು ಸಣ್ಣ ನೀರಾವರಿ ಯೋಜನೆಗಳು ಹೆಚ್ಚು ಸಹಕಾರಿಯಾಗಿವೆ. ಸಣ್ಣ ನೀರಾವರಿಯನ್ನೊಳಗೊಂಡ ತೋಟಗಾರಿಕೆ ಪ್ರದೇಶವನ್ನು ಅಭಿವೃದ್ಧಿಪಡಿಸುವುದರಿಂದ, ಕೃಷಿ ಆಧಾರಿತ ಸಂಸ್ಕರಣಾ ಘಟಕಗಳನ್ನೂ, ತದನಂತರ ಕೃಷಿ ಉತ್ಪಾದನೆಯ ನಿರ್ಯಾತವನ್ನೂ ಹೆಚ್ಚಿಸಲು ಅವಕಾಶವಾಗುತ್ತದೆ.
ಸಣ್ಣ ನೀರಾವರಿ ಯೋಜನೆಗಳಲ್ಲಿ, ಭೂ ಅಂತರ್ಜಲ ಬಳಸುವ ಬಾವಿ ಹಾಗೂ ಕೊಳವೆ ಬಾವಿ ಯೋಜನೆಗಳು ಮತ್ತು ಸಣ್ಣ ತೊರೆ, ಹಳ್ಳಗಳಿಂದ ಎತ್ತು ನೀರಾವರಿ ಯೋಜನೆಗಳು ಪ್ರಮುಖವಾಗಿವೆ. ಭಾರತದಲ್ಲಿ ದೊರೆಯುವ ಅಂತರ್ಜಲವು ಕೆಲವು ರಾಜ್ಯಗಳಲ್ಲಿ ಹೇರಳವಾಗಿದ್ದರೂ, ಪಶ್ಚಿಮ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಅತಿ ಕಡಿಮೆ ಇದೆ.
ಮಳೆ ಆಧಾರಿತ ಪ್ರದೇಶಗಳಲ್ಲಿ, ಗಣನೀಯ ಪ್ರದೇಶವನ್ನು, ಅಂತರ್ಜಲ ಬಳಸಿಕೊಂಡು ನೀರಾವರಿಯಲ್ಲಿ ತರಲಾಗಿದೆ. ಪ್ರಾದೇಶಿಕ ವಿದ್ಯುದೀಕರಣ ಕಾರ್ಪೋರೇಷನ್ನ ಒಂದು ಅಂದಾಜಿನAತೆ ದೇಶದಲ್ಲಿ ಸುಮಾರು 72ಲಕ್ಷ ವಿದ್ಯುತ್ನಿಂದ ನಡೆಯುವ ಪಂಪುಗಳಿವೆ. ಈ ಪಂಪುಗಳ ಸಾಮಾನ್ಯ ತೊಂದರೆಗಳೆAದರೆ; ನೀರಿನ ಕಡಿಮೆ ಇಳುವರಿ, ಪದೇ ಪದೇ ವಿದ್ಯುಚ್ಛಕ್ತಿಯ ವೈಫಲ್ಯ, ಮುಂತಾದವುಗಳು. ಈ ಕಾರಣಗಳಿಂದಾಗಿ ಕಡಿಮೆ ಅವಧಿಯಲ್ಲಿ ಪಂಪುಗಳನ್ನು ಬಳಸಿಯೂ ಉತ್ತಮ ಇಳುವರಿಯನ್ನು ಪಡೆಯಲು ಸಹಕಾರಿಯಾಗುವಂತಹ ನೀರಾವರಿ ಯೋಜನೆಗಳು ಬಳಕೆಗೆ ಬರಬೇಕಾಗಿದೆ.
ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಜೀವನಮಟ್ಟದಿಂದ ಹಾಗೂ ಇತರೆ ಅನೇಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದ ಕೂಲಿಯ ಆಳುಗಳು ದುಬಾರಿಯಾಗುತ್ತಿದ್ದಾರೆ ಹಾಗೂ ದುರ್ಲಭವಾಗುತ್ತಿದ್ದಾರೆ. ಈ ಸನ್ನಿವೇಶದಲ್ಲಿಯೂ ಸಹ ಕೃಷಿ ಉತ್ಪಾದನೆಯನ್ನು ನಿರಂತರವಾಗಿ ಹೆಚ್ಚಿಸಿಕೊಂಡು ಹೋಗುವ ನೀರಾವರಿ ಯೋಜನೆಗಳ ಅವಶ್ಯಕತೆ ಇದೆ.
ಸಾಂಪ್ರದಾಯಿಕ ನೀರಾವರಿ ಪದ್ಧತಿಗಳು
ಸಾಂಪ್ರದಾಯಿಕ ನೀರಾವರಿ ಪದ್ಧತಿಗಳಲ್ಲಿ ಪ್ರತಿ ಬಾರಿಗೆ ಸುಮಾರು ಒಂದು ಮೀಟರ್ ಆಳದಷ್ಟು ಮಣ್ಣಿನಲ್ಲಿ ತೇವಾಂಶವನ್ನು ಶೇಖರಿಸಿ, ಇದರಲ್ಲಿ ಸಸ್ಯಗಳಿಗೆ ಲಭ್ಯವಿರುವ ನೀರಿನ ಹೆಚ್ಚಿನ ಭಾಗವು ಬಳಕೆಯಾದಾಗ ಮರುನೀರಾವರಿ ಮಾಡಲಾಗುತ್ತಿದೆ. ಈ ವಿಧಾನಗಳಲ್ಲಿ ಸಾಮಾನ್ಯವಾಗಿ, ನೀರುಣಿಸಿದ ಒಂದೆರಡು ದಿನಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ತೇವಾಂಶವೂ ಹಾಗೂ ಕೊನೆಯ ಒಂದೆರಡು ದಿನಗಳಲ್ಲಿ ಅವಶ್ಯಕತೆಗಿಂತ ಕಡಿಮೆ ತೇವಾಂಶವೂ ಇರುತ್ತದೆ.
ಈ ವಿಧಾನಗಳಲ್ಲಿ ಸಾಮಾನ್ಯವಾಗಿ ನೀರನ್ನು ತೂಬಿನಿಂದ ಹೊಲ, ಗದ್ದೆಗಳಿಗೆ ತೆರೆದ ಮಣ್ಣಿನ ಕಾಲುವೆಗಳಲ್ಲಿ ಸಾಗಿಸಲಾಗುತ್ತದೆ. ಕಾಲುವೆಯ ಸ್ಥಿತಿಗತಿಗಳಿಗನುಗುಣವಾಗಿ ನೀರಿನ ಸಾಗಾಣಿಕೆ ನಷ್ಟವು ಶೇ.30 ರಿಂದ 40ರಷ್ಟಿರುತ್ತದೆ. ನೀರನ್ನು ಜಮೀನಿನ ಎಲ್ಲಾ ಕಡೆಗಳಲ್ಲಿಯೂ ಹರಡುವಂತೆ ಮಾಡುವ ಪ್ರಯತ್ನದಲ್ಲಿ ಗಣನೀಯ ಪ್ರಮಾಣದ ನೀರು ಜಮೀನಿನ ಕೆಳಭಾಗದಲ್ಲಿ ಮತ್ತು ಮಣ್ಣಿನ ಮೇಲ್ಮೆöÊನಲ್ಲಿ ಸಂಗ್ರಹವಾಗುತ್ತದೆ ಅಥವಾ ಮೇಲ್ಮೈನಿಂದಲೇ ಬಸಿದು ಹೋಗಿ ನಷ್ಟ ಹೊಂದುತ್ತದೆ.
ಸಾಂಪ್ರದಾಯಿಕ ನೀರಾವರಿ ವಿಧಾನಗಳನ್ನು ಈ ಕೆಳಕಂಡ ಮೂರು ಗುಂಪುಗಳಾಗಿ ವಿಂಗಡಿಸಬಹುದು:
ಈ ವಿಧಾನಗಳಲ್ಲಿ ಸಾಮಾನ್ಯವಾಗಿ ನೀರನ್ನು ತೂಬಿನಿಂದ ಹೊಲ, ಗದ್ದೆಗಳಿಗೆ ತೆರೆದ ಮಣ್ಣಿನ ಕಾಲುವೆಗಳಲ್ಲಿ ಸಾಗಿಸಲಾಗುತ್ತದೆ. ಕಾಲುವೆಯ ಸ್ಥಿತಿಗತಿಗಳಿಗನುಗುಣವಾಗಿ ನೀರಿನ ಸಾಗಾಣಿಕೆ ನಷ್ಟವು ಶೇ.30 ರಿಂದ 40ರಷ್ಟಿರುತ್ತದೆ. ನೀರನ್ನು ಜಮೀನಿನ ಎಲ್ಲಾ ಕಡೆಗಳಲ್ಲಿಯೂ ಹರಡುವಂತೆ ಮಾಡುವ ಪ್ರಯತ್ನದಲ್ಲಿ ಗಣನೀಯ ಪ್ರಮಾಣದ ನೀರು ಜಮೀನಿನ ಕೆಳಭಾಗದಲ್ಲಿ ಮತ್ತು ಮಣ್ಣಿನ ಮೇಲ್ಮೆöÊನಲ್ಲಿ ಸಂಗ್ರಹವಾಗುತ್ತದೆ ಅಥವಾ ಮೇಲ್ಮೈನಿಂದಲೇ ಬಸಿದು ಹೋಗಿ ನಷ್ಟ ಹೊಂದುತ್ತದೆ.
ಸಾಂಪ್ರದಾಯಿಕ ನೀರಾವರಿ ವಿಧಾನಗಳನ್ನು ಈ ಕೆಳಕಂಡ ಮೂರು ಗುಂಪುಗಳಾಗಿ ವಿಂಗಡಿಸಬಹುದು:
- ಮಣ್ಣಿನ ಮೇಲೆ ನೀರು ಹಾಯಿಸುವ ವಿಧಾನಗಳು-ಅನಿಯಂತ್ರಿತ ಹಾಯಿಸುವ ನೀರಾವರಿ, ನಿಯಂತ್ರಿತ ಮಡಿ ನೀರಾವರಿ, ಸುತ್ತು ಪಾತಿ ನೀರಾವರಿ, ಬದುಪಟ್ಟಿ ನೀರಾವರಿ ಮತ್ತು ದಿಣ್ಣೆ ಸಾಲು ನೀರಾವರಿ.
- ಕೃತಕ ಮಳೆ ರೂಪದಲ್ಲಿ ನೀರೊದಗಿಸುವ ಸಿಂಚನ ನೀರಾವರಿ.
- ಮಣ್ಣಿನ ಕೆಳಪದರಗಳಲ್ಲಿ ನೀರಿನ ಮಟ್ಟ ಏರಿಸಿ, ಸೂಕ್ಷö್ಮ ರಂಧ್ರಗಳ ಮೂಲಕ ಮೇಲೇರುವ ತೇವಾಂಶವನ್ನು ಬೆಳೆಗೆ ಒದಗಿಸುವ ತಳ ನೀರಾವರಿ.
ಅನಿಯಂತ್ರಿತ ಹಾಯಿಸುವಿಕೆ ವಿಧಾದಲ್ಲಿ ನೀರನ್ನು ಹರಿಯಲು ಬಿಟ್ಟು ಅದನ್ನು ಜಮೀನಿನಲ್ಲಿ ಸಮನಾಗಿ ಹರಡಲು ಪ್ರಯತ್ನಿಸಿದರೆ, ನಿಯಂತ್ರಿತ ಮಡಿ ನೀರಾವರಿಯಲ್ಲಿ, ಸಾಲುಗಳಲ್ಲಿ ಸಣ್ಣ ಮಡಿಗಳನ್ನು ನಿರ್ಮಿಸಿ ಸಣ್ಣ ಹೊಲಗಾಲುವೆಗಳ ಮೂಲಕ ಪ್ರತಿ ಪಾತಿಗೂ ನೀರು ಕೊಡಲಾಗುತ್ತದೆ (ಚಿತ್ರ 1.1 ಮತ್ತು 1.2). ಸುತ್ತು ಪಾತಿ ವಿಧಾನದಲ್ಲಿ ಮರದ ಬುಡದ ಸುತ್ತಲೂ ಮಾಡಿದ ಪಾತಿಗಳಿಗೆ ಪ್ರತ್ಯೇಕ ಹೊಲಗಾಲುವೆಗಳ ಮೂಲಕ ನೀರು ಕೊಡಲಾಗುತ್ತದೆ (ಚಿತ್ರ 1.3).
ಬದುಪಟ್ಟಿ ನೀರಾವರಿ ವಿಧಾನದಲ್ಲಿ ಜಮೀನನ್ನು 10-15 ಮೀಟರ್ ಅಗಲದ ಹಾಗೂ 50 ರಿಂದ 100 ಮೀಟರ್ ಉದ್ದದ ಸಣ್ಣ ಪಟ್ಟಿಗಳಾಗಿ ರೂಪಿಸಿ, ಪಟ್ಟಿಯ ಅಗಲಕ್ಕೂ ಒಂದೇ ಮಟ್ಟ ಮಾಡಿ, ಉದ್ದಕ್ಕೆ ಪ್ರತಿಶತ 0.2 ರಿಂದ 0.4ರಷ್ಟು ಇಳಿಜಾರು ಇರಿಸಿಕೊಂಡು, ಪಟ್ಟಿಯ ಎತ್ತರದ ತುದಿಯಿಂದ ನೀರನ್ನು ತೆಳು ಹಾಳೆಯ ರೂಪದಲ್ಲಿ ಕೊಟ್ಟು, ನೀರು ಇನ್ನೊಂದು ತುದಿಯನ್ನು ಮುಟ್ಟಲು ಇನ್ನೂ ಕೆಲವು ನಿಮಿಷಗಳಿದ್ದಾಗಲೇ ಪಾತಿಗೆ ನೀರು ನಿಲ್ಲಿಸಲಾಗುತ್ತದೆ (ಚಿತ್ರ 1.4). ಹೆಚ್ಚಾದ ನೀರು ಹೊರಹೋಗಲು ಕೆಳಗಿನ ತುದಿಯಲ್ಲಿ ಮೇಲ್ಮೆöÊ ಬಸಿಗಾಲುವೆಯ ಏರ್ಪಾಡು ಮಾಡಲಾಗಿರುತ್ತದೆ. ಸಾಲು ನೀರಾವರಿಯಲ್ಲಿ, ದಿಣ್ಣೆಗಳ ಅಥವಾ ಅಗಲ ಪಾತಿಗಳ ಮಧ್ಯೆ ಸಮಾಂತರವಾಗಿ ಅಲ್ಪ ಇಳಿಜಾರಿನಲ್ಲಿ (ಶೇ. 0.2 ರಿಂದ 0.4) ನಿರ್ಮಿಸಿದ ಉದ್ದ ಸಾಲುಗಳಲ್ಲಿ ನೀರು ಕೊಡಲಾಗುತ್ತದೆ. ಇದರಲ್ಲಿಯೂ ಸಹ ಮುಂಚೆ ನೀರು ನಿಲ್ಲಿಸುವ ಹಾಗೂ ಬಸಿಗಾಲುವೆಯ ಏರ್ಪಾಡು ಇರುತ್ತದೆ (ಚಿತ್ರ 1.5).
ಬದುಪಟ್ಟಿ ನೀರಾವರಿ ವಿಧಾನದಲ್ಲಿ ಜಮೀನನ್ನು 10-15 ಮೀಟರ್ ಅಗಲದ ಹಾಗೂ 50 ರಿಂದ 100 ಮೀಟರ್ ಉದ್ದದ ಸಣ್ಣ ಪಟ್ಟಿಗಳಾಗಿ ರೂಪಿಸಿ, ಪಟ್ಟಿಯ ಅಗಲಕ್ಕೂ ಒಂದೇ ಮಟ್ಟ ಮಾಡಿ, ಉದ್ದಕ್ಕೆ ಪ್ರತಿಶತ 0.2 ರಿಂದ 0.4ರಷ್ಟು ಇಳಿಜಾರು ಇರಿಸಿಕೊಂಡು, ಪಟ್ಟಿಯ ಎತ್ತರದ ತುದಿಯಿಂದ ನೀರನ್ನು ತೆಳು ಹಾಳೆಯ ರೂಪದಲ್ಲಿ ಕೊಟ್ಟು, ನೀರು ಇನ್ನೊಂದು ತುದಿಯನ್ನು ಮುಟ್ಟಲು ಇನ್ನೂ ಕೆಲವು ನಿಮಿಷಗಳಿದ್ದಾಗಲೇ ಪಾತಿಗೆ ನೀರು ನಿಲ್ಲಿಸಲಾಗುತ್ತದೆ (ಚಿತ್ರ 1.4). ಹೆಚ್ಚಾದ ನೀರು ಹೊರಹೋಗಲು ಕೆಳಗಿನ ತುದಿಯಲ್ಲಿ ಮೇಲ್ಮೆöÊ ಬಸಿಗಾಲುವೆಯ ಏರ್ಪಾಡು ಮಾಡಲಾಗಿರುತ್ತದೆ. ಸಾಲು ನೀರಾವರಿಯಲ್ಲಿ, ದಿಣ್ಣೆಗಳ ಅಥವಾ ಅಗಲ ಪಾತಿಗಳ ಮಧ್ಯೆ ಸಮಾಂತರವಾಗಿ ಅಲ್ಪ ಇಳಿಜಾರಿನಲ್ಲಿ (ಶೇ. 0.2 ರಿಂದ 0.4) ನಿರ್ಮಿಸಿದ ಉದ್ದ ಸಾಲುಗಳಲ್ಲಿ ನೀರು ಕೊಡಲಾಗುತ್ತದೆ. ಇದರಲ್ಲಿಯೂ ಸಹ ಮುಂಚೆ ನೀರು ನಿಲ್ಲಿಸುವ ಹಾಗೂ ಬಸಿಗಾಲುವೆಯ ಏರ್ಪಾಡು ಇರುತ್ತದೆ (ಚಿತ್ರ 1.5).
ಹೊಸದಾಗಿ ಅಭಿವೃದ್ಧಿ ಪಡಿಸಲಾಗಿರುವ ಎಳೆತಂತಿ ನೀರಾವರಿ (ಕೇಬಲ್ ಇರಿಗೇಷನ್) ವಿಧಾನದಲ್ಲಿ ಸಾಲು ನೀರಾವರಿಯ ಏರ್ಪಾಡಿದ್ದು ಎಳೆತಂತಿಯನ್ನು ಉಪಯೋಗಿಸಿಕೊಂಡು, ಸ್ವಯಂ ಚಾಲಿತ ರೀತಿಯಲ್ಲಿ ಕೊಳವೆಗಳ ಮೂಲಕ ಪ್ರತಿ ಸಾಲಿಗೂ ಮೊದಲೇ ನಿರ್ಧರಿಸಿದ ಪ್ರಮಾಣದಲ್ಲಿ ನೀರು ಕೊಡಲು ಸಾಧ್ಯವಾಗುತ್ತದೆ.
ಸಿಂಚನ ನೀರಾವರಿ ವಿಧಾನದಲ್ಲಿ ನೀರನ್ನು ಮಳೆಯ ರೂಪದಲ್ಲಿ ಮಣ್ಣಿನ/ಬೆಳೆಯ ಮೇಲೆ ಕೊಡಲಾಗುತ್ತದೆ (ಚಿತ್ರ 1.6). ಕೃತಕ ಮಳೆಯ ಪ್ರಮಾಣವು ಮಣ್ಣಿನ ನೀರು ಇಂಗುವಿಕೆಯ ಪ್ರಮಾಣಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದರಿಂದ, ಜಮೀನಿನ ಮೇಲ್ಮೆöÊನಲ್ಲಿ ನೀರು ಹೊರ ಹರಿಯುವುದಿಲ್ಲ.
ತಳ ನೀರಾವರಿ ವಿಧಾನದಲ್ಲಿ ಮಣ್ಣಿನ ಗಟ್ಟಿ ಕೆಳಪದರಗಳ ಮೇಲೆ ನೀರು ನಿಲ್ಲುವಂತೆ ಮಾಡಿ, ನೀರಿನ ಮಟ್ಟದಿಂದ ಮೇಲಕ್ಕೆ ಮಣ್ಣಿನ ಸೂಕ್ಷö್ಮ ರಂಧ್ರಗಳ ಮೂಲಕ ಏರುವ ತೇವಾಂಶವು ಬೆಳೆಯ ಬೇರಿಗೆ ದೊರಕುವಂತೆ ಏರ್ಪಾಡು ಮಾಡಲಾಗುತ್ತದೆ (ಚಿತ್ರ 1.7).
ಸೂಕ್ಷ್ಮ ನೀರಾವರಿ
ನೀರಿನ ಉಳಿತಾಯ ಹಾಗೂ ಅಧಿಕ ಇಳುವರಿ ಪಡೆಯುವ ದೃಷ್ಟಿಯಲ್ಲಿ ಸಾಧಿಸಲು ಅವಕಾಶವಿರುವ ಸೂಕ್ಷ್ಮ ನೀರಾವರಿ ವಿಧಾನದಲ್ಲಿ ನೀರನ್ನು ಕೊಳವೆಗಳಲ್ಲಿ ನೇರವಾಗಿ ಗಿಡದ ಬುಡಕ್ಕೆ ಸಾಗಿಸಿ, ಅಲ್ಲಿ ಬೇರಿನ ವಲಯವನ್ನು ಭಾಗಶಃ ನೆನೆಯುವಂತೆ ಆದರೆ ಗಿಡದ ಬೆಳವಣಿಗೆಗೆ ಬೇಕಾದ ನೀರನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿ ದಿನ ಕೊಡುವಂತೆ ಏರ್ಪಾಡು ಮಾಡಲಾಗಿರುತ್ತದೆ.
![]() |
ಚಿತ್ರ - 1.2 ನಿಯಂತ್ರಿತ ಮಡಿ (ಪಾತಿ) ನೀರಾವರಿ
|
![]() | |
ಚಿತ್ರ - 1.3 ಸುತ್ತು ಪಾತಿ ನೀರಾವರಿ
|
![]() |
ಚಿತ್ರ - 1.4 ಬದು ಪಟ್ಟಿ ನೀರಾವರಿ
|
![]() |
ಚಿತ್ರ - 1.5 ಸಾಲು ನೀರಾವರಿ
|
ಸೂಕ್ಷ್ಮ ನೀರಾವರಿಯ ಮುಖ್ಯ ವಿಧಾನಗಳೆಂದರೆ, ಹನಿ ನೀರಾವರಿ, ಸೂಕ್ಷ್ಮ ಸಿಂಚನ ನೀರಾವರಿ ಮತ್ತು ಬುಗ್ಗೆ ನೀರಾವರಿ.
ಹನಿ ನೀರಾವರಿ ವಿಧಾನದಲ್ಲಿ ನೀರನ್ನು ನೇರವಾಗಿ ಗಿಡದ ಬುಡಕ್ಕೆ ಕೊಳವೆಗಳಲ್ಲಿ ಸಾಗಿಸಿ, ಅಲ್ಲಿ ವಿಶೇಷ ಹನಿ ಸಾಧನಗಳ ಮೂಲಕ ಹನಿಗಳ ರೂಪದಲ್ಲಿ ಅಥವಾ ಸೂಕ್ಷ್ಮ ಝರಿಗಳ ರೂಪದಲ್ಲಿ ಸಾಮಾನ್ಯವಾಗಿ ಗಂಟೆಗೆ 2 ರಿಂದ 16 ಲೀಟರ್ ಪ್ರಮಾಣದಲ್ಲಿ ಕೊಡಲಾಗುತ್ತದೆ (ಚಿತ್ರ 1.8).
ಸೂಕ್ಷ್ಮ ಸಿಂಚನ ನೀರಾವರಿ ವಿಧಾನದಲ್ಲಿ ನೀರನ್ನು ನೇರವಾಗಿ ಗಿಡದ ಬುಡಕ್ಕೆ ಕೊಳವೆಗಳನ್ನು ಸಾಗಿಸಿ, ಅಲ್ಲಿ ಸಣ್ಣ ಸಿಂಚನ ಸಾಧನಗಳ ಮೂಲಕ ಮಣ್ಣಿನ ಮೇಲೆ ಕೊಡಲಾಗುತ್ತದೆ (ಚಿತ್ರ 1.9). ಇದರಲ್ಲಿ ಸಾಮಾನ್ಯವಾಗಿ ನೀರು ಹೊರಹೊಮ್ಮುವ ಪ್ರಮಾಣವು ಗಂಟೆಗೆ 130 ಲೀಟರ್ ಮೀರದಂತೆ ಇರುತ್ತದೆ.
ಬುಗ್ಗೆ ನೀರಾವರಿ ವಿಧಾನದಲ್ಲಿ, ನೀರನ್ನು ನೇರವಾಗಿ ಗಿಡದ ಬುಡಕ್ಕೆ ಸಾಗಿಸಿ, ಅಲ್ಲಿ ಗಿಡದ ಸುತ್ತಲೂ ಇರುವ ಪಾತಿಗಳಲ್ಲಿ ಹರಡಿಕೊಳ್ಳುವಂತೆ ಬುಗ್ಗೆ ಅಥವಾ ಚಿಲುಮೆ ರೂಪದಲ್ಲಿ ಅಧಿಕ ಪ್ರಮಾಣದಲ್ಲಿ (ಗಂಟೆಗೆ 260 ಲೀಟರ್ ಮೀರದಂತೆ), ಪ್ರತಿದಿನವೂ ಅಲ್ಪಕಾಲ ಕೊಡಲಾಗುತ್ತದೆ (ಚಿತ್ರ 1.10). ಈಚೆಗೆ ಸಂಚಾರಿ ಜಿನುಗು ನೀರಾವರಿ ಹಾಗೂ ಮಿಡಿಯುವ ಸೂಕ್ಷ್ಮ ನೀರಾವರಿ ಎನ್ನುವ ಇನ್ನೆರಡು ಸೂಕ್ಷ್ಮ ನೀರಾವರಿ ಪ್ರಭೇದಗಳನ್ನು ಬಳಕೆಗೆ ತರಲು ಪ್ರಯತ್ನಗಳು ನಡೆಯುತ್ತಿವೆ.
ಸೂಕ್ಷ್ಮ ಸಿಂಚನ ನೀರಾವರಿ ವಿಧಾನದಲ್ಲಿ ನೀರನ್ನು ನೇರವಾಗಿ ಗಿಡದ ಬುಡಕ್ಕೆ ಕೊಳವೆಗಳನ್ನು ಸಾಗಿಸಿ, ಅಲ್ಲಿ ಸಣ್ಣ ಸಿಂಚನ ಸಾಧನಗಳ ಮೂಲಕ ಮಣ್ಣಿನ ಮೇಲೆ ಕೊಡಲಾಗುತ್ತದೆ (ಚಿತ್ರ 1.9). ಇದರಲ್ಲಿ ಸಾಮಾನ್ಯವಾಗಿ ನೀರು ಹೊರಹೊಮ್ಮುವ ಪ್ರಮಾಣವು ಗಂಟೆಗೆ 130 ಲೀಟರ್ ಮೀರದಂತೆ ಇರುತ್ತದೆ.
ಬುಗ್ಗೆ ನೀರಾವರಿ ವಿಧಾನದಲ್ಲಿ, ನೀರನ್ನು ನೇರವಾಗಿ ಗಿಡದ ಬುಡಕ್ಕೆ ಸಾಗಿಸಿ, ಅಲ್ಲಿ ಗಿಡದ ಸುತ್ತಲೂ ಇರುವ ಪಾತಿಗಳಲ್ಲಿ ಹರಡಿಕೊಳ್ಳುವಂತೆ ಬುಗ್ಗೆ ಅಥವಾ ಚಿಲುಮೆ ರೂಪದಲ್ಲಿ ಅಧಿಕ ಪ್ರಮಾಣದಲ್ಲಿ (ಗಂಟೆಗೆ 260 ಲೀಟರ್ ಮೀರದಂತೆ), ಪ್ರತಿದಿನವೂ ಅಲ್ಪಕಾಲ ಕೊಡಲಾಗುತ್ತದೆ (ಚಿತ್ರ 1.10). ಈಚೆಗೆ ಸಂಚಾರಿ ಜಿನುಗು ನೀರಾವರಿ ಹಾಗೂ ಮಿಡಿಯುವ ಸೂಕ್ಷ್ಮ ನೀರಾವರಿ ಎನ್ನುವ ಇನ್ನೆರಡು ಸೂಕ್ಷ್ಮ ನೀರಾವರಿ ಪ್ರಭೇದಗಳನ್ನು ಬಳಕೆಗೆ ತರಲು ಪ್ರಯತ್ನಗಳು ನಡೆಯುತ್ತಿವೆ.
ಹನಿ ನೀರಾವರಿ ಬೆಳೆದ ದಾರಿ
ಹತ್ತೊಂಭತ್ತನೆಯ ಶತಮಾನದ ಅಂತ್ಯದ ವೇಳೆಗೆ ಜೇಡಿಮಣ್ಣಿನ ಸಚ್ಛಿದ್ರ ಕೊಳವೆಗಳ ಮೂಲಕ ತಳ ನೀರಾವರಿ ಮಾಡುವ ಪ್ರಯತ್ನಗಳಲ್ಲಿ, ಹನಿ ನೀರಾವರಿಯ ಒಂದು ಮೂಲ ತತ್ವವಾದ, ಒಂದೇ ಸಮನೆ ಉತ್ತಮ ತೇವಾಂಶ ಕಾಪಾಡಿಕೊಳ್ಳುವುದನ್ನು ಬಳಸಿಕೊಳ್ಳಲಾಯಿತು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹಸಿರು ಸಸ್ಯದ ಮನೆಗಳಲ್ಲಿ ಕುಂಡಗಳಲ್ಲಿ ಬೆಳೆದ ಗಿಡಗಳಿಗೆ ನೇರವಾಗಿ ಕೊಳವೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಕೊಡುವ ಪ್ರಯತ್ನವನ್ನು ಮಾಡಿದಾಗ ಹನಿ ನೀರಾವರಿಯು ರೂಪು ತಳೆಯಿತಾದರೂ, ಇಸ್ರೇಲ್ನಲ್ಲಿ ಸಿಂಚಾ ಬ್ಲಾಸ್ ಎನ್ನುವವನು 1940ರ ದಶಕದಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಜಿನುಗುತ್ತಿದ್ದ ಕೊಳವೆಯ ಪಕ್ಕದಲ್ಲಿದ್ದ ಗಿಡದ ಬೆಳವಣಿಗೆಯು ಚೆನ್ನಾಗಿದ್ದುದನ್ನು ಗಮನಿಸಿ, ಪ್ರತಿ ಗಿಡದ ಬುಡದಲ್ಲೂ ಸಣ್ಣ ಪ್ರಮಾಣದಲ್ಲಿ ನೀರು ಜಿನುಗುವಂತೆ ಕೊಳವೆಗಳ ಜಾಲವನ್ನೂ ಹರಡಿ, ಹನಿ ನೀರಾವರಿಯ ಇಂದಿನ ರೂಪಕ್ಕೆ ನಾಂದಿ ಹಾಡಿದನು. ಹನಿ ಸಾಧನಗಳ ಅಭಿವೃದ್ಧಿ, ಅಲ್ಪ ವೆಚ್ಚದ ಕಡಿಮೆ ಅಳತೆಯ ಪ್ಲಾಸ್ಟಿಕ್ ಕೊಳವೆ ಬಳಕೆ, ಹೆಚ್ಚು ಇಳುವರಿ ಪಡೆಯುವ ಸಾಧ್ಯತೆ ಹಾಗೂ ಕಡಿಮೆ ನೀರಿನ ಬಳಕೆ ಮೊದಲಾದ ಅನೇಕ ರೀತಿಯ ಅನುಕೂಲಗಳಿಂದಾಗಿ ಹನಿ ನೀರಾವರಿಯು ಹೆಚ್ಚು ಜನಪ್ರಿಯವಾಗತೊಡಗಿತು.
![]() |
ಚಿತ್ರ 1.7 ತಳ ನೀರಾವರಿ |
![]() |
ಚಿತ್ರ 1.8 ಸೂಕ್ಷö್ಮ ನೀರಾವರಿ - ಹನಿ ನೀರಾವರಿ |
![]() |
ಚಿತ್ರ 1.9 ಸೂಕ್ಷö್ಮ ನೀರಾವರಿ, ಸೂಕ್ಷö್ಮ ಸಿಂಚನ ನೀರಾವರಿ |
![]() |
ಚಿತ್ರ 1.10 ಸೂಕ್ಷ್ಮ ನೀರಾವರಿ-ಬುಗ್ಗೆ ನೀರಾವರಿ |
ಪ್ರಾರಂಭದಲ್ಲಿ ಇಸ್ರೇಲ್ ಹಾಗೂ ಅಮೇರಿಕಾದಲ್ಲಿ ಜನಪ್ರಿಯವಾದರೂ, ಕ್ರಮೇಣ ಆಸ್ಟ್ರೇಲಿಯಾ, ಯುರೋಪ್ ಭೂ ಖಂಡಗಳಲ್ಲಿಯೂ ಸಹ ಹೆಚ್ಚು ಬಳಕೆಗೆ ಬಂದಿತಲ್ಲದೇ, ಈಗ ಹೆಚ್ಚು ಕಡಿಮೆ ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಬಳಕೆಗೆ ಬಂದಿದೆ. ಒಂದು ಅಂದಾಜಿನ ಪ್ರಕಾರ 1990ರ ವೇಳೆಗೆ ಪ್ರಪಂಚದಲ್ಲಿ ಸುಮಾರು ಹತ್ತು ದಶಲಕ್ಷ ಹೆಕ್ಟೇರುಗಳಷ್ಟು ಜಮೀನು, ಹನಿ ನೀರಾವರಿಗೊಳಪಟ್ಟಿದೆ.
ಭಾರತಕ್ಕೆ 1970ರ ದಶಕದಲ್ಲಿ ಕಾಲಿಟ್ಟ ಹನಿ ನೀರಾವರಿ ಪದ್ಧತಿಯು, ಕಳೆದ 15-20 ವರ್ಷಗಳಲ್ಲಿ, ಅಂತರ್ಜಲದ ತೀವ್ರ ಕೊರತೆಯಿರುವ ದೇಶದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಪಶ್ಚಿಮ ರಾಜ್ಯಗಳಾದ ಗುಜರಾತ್ ಮತ್ತು ಮಹಾರಾಷ್ತ್ರಗಳಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದೆ. ಭಾರತದಲ್ಲಿ ಹನಿ ನೀರಾವರಿಯನ್ನು ಜನಪ್ರಿಯಗೊಳಿಸುವಲ್ಲಿ ಇಂಡಿಯನ್ ಪೆಟ್ರೋ-ಕೆಮಿಕಲ್ ಕಾರ್ಪೋರೇಷನ್ ಲಿಮಿಟೆಡ್, ಕೇಂದ್ರ ಸರಕಾರದ ಊರ್ಜ್ವ ಮಂತ್ರಾಲಯ, ಕೃಷಿ ಮತ್ತು ಗ್ರ್ರಾಮೀಣಾಭಿವೃದ್ಧಿ ಮಂತ್ರಾಲಯ, ಹಲವಾರು ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿಯಲ್ಲಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಡಾ. ಜಿ.ವಿ.ಕೆ. ರಾವ್ ನೇತೃತ್ವದ ರಷ್ರ್ಟೀಯ ಆಯೋಗ ಹಾಗೂ ಹನಿ ನೀರಾವರಿಗೆ ಅವಶ್ಯವಾದ ವಸ್ತುಗಳನ್ನು ಉತ್ಪಾದಿಸುವ ಹಲವಾರು ಕಂಪನಿಗಳು ಮಾಡಿರುವ ಹಾಗೂ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಈ ದಿಶೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರೋತ್ಸಾಹಧನ ನೀಡುವ ಯೋಜನೆಗಳು ಸಹಕಾರಿಯಾಗಿವೆ. ಬ್ಯಾಂಕುಗಳೂ ಸಹ ಸಾಲ ನೀಡುವಲ್ಲಿ ಈ ಕ್ಷೇತ್ರವನ್ನು ಪ್ರಾಮುಖ್ಯತಾ ಕ್ಷೇತ್ರವೆಂದು ಪರಿಗಣಿಸಿರುವುದು. ಇದರ ಬೆಳವಣಿಗೆಗೆ ಅನುಕೂಲಕರವಾಗಿದೆ.
ಭಾರತಕ್ಕೆ 1970ರ ದಶಕದಲ್ಲಿ ಕಾಲಿಟ್ಟ ಹನಿ ನೀರಾವರಿ ಪದ್ಧತಿಯು, ಕಳೆದ 15-20 ವರ್ಷಗಳಲ್ಲಿ, ಅಂತರ್ಜಲದ ತೀವ್ರ ಕೊರತೆಯಿರುವ ದೇಶದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಪಶ್ಚಿಮ ರಾಜ್ಯಗಳಾದ ಗುಜರಾತ್ ಮತ್ತು ಮಹಾರಾಷ್ತ್ರಗಳಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದೆ. ಭಾರತದಲ್ಲಿ ಹನಿ ನೀರಾವರಿಯನ್ನು ಜನಪ್ರಿಯಗೊಳಿಸುವಲ್ಲಿ ಇಂಡಿಯನ್ ಪೆಟ್ರೋ-ಕೆಮಿಕಲ್ ಕಾರ್ಪೋರೇಷನ್ ಲಿಮಿಟೆಡ್, ಕೇಂದ್ರ ಸರಕಾರದ ಊರ್ಜ್ವ ಮಂತ್ರಾಲಯ, ಕೃಷಿ ಮತ್ತು ಗ್ರ್ರಾಮೀಣಾಭಿವೃದ್ಧಿ ಮಂತ್ರಾಲಯ, ಹಲವಾರು ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿಯಲ್ಲಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಡಾ. ಜಿ.ವಿ.ಕೆ. ರಾವ್ ನೇತೃತ್ವದ ರಷ್ರ್ಟೀಯ ಆಯೋಗ ಹಾಗೂ ಹನಿ ನೀರಾವರಿಗೆ ಅವಶ್ಯವಾದ ವಸ್ತುಗಳನ್ನು ಉತ್ಪಾದಿಸುವ ಹಲವಾರು ಕಂಪನಿಗಳು ಮಾಡಿರುವ ಹಾಗೂ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಈ ದಿಶೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರೋತ್ಸಾಹಧನ ನೀಡುವ ಯೋಜನೆಗಳು ಸಹಕಾರಿಯಾಗಿವೆ. ಬ್ಯಾಂಕುಗಳೂ ಸಹ ಸಾಲ ನೀಡುವಲ್ಲಿ ಈ ಕ್ಷೇತ್ರವನ್ನು ಪ್ರಾಮುಖ್ಯತಾ ಕ್ಷೇತ್ರವೆಂದು ಪರಿಗಣಿಸಿರುವುದು. ಇದರ ಬೆಳವಣಿಗೆಗೆ ಅನುಕೂಲಕರವಾಗಿದೆ.
ಅಧ್ಯಾಯ 2: ಹನಿ ನೀರಾವರಿಯ ಇತಿಮಿತಿಗಳು
ಅನುಕೂಲಗಳು-ನೀರಿನ ಮಿತ ಬಳಕೆ-ಇಳುವರಿಯಲ್ಲಿ ಹೆಚ್ಚಳ-ಸುಧಾರಿತ ಗುಣಮಟ್ಟ-ಕಡಿಮೆ ಕಳೆ ಹಾವಳಿ-ಸವಳು ನೀರಿನ ಬಳಕೆ-ಇತರೆ
ಕೃಷಿ ಸಂಪನ್ಮೂಲಗಳ ಮಿತ ಬಳಕೆ-ತ್ರಾಸದಾಯಕ ಸನ್ನಿವೇಶಗಳಲ್ಲಿ ಉಪಕಾರಿ.
ಅನಾನುಕೂಲಗಳು-ಕಲ್ಮಶಗಳಿಂದ ಅಡಚಣೆ-ಕೊಳವೆಗಳಿಗೆ ಹಾನಿ-ಅಧಿಕ ಪ್ರಾರಂಭಿಕ ವೆಚ್ಚ.
ಹನಿ ನೀರಾವರಿಯನ್ನು ಅಳವಡಿಸಬಹುದಾದ ಸನ್ನಿವೇಶಗಳು.
ಹನಿ ನೀರಾವರಿಯ ಇತಿಮಿತಿಗಳು
ಹನಿ ನೀರಾವರಿ ವ್ಯವಸ್ಥೆಯಲ್ಲಿ ಅಮೂಲ್ಯ ಸಂಪನ್ಮೂಲಗಳಾದ ನೀರು, ಶಕ್ತಿ, ಮಣ್ಣು ಮುಂತಾದವುಗಳ ಮಿತ ಹಾಗೂ ಸಮರ್ಪಕ ಬಳಕೆ, ಇಳುವರಿ ಹಾಗೂ ಗುಣಮಟ್ಟದಲ್ಲಿ ಸುಧಾರಣೆ ಕಡಿಮೆ, ಕಳೆ ಹಾವಳಿ, ಸವಳು ನೀರಿನ ಉತ್ತಮ ಬಳಕೆ ಮುಂತಾದ ಲಾಭಗಳು ದೊರೆಯುತ್ತವೆ. ಹನಿ ನೀರಾವರಿ ವ್ಯವಸ್ಥೆಗೆ ಇರುವ ಕೆಲವು ಮುಖ್ಯ ಮಿತಿಗಳೆಂದರೆ, ಕೊಳವೆಗಳು ಕಟ್ಟಿಕೊಳ್ಳುವುದು, ಅಧಿಕ ಪ್ರಾರಂಭಿಕ ವೆಚ್ಚ, ಕೊಳವೆಗಳು ಹಾನಿಗೊಳಗಾಗುವುದು ಮುಂತಾದವುಗಳು.
ಅನುಕೂಲಗಳು
1. ನೀರಿನ ಮಿತ ಬಳಕೆ
ಇತರೆ ನೀರಾವರಿ ವಿಧಾನಗಳಿಗೆ ಹೋಲಿಸಿದರೆ ಹನಿ ನೀರಾವರಿಯಲ್ಲಿ ಈ ಕೆಳ ಕಾಣಿಸಿದ ಪ್ರಮಾಣದಲ್ಲಿ ನೀರಿನ ಮಿತ ಬಳಕೆಯಾಗುತ್ತದೆ (ಕೋಷ್ಟಕ 2.1).
ನೀರಿನ ಮಿತಬಳಕೆಗೆ ಕಾರಣಗಳೆಂದರೆ
(ಅ) ಹನಿ ನೀರಾವರಿಯಲ್ಲಿ ಅತಿ ಕಡಿಮೆ ಮೇಲ್ಮೈ ಪ್ರದೇಶವು ತೇವಗೊಳ್ಳುತ್ತದೆ. ಮೇಲ್ಮೈ ಹಾಯಿಸುವ ನೀರಾವರಿಯಲ್ಲಿ, ಸಿಂಚನ ವಿಧಾನದಲ್ಲಿ ಹಾಗೂ ಹನಿ ನೀರಾವರಿ ವಿಧಾನದಲ್ಲಿ ಮಣ್ಣು ತೇವಗೊಳ್ಳುವ ರೀತಿ ಮತ್ತು ತೇವಗೊಳ್ಳುವ ಪ್ರದೇಶವನ್ನು ಚಿತ್ರ 2.1ರಲ್ಲಿ ತೋರಿಸಲಾಗಿದೆ ಹಾಗೂ ತೇವಗೊಳ್ಳುವ ಪ್ರದೇಶದ ಭಾಗವನ್ನು ಕೋಷ್ಟಕ 2.2ರಲ್ಲಿ ಕೊಡಲಾಗಿದೆ.
ಕಡಿಮೆ ಪ್ರದೇಶವು ತೇವಗೊಳ್ಳುವುದರಿಂದ, ಹನಿ ನೀರಾವರಿಯಲ್ಲಿ ಆವಿಯಾಗಿ ನಷ್ಟವಾಗುವ ನೀರಿನ ಪ್ರಮಾಣವು ಕಡಿಮೆ ಇರುತ್ತದೆ.
ಕಡಿಮೆ ಪ್ರದೇಶವು ತೇವಗೊಳ್ಳುವುದರಿಂದ, ಹನಿ ನೀರಾವರಿಯಲ್ಲಿ ಆವಿಯಾಗಿ ನಷ್ಟವಾಗುವ ನೀರಿನ ಪ್ರಮಾಣವು ಕಡಿಮೆ ಇರುತ್ತದೆ.
- ಕಡಿಮೆ ತೇವದ ಪ್ರದೇಶವಿರುವುದರಿಂದ, ಆವಿಯ ನಷ್ಟವನ್ನು ತಪ್ಪಿಸಲು ಮೇಲ್ ಹೊದಿಕೆಗಳನ್ನು ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ಬಳಸಬಹುದು.
- ಕಳೆಯ ಹಾವಳಿ ಕಡಿಮೆ ಇರುವುದರಿಂದ, ಹನಿ ನೀರಾವರಿಯಲ್ಲಿ ಕಳೆಯಿಂದಾಗುವ ನೀರಿನ ನಷ್ಟ ಕಡಿಮೆ.
- ಬೆಳೆಯ ಸಾಲುಗಳ ಮಧ್ಯಂತರ ಸ್ಥಳಗಳಲ್ಲಿರುವ ಒಣ ಮಣ್ಣಿನ ಪ್ರದೇಶವು ಮಳೆ ನೀರನ್ನು ಚೆನ್ನಾಗಿ ಹಿಡಿದಿಡುವುದರಿಂದ ಮಳೆ ನೀರಿನ ಉತ್ತಮ ಬಳಕೆಯಾಗುತ್ತದೆ.
ಚಿತ್ರ
2.1 ವಿವಿಧ
ನೀರಾವರಿ ವಿಧಾನಗಳಲ್ಲಿ ಮಣ್ಣು
ತೇವಗೊಳ್ಳುವ ರೀತಿ ಮತ್ತು ಆಕಾರಗಳು.
- ಬೆಳೆಯ ಪರಿಣಾಮಕಾರಿ ಬೇರಿನ ಆಳಕ್ಕಿಂತಲೂ ಆಳವಾಗಿ ಬಸಿದು ನಷ್ಟವಾಗುವ ನೀರಿನ ಪ್ರಮಾಣ, ಇತರೆ ವಿಧಾನಗಳಿಗೆ ಹೋಲಿಸಿದರೆ, ಹನಿ ನೀರಾವರಿಯಲ್ಲಿ ಅತಿ ಕಡಿಮೆ.
ಕ್ರ.
ಸಂ. |
ಬೆಳೆಗಳ ಗುಂಪು
|
ಒಂದು ಹೆಕ್ಟೇರ್ ಪ್ರದೇಶಕ್ಕೆ ಬೇಕಾದ ನೀರಿನ ಮೂಲ;
ಪ್ರತಿ ದಿನ ಹತ್ತು ಗಂಟೆ ಪಂಪು ನಡೆಸಲು
(ಗಂಟೆಗೆ ಗ್ಯಾಲನ್ಗಳಲ್ಲಿ)
| |||
ಪೂರ್ಣ ಹಾಯಿಸುವುದು
|
ಸುತ್ತುಪಾತಿ
ಹಾಯಿಸುವುದು * |
ಸಿಂಚನ
|
ಹನಿ
| ||
1
|
ಗುಂಪು-೧(ಅಂತರ-೭.೫ಮೀ.ನಿಂದ ೧೦.೦ಮೀ.) ತೆಂಗು, ಮಾವು, ಸಪೋಟ, ಎಣ್ಣೆ ತಾಳೆ ಇತ್ಯಾದಿ.
|
1030
|
330
|
660
|
210
|
2
|
ಗುಂಪು-೨(ಅಂತರ-೫.೦ಮೀ.ನಿಂದ ೭.೫ಮೀ.)ನಿಂಬೆ, ಸೀಬೆ, ದಾಳಿಂಬೆ ಇತ್ಯಾದಿ
|
1280
|
370
|
830
|
265
|
3
|
ಗುಂಪು-೩(ಅಂತರ-೨.೫ಮೀ. ನಿಂದ ೫.೦ಮೀ.) ಅಡಿಕೆ, ಬಾಳೆ, ದ್ರಾಕ್ಷಿ ಇತ್ಯಾದಿ
|
1930
|
1380
|
1100
|
425
|
4
|
ಗುಂಪು-೪(ಅಂತರ-೧.೨ಮೀ. ನಿಂದ ೨.೫ಮೀ.)ಎಲೆ, ಗುಲಾಬಿ, ತರಕಾರಿ, ಹೂವು ಇತ್ಯಾದಿ
|
1930
|
-
|
1100
|
610
|
5
|
ಗುಂಪು-೫(ಅಂತರ-೧.೨ಮೀ. ವರೆಗೆ)ಸಾಲು ಬೆಳೆಗಳಾದ ಹತ್ತಿ, ಕಬ್ಬು, ಹಿಪ್ಪುನೇರಳೆ, ತರಕಾರಿ, ಹೂ ಬೆಳೆಗಳು ಇತ್ಯಾದಿ
|
1930
|
-
|
1100
|
880
|
ಒಂದು ಗ್ಯಾಲನ್ ೪.೫೪ ಲೀಟರ್ಗಳು
*ನೀರು ಸಾಗಣೆಗೆ ಮುಖ್ಯ ಕೊಳವೆಗಳನ್ನು ಬಳಸಿದಾಗ
| |||||
- ಸಾಂಪ್ರದಾಯಿಕ ನೀರಾವರಿ ವಿಧಾನಗಳಲ್ಲಿ ನೀರು ಮಡಿಯ ಎಲ್ಲಾ ಕಡೆ ಒಂದೇ ಸಮನೆ ಹರಡುವಂತೆ ಮಾಡುವ ಪ್ರಯತ್ನದಲ್ಲಿ ಮೇಲ್ಮಮಣ್ಣಿನಲ್ಲಿ ಕೆಲವು ಕಡೆ ಹೆಚ್ಚು ನೀರು ಸಂಗ್ರಹವಾಗಿ, ಬಸಿಗಾಲುವೆಗಳ ಮೂಲಕ ಹೊರ ಹರಿದು ಹೋಗಿ ನಷ್ಟವಾಗುವ ರೀತಿಯಲ್ಲಿ ಹನಿ ನೀರಾವರಿಯಲ್ಲಿ ಆಗಲು ಅವಕಾಶವೇ ಇಲ್ಲ.
- ನೀರನ್ನು ನೇರವಾಗಿ ಕೊಳವೆಗಳಲ್ಲಿ ಸಾಗಿಸುವುದರಿಂದ, ಸಾಮಾನ್ಯವಾಗಿ ಆಗುವ ಶೇ. 25 ರಿಂದ 30ರಷ್ಟು ಸಾಗಾಣಿಕೆ ನಷ್ಟವನ್ನು ಹನಿ ನೀರಾವರಿಯಲ್ಲಿ ತಪ್ಪಿಸಬಹುದು.
ಕೋಷ್ಟಕ
2.2 ಹನಿ
ನೀರಾವರಿಯಲ್ಲಿ ವಿವಿಧ ಬೆಳೆಗಳಲ್ಲಿ
ಒಟ್ಟು ಜಮೀನಿನಲ್ಲಿ ಪ್ರತಿಶತ
ನೆನೆಯುವ ಪ್ರದೇಶ.
ಕ್ರ.
ಸಂ.
|
ಬೆಳೆಯ ಗುಂಪು
|
ಒಟ್ಟು ಜಮೀನಿನಲ್ಲಿ ಪ್ರತಿಶತ ನೆನೆಯುವ ಪ್ರದೇಶ
|
1
|
ತೆಂಗು, ಸಪೋಟಾ, ತಾಳೆ ಎಣ್ಣೆ ಮರ, ಮಾವು ಮುಂತಾದ ೭.೫ ರಿಂದ ಮೀ. ಅಂತರದ ಬೆಳೆಗಳು
|
8-10
|
2
|
ನಿಂಬೆ, ಸೀಬೆ, ದಾಳಿಂಬೆ, ಮುಂತಾದ ೫ ರಿಂದ ೭.೫ಮೀ. ಅಂತರದ ಬೆಳೆಗಳು
|
8-10
|
3
|
ಅಡಿಕೆ, ಬಾಳೆ, ದ್ರಾಕ್ಷಿ, ಮುಂತಾದ ೨.೫ ರಿಂದ ೫.೦ಮೀ. ಅಂತರದ ಬೆಳೆಗಳು
|
16-20
|
4
|
ವೀಳ್ಯದ ಎಲೆ, ಗುಲಾಬಿ, ಮಲ್ಲಿಗೆ, ಕೆಲವು ತರಕಾರಿ ಮತ್ತು ಹೂ ಬೆಳೆಗಳು ಇತ್ಯಾದಿ ೧.೨ಮೀ. ರಿಂದ ೨.೫ಮೀ. ಅಂತರದಲ್ಲಿ
|
20-30
|
5
|
ಹತ್ತಿರದ ಸಾಲು ಬೆಳೆಗಳಾದ ಕಬ್ಬು, ಹತ್ತಿ, ಹಿಪ್ಪುನೇರಳೆ, ತರಕಾರಿ ಹೂ ಬೆಳೆಗಳು ಇತ್ಯಾದಿ
|
50
|
ಹನಿ ನೀರಾವರಿಯಲ್ಲಿ ಆಗುವ ನೀರಿನ ಉಳಿತಾಯವು ಬೆಳೆ, ಮಣ್ಣಿನ ರೀತಿ, ವ್ಯವಸ್ಥೆಯ ವಿನ್ಯಾಸ ಮತ್ತು ನಿರ್ವಹಣೆ ಹಾಗೂ ಬೆಳೆಯ ಪರಿಸರದ ಅನೇಕ ಅಂಶಗಳನ್ನವಲAಬಿಸಿರುತ್ತದೆ. ಸಾಮಾನ್ಯವಾಗಿ ಅಧಿಕ ಅಂತರದ ಸಾಲುಗಳಲ್ಲಿ ಬೆಳೆಯುವ ತೋಟದ ಬೆಳೆಗಳಲ್ಲಿ, ತೋಟಗಳ ಪ್ರಾರಂಭಿಕ ವರ್ಷಗಳಲ್ಲಿ ಕಡಿಮೆ ವಯಸ್ಸಿನ ಬೆಳೆಗಳಿದ್ದಾಗ, ಮರಳು ಮಣ್ಣಿನ ಜಮೀನಿನಲ್ಲಿ, ತುಂಬಾ ಇಳಿಜಾರಿನಿಂದ ಕೂಡಿದ ಹಾಗೂ ಏರು ತಗ್ಗುಳ್ಳ ಜಮೀನಿನಲ್ಲಿ ಮತ್ತು ಹಾಲಿ ರೂಢಿ ಇರುವ ನೀರಾವರಿ ಪದ್ಧತಿಗಳಲ್ಲಿ ನೀರಿನ ಬಳಕೆಯ ಸಮರ್ಪಕತೆಯು ಕಡಿಮೆ ಇರುವ ಸನ್ನಿವೇಶಗಳಲ್ಲಿ ಹನಿ ನೀರಾವರಿಯಲ್ಲಿ ಇತರೆ ವಿಧಾನಗಳಿಗೆ ಹೋಲಿಸಿದರೆ ಹೆಚ್ಚಿನ ನೀರಿನ ಉಳಿತಾಯವನ್ನು ಕಾಣಬಹುದು.
ಇತರೆ ವಿಧಾನಗಳಿಗೆ ಹೋಲಿಸಿದಾಗ, ಹನಿ ನೀರಾವರಿ ವಿಧಾನದಲ್ಲಿ, ವಿವಿಧ ಬೆಳೆಗಳಲ್ಲಿ ಉಳಿತಾಯವಾಗುವ ನೀರಿನ ಪ್ರಮಾಣವನ್ನು ಕೋಷ್ಟಕ 2.3ರಲ್ಲಿ ಕೊಡಲಾಗಿದೆ. ಸಾಮಾನ್ಯವಾಗಿ ಪ್ರತಿಶತ 40 ರಿಂದ 60ರಷ್ಟು ನೀರಿನ ಉಳಿತಾಯವಾಗಿದ್ದರೆ, ಕೆಲವು ಅಧಿಕ ಅಂತರದ ಬೆಳೆಗಳಲ್ಲಿ ಪ್ರತಿಶತ 85ರವರೆಗೆ ಉಳಿತಾಯವಾಗುವುದು ಕಂಡು ಬಂದಿದೆ.
ಕೋಷ್ಟಕ 2.3 ಸಾಂಪ್ರದಾಯಿಕ ನೀರಾವರಿ ವಿಧಾನಗಳಿಗೆ ಹೋಲಿಸಿದಾಗ, ವಿವಿಧ ಬೆಳೆಗಳಲ್ಲಿ ಹನಿ ನೀರಾವರಿಯಲ್ಲಿ ನೀರಿನ ಬಳಕೆ.
ಕ್ರ. ಸಂ.
|
ಬೆಳೆ
|
ಹನಿ ನೀರಾವರಿಯಲ್ಲಿ ಬಳಕೆಯ ಸಾಪೇಕ್ಷ ಪ್ರಮಾಣ
(ಪ್ರಕಟಿತ ವರದಿಗಳ ಆಧಾರಿತ)
|
1
|
ತೆಂಗು
|
ಸುತ್ತು ನೀರಾವರಿ ವಿಧಾನದ ಪ್ರತಿಶತ ೧೨.೧೫ ರಷ್ಟು
|
2
|
ಸೇಬು
|
ಸಿಂಚನ ವಿಧಾನದ ಪ್ರತಿಶತ ೧೫ರಷ್ಟು
|
3
|
ನಿಂಬೆ
|
ಸುತ್ತು ಮಡಿ ನೆನೆಸುವ ವಿಧಾನದ ಪ್ರತಿಶತ ೧೫ ರಷ್ಟು
|
4
|
ಬಾಳೆ
|
ಸಿಂಚನ ವಿಧಾನದ ಪ್ರತಿಶತ ೫೫ ರಷ್ಟು
|
5
|
ಆಲೂಗಡ್ಡೆ
|
ಸಾಲುದಿಣ್ಣೆ ವಿಧಾನದ ಪ್ರತಿಶತ ೫೦ ರಷ್ಟು
|
6
|
ಟೊಮ್ಯಾಟೊ
|
ವಿವಿಧ ವಿಧಾನಗಳ ಮುಖ್ಯವಾಗಿ ಸಾಲು ನೀರಾವರಿ ವಿಧಾನದ ಪ್ರತಿಶತ ೨೦ ರಿಂದ ೭೦ ರಷ್ಟು
|
7
|
ಹೊಟ್ಟೆ ಮೆಣಸಿನಕಾಯಿ
|
ಸಾಲು ದಿಣ್ಣೆ ವಿಧಾನದ ಪ್ರತಿಶತ ೬೫ ರಷ್ಟು
|
8
|
ಹತ್ತಿ
|
ಸಾಲು ದಿಣ್ಣೆ ವಿಧಾನದ ಪ್ರತಿಶತ ೩೪ ರಷ್ಟು
|
9
|
ಕರಬೂಜ
|
ಸಾಲುದಿಣ್ಣೆ ವಿಧಾನದ ಪ್ರತಿಶತ ೨೫ ರಿಂದ ೪೫ ರಷ್ಟು
|
10
|
ಕಬ್ಬು
|
ಸಾಲುದಿಣ್ಣೆ ಮತ್ತು ಮೇಲ್ಮೈ ಹಾಯಿ ವಿಧಾನಗಳ ಪ್ರತಿಶತ ೫೦ ರಿಂದ ೬೦ ರಷ್ಟು
|
2. ಇಳುವರಿಯಲ್ಲಿ ಹೆಚ್ಚಳ
ಹನಿ ನೀರಾವರಿಗೊಳಪಟ್ಟ ಬೆಳೆಯ ಬೆಳವಣಿಗೆ ಮತ್ತು ಇಳುವರಿಯಲ್ಲಿ, ಈ ಕೆಳಗಿನ ಕೆಲವು ಕಾರಣಗಳಿಂದಾಗಿ, ಹೆಚ್ಚಳ ಕಂಡು ಬರುತ್ತದೆ.
(ಅ) ಹನಿ ನೀರಾವರಿಯಲ್ಲಿ ಪ್ರತಿ ದಿನವೂ ಬೆಳೆಗೆ ಬೇಕಾದ ಪ್ರಮಾಣದಲ್ಲಿ ನೀರನ್ನು ಕೊಡುವುದರಿಂದ, ತೇವಾಂಶವು ಹೆಚ್ಚಿನ ಬಿಗಿತವಿಲ್ಲದೇ ಬೆಳೆಗೆ ಒಂದೇ ಸಮನೆ ದೊರೆಯುವುದರಿಂದ, ಬೆಳೆಗೆ ಯಾವುದೇ ಕಾಲದಲ್ಲಿ ನೀರಿನ ಕೊರತೆಯು ಇಲ್ಲದಂತಾಗುತ್ತದೆ. ಆದರೆ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಎರಡು ನೀರಾವರಿಗಳ ಮಧ್ಯೆ ಕೆಲವು ದಿನಗಳು ಹೆಚ್ಚು ತೇವಾಂಶದಿಂದ ತೊಂದರೆ ಇರುತ್ತದೆ.
(ಆ) ಹೆಚ್ಚು ಬಿಗಿತವಿಲ್ಲದೇ ತೇವಾಂಶ ದೊರೆಯುವುದರಿಂದ, ಬೆಳೆಗೆ ಅಗತ್ಯವಾದ ಸಸ್ಯಪೋಷಕಾಂಶಗಳೂ ಸಹ ಉತ್ತಮವಾಗಿ ದೊರೆತು, ಗೊಬ್ಬರಗಳ ಸಮರ್ಪಕ ಬಳಕೆಯಾಗುತ್ತದೆ.
(ಇ) ನೀರಾವರಿಯ ನೀರಿನ ಮೂಲಕ, ರಸಗೊಬ್ಬರಗಳನ್ನು ಕರಗಿಸಿಕೊಂಡ ನೀರಾವರಿಯ ನೀರಿನ ಮೂಲಕ, ರಸಗೊಬ್ಬರಗಳನ್ನು ಕರಗಿಸಿಕೊಡುವ ಅವಕಾಶವೂ ಹನಿ ನೀರಾವರಿಯಲ್ಲಿದೆ. ಈ ರೀತಿ ನೀರಿನ ಮೂಲಕ ರಸಗೊಬ್ಬರಗಳನ್ನು ಕೊಟ್ಟಾಗÀ, ಪೋಷಕಾಂಶಗಳ ಉತ್ತಮ ದೊರೆಯುವಿಕೆ, ಪೋಷಕಾಂಶಗಳ ಕಡಿಮೆ ನಷ್ಟ, ಬೆಳೆಯ ಅವಶ್ಯಕತೆಗನುಗುಣವಾಗಿ ವಿವಿಧ ಹಂತಗಳಲ್ಲಿ ರಸಗೊಬ್ಬರಗಳನ್ನು ಕೊಡಲು ಇರುವ ಅವಕಾಶ, ಬೇರಿಗೆ ಹಾನಿಯಾಗದಂತೆ ಗೊಬ್ಬರ ಕೊಡಲು ಇರುವ ಅವಕಾಶ ಮುಂತಾದವುಗಳಿAದ ರಸಗೊಬ್ಬರಗಳ ಬಳಕೆಯ ಸಮರ್ಪಕತೆ ಹೆಚ್ಚುತ್ತದೆ.
(ಈ) ಹನಿ ನೀರಾವರಿಯು ಬೇರಿನ ಬೆಳವಣಿಗೆಗೆ ಅವಶ್ಯಕವಾದ ಹದವಾದ ತೇವಾಂಶ ಮತ್ತು ಮಣ್ಣಿನ ವಾತಾವರಣ ಒದಗಿಸಿಕೊಡುತ್ತದೆ. ಮಣ್ಣಿನಲ್ಲಿ ಗಾಳಿಯಾಡುವಿಕೆ ಉತ್ತಮವಾಗಿರುವುದಲ್ಲದೇ ಮೇಲ್ಪದರದ ಮಣ್ಣು ಹೆಪ್ಪಗಟ್ಟುವ ತೊಂದರೆಯೂ ಹನಿ ನೀರಾವರಿಯಲ್ಲಿ ಇರುವುದಿಲ್ಲ.
(ಉ) ಸಿಂಚನ ನೀರಾವರಿಯಲ್ಲಿ ಕಂಡುಬರುವAತೆ, ಕೆಲವು ಬೆಳೆಗಳ ಎಲೆಯ ಮೇಲೆ ನೀರು ಬೀಳುವುದರಿಂದ ಉಂಟಾಗುವ ಎಲೆಗಳ ರೋಗಗಳು ಮತ್ತು ಅವುಗಳ ನಿವಾರಣೆಗೆ ಸಿಂಪಡಿಸಿದ ರಾಸಾಯನಿಕ ವಸ್ತುಗಳು ತೊಳೆದು ಹೋಗುವುದು, ಮುಂತಾದ ತೊಂದರೆಗಳು ಹನಿ ನೀರಾವರಿಯಲ್ಲಿ ಇರುವುದಿಲ್ಲ.
(ಉ) ಸಿಂಚನ ನೀರಾವರಿಯಲ್ಲಿ ಕಂಡುಬರುವAತೆ, ಕೆಲವು ಬೆಳೆಗಳ ಎಲೆಯ ಮೇಲೆ ನೀರು ಬೀಳುವುದರಿಂದ ಉಂಟಾಗುವ ಎಲೆಗಳ ರೋಗಗಳು ಮತ್ತು ಅವುಗಳ ನಿವಾರಣೆಗೆ ಸಿಂಪಡಿಸಿದ ರಾಸಾಯನಿಕ ವಸ್ತುಗಳು ತೊಳೆದು ಹೋಗುವುದು, ಮುಂತಾದ ತೊಂದರೆಗಳು ಹನಿ ನೀರಾವರಿಯಲ್ಲಿ ಇರುವುದಿಲ್ಲ.
ಸಾಂಪ್ರದಾಯಿಕ ವಿಧಾನಗಳಿಗೆ ಹನಿ ನೀರಾವರಿಯಲ್ಲಿ ದೊರೆಯುವ ಇಳುವರಿಯ ಹೆಚ್ಚಳದ ವರದಿಗಳನ್ನು ಪರಾಮರ್ಶಿಸಿ, ಕೋಷ್ಟಕ 2.4ರಲ್ಲಿ ಕೊಡಲಾಗಿದೆ. ತೆಂಗು, ಅಡಿಕೆ, ಸೇಬು, ಕೋಕೋ, ದ್ರಾಕ್ಷಿ, ಪೀಚ್, ಬಾಳೆ, ಕಬ್ಬು, ಹತ್ತಿ, ಆಲೂಗಡ್ಡೆ, ಟೊಮ್ಯಾಟೊ, ಮೆಣಸಿನಕಾಯಿ, ಹೊಟ್ಟೆ ಮೆಣಸಿನಕಾಯಿ, ನೆಲಗಡಲೆ, ಕರಬೂಜ, ಕಲ್ಲಂಗಡಿ, ಈರುಳ್ಳಿ ಮುಂತಾದ ಅನೇಕ ಬೆಳೆಗಳಲ್ಲಿ ಹನಿ ನೀರಾವರಿಯಿಂದ ಇಳುವರಿ ಹೆಚ್ಚಳ ವರದಿಯಾಗಿದೆ.
3. ಬೆಳೆ ಉತ್ಪನ್ನಗಳ ಸುಧಾರಿತ ಗುಣಮಟ್ಟ
ನೀರಿನ ದೊರೆಯುವಿಕೆಯಲ್ಲಿ ವ್ಯಾತ್ಯಾಸವಾಗದಿರುವುದು, ಪೋಷಕಾಂಶಗಳು ಉತ್ತಮವಾಗಿ ದೊರೆಯುವುದು, ಕೆಲವು ವಿಶಿಷ್ಟ ಪೋಷಕಾಂಶಗಳ ದೊರೆಯುವಿಕೆ ಹೆಚ್ಚಾಗುವುದು, ಗಿಡಗಳ ಉತ್ತಮ ಬೆಳವಣಿಗೆ ಮುಂತಾದ ಕಾರಣಗಳಿಂದಾಗಿ, ಹನಿ ನೀರಾವರಿಯಲ್ಲಿ ಬೆಳೆ ಉತ್ಪನ್ನಗಳ ಗುಣಮಟ್ಟದಲ್ಲಿ ಸುಧಾರಣೆಯಾಗಿರುವುದು ಅನೇಕ ಬೆಳೆಗಳಲ್ಲಿ ವರದಿಯಾಗಿದೆ. ಗಾತ್ರದಲ್ಲಿ ಹೆಚ್ಚಳ, ಹೆಚ್ಚಿದ ಸಕ್ಕರೆ ಅಂಶ, ಹೆಚ್ಚು ಆಕರ್ಷಕ ಹಣ್ಣುಗಳು ಮುಂತಾದವುಗಳು ವರದಿಯಾಗಿವೆ. ಆಲೂಗಡ್ಡೆ, ಬಾಳೆ, ಕಬ್ಬು, ಟೊಮ್ಯಾಟೊ, ಸೇಬು ಮುಂತಾದ ಬೆಳೆಗಳಲ್ಲಿ ಉತ್ಪನ್ನಗಳ ಗುಣಮಟ್ಟ ಹೆಚ್ಚಾಗಿರುವುದು.
4. ನೀರಿನ ಸಮರ್ಪಕ ಬಳಕೆ
ಪ್ರತಿ ಗಿಡಕ್ಕೂ ಕೊಡುವ ನೀರಿನ ಮೇಲೆ ಉತ್ತಮ ಹತೋಟಿ ಇರುವುದರಿಂದ ನೀರಿನ ಹಂಚಿಕೆಯಲ್ಲಿ ಹೆಚ್ಚಿನ ಸಮತೆಯನ್ನು ತರಲು ಸಾಧ್ಯವಿದೆ. ಇದರಿಂದ ಹನಿ ನೀರಾವರಿ ಯೋಜನೆಗಳಲ್ಲಿ ನೀರಿನ ಹಂಚಿಕೆಯ ಸಮರ್ಪಕತೆಯನ್ನು ಹೆಚ್ಚಿಸಬಹುದು.
ನೀರಿನ ಹಂಚಿಕೆಯಲ್ಲಿ ಹೆಚ್ಚಿನ ಸಮತೆಯನ್ನು ಸಾದಿಸಿ, ಅವಶ್ಯಕ ಪ್ರಮಾಣದಲ್ಲಿ ಮಾತ್ರ ನೀರು ಕೊಟ್ಟಾಗ, ನೀರಿನ ಅನವಶ್ಯಕ ನಷ್ಟವು ತಪ್ಪುವುದರಿಂದ ಮತ್ತು ಸದಾ ಹದವಾದ ತೇವಾಂಶವನ್ನು ಕಾಪಾಡಿಕೊಳ್ಳುವುದರಿಂದ, ಕಡಿಮೆ ನೀರಿನಲ್ಲಿ ಸಹ ಬೆಳೆಯ ಬೆಳವಣಿಗೆ ಮತ್ತು ಇಳುವರಿ ಹೆಚ್ಚಿ, ನೀರಿನ ಬಳಕೆಯ ಸಮರ್ಪಕತೆಯು ಹೆಚ್ಚಾಗುತ್ತದೆ.
ಇತರೆ ವಿಧಾನಗಳಿಗೆ ಹೋಲಿಸಿದರೆ, ಹನಿ ನೀರಾವರಿಯಲ್ಲಿ ನೀರಿನ ಬಳಕೆ ಸಮರ್ಪಕತೆಯು, ಪ್ರತಿ ಹೆಕ್ಟೇರ್ ಮಿಲಿ ಮೀಟರ್ ನೀರಿಗೆ ಬಂದ ಇಳುವರಿಯ ಮಾನದಲ್ಲಿ ಅಳೆದಾಗ, ಆಲೂಗಡ್ಡೆ, ಟೊಮ್ಯಾಟೊ, ಮೆಣಸಿನಕಾಯಿ, ಕಬ್ಬು, ಸಕ್ಕರೆಬೀಟ್, ಕಲ್ಲಂಗಡಿ, ಕರಬೂಜ, ನೆಲಗಡಲೆ, ಈರುಳ್ಳಿ ಮುಂತಾದ ಬೆಳೆಗಳಲ್ಲಿ ಹೆಚ್ಚಾಗಿರುವುದು ವರದಿಯಾಗಿದೆ.
ಕೋಷ್ಟಕ 2.4: ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಹನಿ ನೀರಾವರಿಯಲ್ಲಿ ಇಳುವರಿಯಲ್ಲಿ ಸಾಪೇಕ್ಷ ಹೆಚ್ಚಳ
(ಪ್ರಕಟಿತ ವರದಿಗಳ ಆಧಾರಿತ)
ಕ್ರ. ಸಂ.
|
ಬೆಳೆ
|
ಹನಿ ನೀರಾವರಿಯಲ್ಲಿ ಇಳುವರಿಯಲ್ಲಿನ ಸಾಪೇಕ್ಷ ಹೆಚ್ಚಳ
|
1
|
ತೆಂಗು
|
ಸುತ್ತು ಮಡಿ ವಿಧಾನಕ್ಕಿಂತ ಪ್ರತಿಶತ ೧೮ ರಿಂದ ೪೫ ರಷ್ಟು
|
2
|
ಅಡಿಕೆ
|
ಮೇಲ್ಮೈ ನೀರು ಹಾಯಿಸುವುದಕ್ಕಿಂತ ಪ್ರತಿಶತ ೪೫ ರಷ್ಟು
|
3
|
ಕಬ್ಬು
|
ಸಾಲುದಿಣ್ಣೆ ವಿಧಾನಕ್ಕಿಂತ ಪ್ರತಿಶತ ೨೦ ರಿಂದ ೨೮ ರಷ್ಟು
|
4
|
ಹತ್ತಿ
|
ಸಿಂಚನ ವಿಧಾನಕ್ಕಿಂತ ಪ್ರತಿಶತ ೨೧ ರಷ್ಟು
|
5
|
ನೆಲಗಡಲೆ
|
ಬದುಪಟ್ಟಿ ಹಾಯಿ ವಿಧಾನಕ್ಕಿಂತ ಪ್ರತಿಶತ ೬೬ ರಷ್ಟು
|
6
|
ಕಲ್ಲಂಗಡಿ
|
ಸಾಲುದಿಣ್ಣೆ ವಿಧಾನಕ್ಕಿಂತ ಪ್ರತಿಶತ ೧೬ ರಿಂದ ೩೬ ರಷ್ಟು
|
7
|
ಆಲೂಗಡ್ಡೆ
|
ಸಾಲುದಿಣ್ಣೆ ವಿಧಾನಕ್ಕಿಂತ ಪ್ರತಿಶತ ೪೬ ರಷ್ಟು
|
8
|
ಟೊಮ್ಯಾಟೊ
|
ಇತರೆ ವಿಧಾನಗಳಿಗಿಂತ ಪ್ರತಿಶತ ೨೫ ರಿಂದ ೯೫ ರಷ್ಟು
|
9
|
ಹೊಟ್ಟೆ ಮೆಣಸಿನಕಾಯಿ
|
ಸಿಂಚನ ವಿಧಾನಕ್ಕಿಂತ ಪ್ರತಿಶತ ೨೬ ರಷ್ಟು
|
10
|
ಮೆಣಸಿನಕಾಯಿ (ಹಸಿ)
|
ಸಾಲುದಿಣ್ಣೆ ವಿಧಾನಕ್ಕಿಂತ ಪ್ರತಿಶತ ೩೪ ರಷ್ಟು
|
ಈ ಕೆಳಗಿನ ಕೆಲವು ಕಾರಣಗಳಿಂದಾಗಿ ಹನಿ ನೀರಾವರಿಯಲ್ಲಿ ಕಳೆ ಹಾವಳಿಯು ಕಡಿಮೆ ಇರುತ್ತದೆ.
(ಅ) ಬೆಳೆಯು ಸಾಲಿನ ಮಧ್ಯಂತರದ ಸ್ಥಳವು ನೆನೆಯುವುದಿಲ್ಲವಾದ್ದರಿಂದ ಮಳೆಗಾಲ ಬಿಟ್ಟು ಇತರೆ ಕಾಲಗಳಲ್ಲಿ, ಕಳೆ ಬೆಳೆಯಲು ಇರುವ ಅವಕಾಶ ಕಡಿಮೆ.
(ಆ) ನೆನೆಯುವ ಅಲ್ಪ ಪ್ರದೇಶವೂ ಸಹ ಗಿಡದ ನೆರಳಿನಲ್ಲಿರುವುದರಿಂದ, ಕಳೆಯ ಬೆಳವಣಿಗೆ ಕುಂಠಿತವಾಗುತ್ತದೆ.
(ಇ) ನೆನೆಯುವ ಪ್ರದೇಶವು ಕಡಿಮೆ ಇರುವುದರಿಂದ, ಅವುಗಳ ಮೇಲೆ ಸ್ವಲ್ಪ ವೆಚ್ಚದಲ್ಲಿ ಮೇಲು ಹೊದಿಕೆಯನ್ನು ಹೊದಿಸಿ ಕಳೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
(ಈ) ನೀರಿನ ಮೂಲಕ ಅಥವಾ ನೇರವಾಗಿ ಕಳೆನಾಶಕಗಳನ್ನು ನೆನೆದಿರುವ ಪ್ರದೇಶಕ್ಕೆ ಅಲ್ಪ ವೆಚ್ಚದಲ್ಲಿ ಕೊಡಬಹುದಾದ್ದರಿಂದ ಕಳೆನಿಯಂತ್ರಣ ಸುಲಭವಾಗುತ್ತದೆ.
(ಉ) ನೀರು, ತೆರೆದ ಕಳೆಗಳಿಂದಾವೃತವಾದ ಕಾಲುವೆಗಳಲ್ಲಿ ಹರಿಯದಿರುವುದರಿಂದ ಮತ್ತು ನೀರನ್ನು ಉತ್ತಮವಾಗಿ ಶೋಧಿಸುವುದರಿಂದ, ಕಳೆ ಬೀಜಗಳು ನೀರಿನೊಡನೆ ಹರಡುವ ಸಾಧ್ಯತೆಗಳು ಕಡಿಮೆ.
6. ಸವಳು ನೀರಿನ ಬಳಕೆ
ಸವಳು ನೀರನ್ನು ನೀರಾವರಿಗೆ ಬಳಸಬೇಕಾದಾಗ, ಇತರೆ ಯಾವುದೇ ವಿಧಾನಕ್ಕಿಂತಲೂ ಹನಿ ನೀರಾವರಿ ಉತ್ತಮ. ಹನಿ ನೀರಾವರಿ ವಿಧಾನದಲ್ಲಿ ಬೆಳೆಯ ಮೇಲೆ, ಸವಳು ನೀರಿನಲ್ಲಿನ ಲವಣಾಂಶಗಳ ದುಷ್ಪರಿಣಾಮಗಳು ಕಡಿಮೆ ಇರುತ್ತದೆ. ಹನಿ ಸಾಧನದಿಂದ ನೀರು ಬೀಳುವ ಬಿಂದುವಿನಿAದ ನೆನೆಯುವ ಮಣ್ಣಿನ ವಲಯದ ಪರಿಧಿಯ ಕಡೆಗೆ ನೀರು ಮತ್ತು ಲವಣಗಳು ಚಲಿಸಿ, ಹೆಚ್ಚಿನ ಲವಣಗಳು ತೇವ ವಲಯದ ಪರಿಧಿಯಲ್ಲಿ ಸಾಂದ್ರತೆಗೊಳ್ಳುತ್ತವೆ(ಚಿತ್ರ 2.2).
ಚಿತ್ರ 2.2 ಹನಿ ನೀರಾವರಿಯ ತೇವ ವಲಯದಲ್ಲಿ ಲವಣಾಂಶಗಳ ಪಸರಿಸುವಿಕೆ.
ಈ ಕಾರಣದಿಂದ ಮತ್ತು ತೇವ ವಲಯದ ಇತರೆ ಭಾಗದಲ್ಲಿ ಕಡಿಮೆ ಲವಣಾಂಶ ಮತ್ತು ಉತ್ತಮ ತೇವಾಂಶವಿರುವುದರಿAದ, ತೇವವಲಯದಲ್ಲಿರುವ ಬೇರಿನ ಮೇಲೆ ಲವಣಗಳ ದುಷ್ಪರಿಣಾಮಗಳು ಕಡಿಮೆ. ಬೆಳೆಯ ಪರಿಣಾಮಕಾರೀ ಬೇರಿನ ವಲಯದ ಹೆಚ್ಚಿನ ಭಾಗವು ತೇವವಲಯದಲ್ಲಿ ಬರುವಂತೆ ಹನಿ ಸಾಧನಗಳನ್ನೂ, ನೀರು ಹೊರ ಹೊಮ್ಮುವ ಪ್ರಮಾಣವನ್ನೂ ಎಚ್ಚರಿಕೆಯಿಂದ ಹೊಂದಿಸಿದರೆ, ಲವಣಗಳ ದುಷ್ಪರಿಣಾಮಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.
7. ಇತರೆ ಕೃಷಿ ಸಂಪನ್ಮೂಲಗಳ ಬಳಕೆ
ಹನಿ ನೀರಾವರಿಯಲ್ಲಿ ನೀರಿನ ಬಳಕೆ ಮಾತ್ರವಲ್ಲದೇ ಇತರೆ ಕೃಷಿ ಸಂಪನ್ಮೂಲಗಳಾದ ದೈಹಿಕ ಶ್ರಮ, ಶಕ್ತಿ, ಜಮೀನು ಮುಂತಾದವುಗಳ ಬಳಕೆಯಲ್ಲಿ ಸಹ ಗಣನೀಯ ಉಳಿತಾಯವಾಗುತ್ತದೆ.
(ಅ) ದೈಹಿಕ ಶ್ರಮ: ನೀರು ಸಾಗಣೆ ಮತ್ತು ನೀರುಣಿಸುವ ವಿಷಯದಲ್ಲಿ ಹನಿ ನೀರಾವರಿ ಹೆಚ್ಚು ಕಡಿಮೆ ಸ್ವಯಂಚಾಲಿತವಾಗಿರುವುದರಿAದ ವ್ಯವಸ್ಥೆಯನ್ನು ದಿನನಿತ್ಯ ಪ್ರಾರಂಭಿಸಲು, ನಿಲ್ಲಿಸಲು, ವ್ಯವಸ್ಥೆಯ ಮೇಲ್ವಿಚಾರಣೆ ಮಾಡಲು ಮತ್ತು ಹಳೆಯ, ಹಾಳಾದ ಭಾಗಗಳನ್ನು, ತೆಗೆದು ಹೊಸದನ್ನು ಜೋಡಿಸಲು ಮಾತ್ರ ಶ್ರಮವಹಿಸಬೇಕಾಗುತ್ತದೆ. ಇದರಿಂದ ಕೂಲಿ ಆಳಿನಲ್ಲಿ ಗಣನೀಯ ಉಳಿತಾಯವಾಗುತ್ತದೆ. ಈಚೆಗೆ ವ್ಯವಸ್ಥೆಯನ್ನು ಪ್ರತಿನಿತ್ಯವೂ ಗೊತ್ತಾದ ವೇಳೆಯಲ್ಲಿ ಪ್ರಾರಂಭಿಸಲು ಮತ್ತು ನಿಲ್ಲಿಸಲು ಪೂರ್ಣ ಸ್ವಯಂಚಾಲಿತ ವ್ಯವಸ್ಥೆಗಳು ಇರುವುದಿಂದ ಕೂಲಿಯ ಆಳಿನ ಬಳಕೆ ಇನ್ನೂ ಕಡಿಮೆ ಮಾಡಲು ಅವಕಾಶವಿದೆ.
ಬೆಳೆಯ ಉತ್ತಮ ಬೆಳವಣಿಗೆಗೆ ಮತ್ತು ಬೆಳೆಯ ರಕ್ಷಣೆಗೆ ಅವಶ್ಯಕವಾದ ರಾಸಾಯನಿಕಗಳಾದ ರಸಗೊಬ್ಬರಗಳು, ಕಳೆನಾಶಕಗಳು, ಕೀಟನಾಶಕಗಳು, ಜಂತುಹುಳು ನಾಶಕಗಳು ಮತ್ತು ಸಸ್ಯ ಬೆಳವಣಿಗೆ ನಿಯಂತ್ರಕ ರಾಸಾಯನಿಕಗಳನ್ನು ಹನಿ ನೀರಾವರಿಯಲ್ಲಿ ನೀರಿನೊಡನೆ ಕೊಡಲು ಸಾಧ್ಯವಿರುವುದರಿಂದ ಅವುಗಳನ್ನು ಬೇರೆ ವಿಧಾನಗಳಿಂದ ಮಣ್ಣಿಗೆ ಅಥವಾ ಬೆಳೆಗೆ ಕೊಡಲು ಆಗುವ ದೈಹಿಕ ಶ್ರಮದ ಉಳಿತಾಯವಾಗುತ್ತದೆ. ಹನಿ ನೀರಾವರಿಯಲ್ಲಿ ಕಳೆಯ ಹಾವಳಿ ಕಡಿಮೆ ಇರುವುದರಿಂದ, ಕಳೆ ತೆಗೆಯಲು ಬೇಕಾಗುವ ದೈಹಿಕ ಶ್ರಮವೂ ಉಳಿಯುತ್ತದೆ.
ಸಾಂಪ್ರದಾಯಿಕ ಪದ್ಧತಿಗಳಲ್ಲಿ ನೀರು ಹಾಯಿಸಿದ ನಂತರ ಮೇಲ್ಮೈಮಣ್ಣಿನ ಪದರವು ಹೆಪ್ಪುಗಟ್ಟುವುದರಿಂದ, ಉತ್ತಮ ಬೆಳವಣಿಗೆ ಪಡೆಯಲು, ಮಣ್ಣಿನ ಹೆಪ್ಪನ್ನು ಒಡೆಯಲು ಮೇಲಿಂದ ಮೇಲೆ, ಕೆಲವು ಸಂದರ್ಭಗಳಲ್ಲಿ ಪ್ರತಿ ನೀರಾವರಿಯ ನಂತರ ಬೇಸಾಯ ಅಥವಾ ಕೈ ಕೆಲಸ ಮಾಡಬೇಕಾಗುತ್ತದೆ. ಹನಿ ನೀರಾವರಿಯಲ್ಲಿ ಮಣ್ಣು ಹೆಪ್ಪುಗಟ್ಟುವ ತೊಂದರೆ ಇಲ್ಲದಿರುವುದರಿಂದ, ಇದಕ್ಕೆ ಬೇಕಾದ ದೈಹಿಕ ಶ್ರಮವು ಉಳಿಯುತ್ತದೆ.
(ಆ) ಶಕ್ತಿ: ಹನಿ ನೀರಾವರಿಯಲ್ಲಿ ಬೇಕಾಗುವ ನೀರಿನ ಪ್ರಮಾಣವು ಬಹಳ ಕಡಿಮೆ ಇರುವುದರಿಂದ, ನೀರೆತ್ತಲು ಬಳಸುವ ಶಕ್ತಿಯೂ ಸಹ ಬಹಳ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ಉದಾಹರಣೆಗೆ, ವಿವಿಧ ಬೆಳೆಗಳಲ್ಲಿ, ವಿವಿಧ ನೀರಾವರಿ ವಿಧಾನಗಳಲ್ಲಿ, ದಿನಕ್ಕೆ ಹತ್ತು ಗಂಟೆ ಮತ್ತು ವರ್ಷಕ್ಕೆ 250 ದಿನಗಳು, ಸುಮಾರು 60 ಮೀ. ಒತ್ತಡ ಕೊಡುವಂತೆ ಪಂಪು ಮಾಡಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಲು ಬಳಕೆಯಾಗುವ ವಿದ್ಯುತ್ ಯುನಿಟ್ಗಳ ಸಂಖ್ಯೆಯನ್ನು ಕೋಷ್ಟಕ 2.5 ರಲ್ಲಿ ಕೊಡಲಾಗಿದೆ.
(ಇ) ಜಮೀನು: ಹನಿ ನೀರಾವರಿ ವಿಧಾನದಲ್ಲಿ ತೆರೆದ ಕಾಲುವೆಗಳ ಮತ್ತು ತೆರೆದ ಬಸಿಕಾಲುವೆಗಳ ಅವಶ್ಯಕತೆ ಇಲ್ಲದಿರುವುದರಿಂದ, ಪ್ರತಿಶತ ಸುಮಾರು 5 ರಿಂದ 15ರಷ್ಟು ಹೆಚ್ಚು ಜಮೀನು ಬೆಳೆ ಉತ್ಪಾದನೆಗೆ ದೊರೆಯುತ್ತದೆ.
8. ಹೆಚ್ಚು ಇಳಿಜಾರಿನ ಹಾಗೂ ಏರು ತಗ್ಗಿನ ಜಮೀನಿಗೆ ಸೂಕ್ತ ವಿಧಾನ
ಕೋಷ್ಟಕ 2.5: ಒಂದು ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು, ಬಳಸುವ ವಿದ್ಯುತ್ ಯುನಿಟ್ಗಳ ಸಂಖ್ಯೆ (ದಿನಕ್ಕೆ 10 ಗಂಟೆ, ವರ್ಷಕ್ಕೆ 250 ದಿನ ಪಂಪು ಓಡಿಸಲು, 60ಮೀ. ಎತ್ತರಕ್ಕೆ ನೀರೆತ್ತಲು ಬೇಕಾಗುವ ವಿದ್ಯುತ್ ಯುನಿಟ್ಗಳು)
ಕ್ರ. ಸಂ.
|
ಬೆಳೆಗಳ ಗುಂಪು
|
ಪೂರ್ಣ ಹಾಯಿಸುವುದು
|
ಸುತ್ತುಪಾತಿ ಹಾಯಿಸುವುದು*
|
ಸಿಂಚನ
|
ಹನಿ
|
1
|
ಗುಂಪು-೧(ಅಂತರ-೭.೫ಮೀ. ನಿಂದ ೧೦.೦ ಮೀ.) ತೆಂಗು, ಮಾವು, ಸಪೋಟ, ಎಣ್ಣೆ ತಾಳೆ ಇತ್ಯಾದಿ.
|
3840
|
1230
|
2460
|
880
|
2
|
ಗುಂಪು-೨(ಅಂತರ-೫.೦ಮೀ. ನಿಂದ ೭.೫ ಮೀ.) ನಿಂಬೆ, ಸೀಬೆ, ದಾಳಿಂಬೆ ಇತ್ಯಾದಿ.
|
4770
|
1380
|
3100
|
990
|
3
|
ಗುಂಪು-೩(ಅಂತರ-೨.೫ಮೀ. ನಿಂದ ೫.೦ ಮೀ.) ಅಡಿಕೆ, ಬಾಳೆ, ದ್ರಾಕ್ಷಿ ಇತ್ಯಾದಿ
|
7200
|
5150
|
4100
|
5190
|
4
|
ಗುಂಪು-೪(ಅಂತರ-೧.೨ಮೀ. ನಿಂದ ೨.೫ ಮೀ.) ಎಲೆ, ಗುಲಾಬಿ, ತರಕಾರಿ, ಹೂವು ಇತ್ಯಾದಿ
|
7200
|
-
|
4100
|
2280
|
5
|
ಗುಂಪು-೫(ಅಂತರ-೧.೨ಮೀ. ವರೆಗೆ) ಸಾಲು ಬೆಳೆಗಳಾದ ಹತ್ತಿ, ಕಬ್ಬು, ಹಿಪ್ಪುನೇರಳೆ, ತರಕಾರಿ, ಹೂ ಬೆಳೆಗಳು ಇತ್ಯಾದಿ
|
7200
|
-
|
4100
|
3280
|
*ನೀರು ಸಾಗಣೆಗೆ ಮುಖ್ಯ ಕೊಳವೆಗಳನ್ನು ಬಳಸಿದಾಗ
| |||||
ಹನಿ ನೀರಾವರಿಯನ್ನು ಅಳವಡಿಸಲು ನೆಲವನ್ನು ಸಮಮಟ್ಟ ಮಾಡಬೇಕಾದ ಅವಶ್ಯಕತೆ ಇಲ್ಲದ ಕಾರಣ, ಅಧಿಕ ಇಳಿಜಾರು ಹಾಗೂ ಏರುತಗ್ಗು ಇರುವ ಜಮೀನಿನಲ್ಲಿ ಅಧಿಕ ಹಣ, ಕಾಲ, ಶ್ರಮ ವೆಚ್ಚ ಮಾಡಿ ಮಟ್ಟ ಮಾಡದೇ ಹಾಗೆಯೇ ಹನಿ ನೀರಾವರಿ ವಿಧಾನವನ್ನು ಅಳವಡಿಸಿಕೊಳ್ಳಬಹುದು.
9. ನಿರುಪಯುಕ್ತ ಜಮೀನಿನಲ್ಲೂ ಲಾಭದಾಯಕ
ಮಣ್ಣಿನ ತೇವ ಸಂಗ್ರಹಣಾ ಹಾಗೂ ಪೋಷಕಾಂಶ ಸಂಗ್ರಹಣಾ ಸಾಮರ್ಥ್ಯಗಳನ್ನು ಹನಿ ನೀರಾವರಿ ವಿಧಾನದಲ್ಲಿ ಬಳಸಿಕೊಳ್ಳದೇ ಇರುವುದರಿಂದ ಕಡಿಮೆ ಆಳದ ಹೆಚ್ಚು ಮರಳಿನಿಂದ ಕೂಡಿದ, ಅತಿಯಾಗಿ ಮಣ್ಣು ಕೊಚ್ಚಣೆಯಾಗಿರುವ ನಿರುಪಯುಕ್ತ ಜಮೀನುಗಳಲ್ಲಿಯೂ ಸಹ ಹನಿ ನೀರಾವರಿಯನ್ನು ಲಾಭದಾಯಕವಾಗಿ ಅಳವಡಿಸಿಕೊಳ್ಳಬಹುದು.
10. ಸರಾಗ ಬೇಸಾಯ
ಇತರೆ ವಿಧಾನಗಳಲ್ಲಿ ನೀರು ಕೊಟ್ಟ ನಂತರ, ಬೇಸಾಯ ಮಾಡಲು ಮಣ್ಣು ಹದ ಬರುವವರೆಗೂ ಕಾಯಬೇಕಾದರೆ, ಹನಿ ನೀರಾವರಿಯಲ್ಲಿ, ಆಳವಾಗಿ ಹುಗಿದ ಕೊಳವೆಗಳಲ್ಲಿ ನೀರು ಸಾಗಿಸುವುದರಿಂದ, ನೀರು ಕೊಡುತ್ತಿರುವಾಗಲೂ ಸಹ ಯಾವುದೇ ಅಡಚಣೆ ಇಲ್ಲದೆ ಬೇಸಾಯ ಕಾರ್ಯಗಳನ್ನು ನಡೆಸಬಹುದು.
11. ಸಮಯದ ಅನಿರ್ಬಂಧತೆ
ನೀರುಣಿಸುವ ಸಮಯದಲ್ಲಿ ಯಾವುದೇ ದೈಹಿಕ ಶ್ರಮ ಅಗತ್ಯವಿಲ್ಲದುದರಿಂದ ದಿನ ರಾತ್ರಿಯ ಯಾವುದೇ ವೇಳೆಯಲ್ಲಿ ಪರಿಣಾಮಕಾರಿಯಾಗಿ ನೀರು ಕೊಡಬಹುದು. ಸಿಂಚನ ನೀರಾವರಿಯಲ್ಲಿ ಆಗುವಂತೆ, ವೇಗವಾಗಿ ಗಾಳಿಬೀಸಿದಾಗ ನೀರುಣಿಸಲು ಅಡಚಣೆಯಾಗುವುದಿಲ್ಲ.
12. ಜಮೀನು ಹಾಳಾಗದು
ಹನಿ ನೀರಾವರಿಯಲ್ಲಿ ಬಹಳ ಕಡಿಮೆ ನೀರನ್ನು ಬಳಸುವುದರಿಂದ, ಇತರೆ ನೀರಾವರಿ ವಿಧಾನಗಳಲ್ಲಿ ಸಾಮಾನ್ಯವಾಗಿ ಆಗುವಂತೆ, ಅನಿಯಂತ್ರಿತ/ಎಚ್ಚರಿಕೆ ಇಲ್ಲದ ನೀರಾವರಿಯಿಂದ ಜೌಗು, ಸವಳು ಮುಂತಾದ ತೊಂದರೆಗಳು ಕಾಣಿಸಿಕೊಳ್ಳಲು ಅವಕಾಶಗಳು ಇಲ್ಲ.
13. ಸಹಜ ಕೃಷಿಗೆ ಬೆಂಬಲ
ಅವಶ್ಯಕ ಪ್ರಮಾಣದ ನೀರು ಮತ್ತು ಪೋಷಕಾಂಶಗಳನ್ನು ಗಿಡದ ಬುಡಕ್ಕೆ ನೇರವಾಗಿ ಕೊಳವೆಗಳಲ್ಲಿ ಕೊಡುವ ವ್ಯವಸ್ಥೆ ಇರುವ ಹನಿ ನೀರಾವರಿಯಲ್ಲಿ, ಉಳುಮೆ ಮಾಡದೆ, ಸಹಜ ಮಣ್ಣಿನ ಪರಿಸರವನ್ನುಳಿಸಿಕೊಂಡು, ಸಹಜ ಕೃಷಿ ಪದ್ಧತಿಯಲ್ಲಿ ಬೆಳೆ ತೆಗೆಯುವುದು ಸಾಧ್ಯ.
ಅನಾನುಕೂಲಗಳು
1. ಕೊಳವೆಗಳು ಕಟ್ಟಿಕೊಳ್ಳುವುದರಿಂದ ನೀರಿನ ಹರಿವಿಗೆ ಅಡಚಣೆ
ಕೊಳವೆಗಳು ಕಲ್ಮಶಗಳಿಂದ ಕಟ್ಟಿಕೊಂಡು ನೀರಿನ ಹರಿಯುವಿಕೆಗೆ ಮಾಡುವ ಅಡಚಣೆಯು, ಜಗತ್ತಿನಾದ್ಯಂತ, ಹನಿ ನೀರಾವರಿ ವ್ಯವಸ್ಥೆಗಳಲ್ಲಿ ಇರುವ ಅತಿ ದೊಡ್ಡ ತೊಂದರೆ. ನೀರಿನ ಗುಣಮಟ್ಟಕ್ಕನುಗುಣವಾಗಿ, ಹನಿ ಸಾಧನಗಳ ವಿಶೇಷತೆಗಳಿಗನುಸಾರ, ನೀರನ್ನು ಶೋಧಿಸುವುದರಿಂದ ಮತ್ತು ಕಾಲಕಾಲಕ್ಕೆ ಸೂಕ್ತ ಮೇಲ್ವಿಚಾರಣೆಗೆ ಏರ್ಪಾಡುಗಳನ್ನು ಮಾಡುವುದರಿಂದ, ಈ ತೊಂದರೆಯನ್ನು ಕಡಿಮೆಗೊಳಿಸಬಹುದು.
2. ಕೊಳವೆಗಳಿಗೆ ಹಾನಿ
ಮೂಷಿಕ ವರ್ಗದ ಪ್ರಾಣಿಗಳಿಂದ, ಕೆಲವು ಕಾಡು ಪ್ರಾಣಿಗಳಿಂದ, ಬೇಸಾಯ ಕಾರ್ಯಗಳನ್ನು ಮಾಡುವಾಗ ಮತ್ತು ವಾಹನಗಳ ಸಂಚಾರದಲ್ಲಿ ಕೊಳವೆಗಳಿಗೆ ಹಾನಿಯುಂಟಾಗುವ ಸಂಭವವಿರುತ್ತದೆ. ಮಣ್ಣಿನಲ್ಲಿ ಆಳವಾಗಿ ಕೊಳವೆಗಳನ್ನು ಹೂಳುವುದರಿಂದ ಈ ತೊಂದರೆಗಳನ್ನು ಕಡಿಮೆ ಮಾಡಬಹುದು.
3. ಅಧಿಕ ಪ್ರಾರಂಭಿಕ ವೆಚ್ಚ
ಇತರೆ ನೀರಾವರಿ ವಿಧಾನಗಳಿಗೆ ಹೋಲಿಸಿದರೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿ, ಜಾರಿಗೆ ತರಲು ಪ್ರಾರಂಭಿಕ ವೆಚ್ಚ ಅಧಿಕ, ಆದರೂ ಸಹ, ಇದರಿಂದ ಬರುವ ಹೆಚ್ಚಿನ ಲಾಭ, ಇತರೆ ಅನೇಕ ಅನುಕೂಲಗಳು, ಸರ್ಕಾರದ ಪ್ರೋತ್ಸಾಹ ಧನ, ಬ್ಯಾಂಕುಗಳಿAದ ಆದ್ಯತೆಯ ಮೇಲೆ ಧನಸಹಾಯ ಮುಂತಾದ ಕಾರಣಗಳಿಂದ, ಅಧಿಕ ಪ್ರಾರಂಭಿಕ ವೆಚ್ಚವು ದೊಡ್ಡ ಅಡಚಣೆಯಾಗಲಾರದು.
4. ದೀರ್ಘ ಕಾಲದ ನಿಲುಗಡೆ ಹಾನಿಕರ
ಹನಿ ನೀರಾವರಿಯಲ್ಲಿ ಬೇರು ಮಿತವಾದ ತೇವ ಪ್ರದೇಶದಲ್ಲಿ ಒತ್ತಾಗಿ ಬೆಳೆದಿರುವುದರಿಂದ ಮತ್ತು ಗಿಡದ ಭಾಷ್ಪೀಭವನದ ಬೇಡಿಕೆಯು ಹೆಚ್ಚಿರುವುದರಿಂದ, ಯಾವುದೇ ಕಾರಣಕ್ಕೆ ವ್ಯವಸ್ಥೆಯ ನಿಲುಗಡೆಯಾದರೆ, ಅತಿ ಬೇಗನೆ ಬೇರಿನ ವಲಯದ ತೇವಾಂಶವು ಹೀರಲ್ಪಟ್ಟು, ತೇವಾಂಶದ ಕೊರತೆ ಪ್ರಾರಂಭವಾಗುತ್ತದೆ. ಆದಷ್ಟು ಹೆಚ್ಚು ಬೇರಿನ ಪ್ರಮಾಣವನ್ನು ತೇವಗೊಳಿಸುವುದರಿಂದ ಮತ್ತು ಮಣ್ಣು ಹಾಗೂ ಬೆಳೆಯ ಆಧಾರದ ಮೇಲೆ ಕ್ಷೇಮಕರವಾಗಿ ನೀರುಣಿಸದಿರಬಹುದಾದ ದೀರ್ಘಾವಧಿಯನ್ನು ಮನದಲ್ಲಿಟ್ಟುಕೊಂಡು ಪರ್ಯಾಯ ನೀರಾವರಿ ವ್ಯವಸ್ಥೆ ಮಾಡುವುದರಿಂದ ಈ ತೊಂದರೆಯನ್ನು ಕಡಿಮೆ ಮಾಡಬಹುದು.
5. ಸಡಿಲ ಬೇರು
ಬೇರಿನ ವ್ಯೂಹ ಮೇಲ್ಮಣ್ಣಿನ ಸ್ವಲ್ಪ ಪ್ರದೇಶದಲ್ಲಿ ದಟ್ಟವಾಗಿರುವುದರಿಂದ ಮತ್ತು ಸದಾ ಹದವಾದ ತೇವಾಂಶವಿರುವುದರಿಂದ, ಹೆಚ್ಚಿನ ಗಾಳಿಯ ಹೊಡೆತಕ್ಕೆ ಸಿಕ್ಕಿದಾಗ ಕೆಲವು ಗಿಡಗಳು ಬಿದ್ದು ಹೋಗುವ ಸಂಭವವಿರುತ್ತದೆ. ಗಿಡದ ಎಲ್ಲಾ ದಿಕ್ಕುಗಳಲ್ಲಿಯೂ ಹನಿ ಸಾಧನಗಳನ್ನು ಇಡುವುದರಿಂದ, ಆಳ ಮಣ್ಣಿನಲ್ಲಿ ಬೇರು ಬೆಳೆಯುವಂತೆ ಮಾಡಲು ಆಗಿಂದಾಗ್ಗೆ ಅಲ್ಪಾವಧಿಗೆ (ಕೆಲವು ದಿನಗಳು) ನೀರು ನಿಲುಗಡೆ ಮಾಡುವುದರಿಂದ ಮತ್ತು ತೋಟದ ಸುತ್ತಲೂ ಗಾಳಿತಡೆಗೆ ಮರಗಳನ್ನು ಬೆಳೆಸುವುದರಿಂದ, ಹಾನಿಯನ್ನು ಕಡಿಮೆ ಮಾಡಬಹುದು.
ಹನಿ ನೀರಾವರಿಗೆ ಸೂಕ್ತ ಸನ್ನಿವೇಶಗಳು
ಹನಿ ನೀರಾವರಿ ವ್ಯವಸ್ಥೆಯನ್ನು ಈ ಕೆಳಕಂಡ ಬೆಳೆಗಳಲ್ಲಿ ಹಾಗೂ ಸನ್ನಿವೇಶಗಳಲ್ಲಿ ಲಾಭದಾಯಕವಾಗಿ ಅಳವಡಿಸಿಕೊಳ್ಳಬಹುದು.
(ಅ) ಅಧಿಕ ಲಾಭ ತರುವ ಕೆಳಕಾಣಿಸಿದ ವಾಣಿಜ್ಯ ಬೆಳೆಗಳು
- ಹೆಚ್ಚಿನ ಅಂತರದಲ್ಲಿ ಬೆಳೆಯುವ ತೆಂಗು, ಸಪೋಟಾ, ದ್ರಾಕ್ಷಿ, ನಿಂಬೆ, ಕಿತ್ತಳೆ, ಮೂಸಂಬಿ ಇತ್ಯಾದಿ.
- ಮಣ್ಣಿನ ಅಲ್ಪಕಾಲದ ಶುಷ್ಕತೆಯಿಂದಲೂ ತೀವ್ರವಾದ ಪರಿಣಾಮ ಹೊಂದುವ ಬೆಳೆಗಳಾದ ಬಾಳೆ, ಅಡಿಕೆ, ವೀಳ್ಯದೆಲೆ ಹಾಗೂ ಕೆಲವು ಹೂ, ತರಕಾರಿ ಇತ್ಯಾದಿ.
- ಅತಿ ಎಚ್ಚರಿಕೆಯಿಂದ ಪೋಷಿಸಬೇಕಾದ ಸಸಿ ಮಡಿಗಳು, ಗಾಜಿನ ಮನೆಗಳಲ್ಲಿ ಪ್ರಾಮುಖ್ಯತೆ ಪಡೆದಂತಹ ಬೆಳೆಗಳಾದ ಹಿಪ್ಪುನೇರಳೆ, ಟೀ, ಕಬ್ಬು, ಮೇವಿನ ಬೆಳೆ ಇತ್ಯಾದಿ.
- ನೀರಿನ ತೀವ್ರ ಕೊರತೆಯಿರುವಲ್ಲಿ, ಕಡಿಮೆ ನೀರಿನಲ್ಲಿ ಹೆಚ್ಚು ಪ್ರದೇಶದಲ್ಲಿ ನೀರಾವರಿ ಮಾಡಬೇಕಾದಲ್ಲಿ,
- ಇತರೆ ನೀರಾವರಿ ವಿಧಾನಗಳಿಗೆ ವಿಫಲವೆಂದು ಕಂಡು ಬಂದ ಬಾವಿಗಳನ್ನು ನೀರಾವರಿಗೆ ಬಳಸಬೇಕಾದಲ್ಲಿ,
- ಕೂಲಿ ಆಳಿನ ತೀವ್ರ ಕೊರತೆಯಿದ್ದು, ಅತಿ ದುಬಾರಿಯಾಗಿರುವ ಸನ್ನಿವೇಶಗಳಲ್ಲಿ,
- ವಿದ್ಯುತ್ ಕೊರತೆಯು ತೀವ್ರವಾಗಿರುವ ಸನ್ನಿವೇಶಗಳಲ್ಲಿ,
- ಸವಳು ನೀರು ಬಳಸಿ ನೀರಾವರಿ ಮಾಡಬೇಕಾದ ಸನ್ನಿವೇಶಗಳಲ್ಲಿ,
- ಅತಿ ಇಳಿಜಾರು ಮತ್ತು ಏರುತಗ್ಗುಗಳಿಂದ ಕೂಡಿದ ಜಮೀನುಗಳನ್ನು ಮಟ್ಟ ಮಾಡಲು ಅಧಿಕ ವೆಚ್ಚ ತಗಲುವ ಸನ್ನಿವೇಶಗಳಲ್ಲಿ, ಮಟ್ಟ ಮಾಡದೇ ನೀರಾವರಿ ಮಾಡಲು,
- ಅತಿ ಮರಳು ಮಣ್ಣಿನಿಂದ ಅಥವಾ ಅತಿ ಜೌಗು ಮಣ್ಣಿನಿಂದ ಕೂಡಿ ಸಾಮಾನ್ಯ ಪದ್ಧತಿಗಳಲ್ಲಿ ನೀರಾವರಿ ಮಾಡಲು ತೊಂದರೆಯಾಗುವ ಸನ್ನಿವೇಶಗಳಲ್ಲಿ,
- ಮೇಲ್ಮಣ್ಣು ಕೊಚ್ಚಿ, ನಿರುಪಯುಕ್ತವಾದ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು,
- ತೀವ್ರವಾಗಿ ಕಳೆಯ ತೊಂದರೆಗಳಾದ ಜಮೀನುಗಳಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಬಹುದು.
ಅಧ್ಯಾಯ 3 : ವ್ಯವಸ್ಥೆಯ ವಿವರಗಳು
ಕೇಂದ್ರೀಯ ನಿಯಂತ್ರಣ ಭಾಗ-ಒತ್ತಡ-ತೊಟ್ಟಿಗಳ ಆಯ್ಕೆ-ಪಂಪುಗಳ ಆಯ್ಕೆ. ನೀರು ಶುದ್ಧೀಕರಣ ಘಟಕಗಳು-ತಿಳಿಗೊಳಗಳು-ಮರಳು ಬೇರ್ಪಡೆ-ಜಾಲರಿ ಶೋಧಕಗಳು-ಮರಳು ಮಾಧ್ಯಮ ಶೋಧಕಗಳು-ರಾಸಾಯನಿಕಗಳನ್ನು ಒಳಸೇರಿಸುವ ವ್ಯವಸ್ಥೆಗಳು-ಆಮ್ಲ ಬೆರೆಸುವುದು ಹಾಗೂ ಕ್ಲೋರಿನೀಕರಣ ಮತ್ತು ಮುನ್ನೆಚ್ಚರಿಕೆಗಳು.
ಕೊಳವೆಗಳ ಜಾಲ-ಮುಖ್ಯ, ಉಪಮುಖ್ಯ,ಕವಲು ಕೊಳವೆಗಳು-ಕೊಳವೆಗಳನ್ನು ಆಳದಲ್ಲಿ ಹೂಳುವ ಬಗ್ಗೆ.
ಹನಿಸಾಧನಗಳು-ಗುಣ ವಿಶೇಷಣಗಳು-ಆಯ್ಕೆ-ವಿನ್ಯಾಸ-ಜೋಡಣೆ.
ನೀರು ನಿಯಂತ್ರಣಾ ಸಾಧನಗಳು-ಕವಾಟಗಳು-ಮಾಪಕಗಳು- ಹೊರ ತೊಳೆವ ಕವಾಟಗಳು-ಗಾಳಿ ಬಿಡುಗಡೆ ಕವಾಟಗಳು-ತಳ್ಳು ತಡೆಗಳು-ಅಲೆ ತಡೆ ತೊಟ್ಟಿ.
ಹನಿ ನೀರಾವರಿಯಲ್ಲಿ ಪ್ಲಾಸ್ಟಿಕ್ನ ವಿಧಾನಗಳು-ಬಳಕೆಯ ಲಾಭಗಳು-ಮಿತಿಗಳು.
ಹನಿ ನೀರಾವರಿ ವ್ಯವಸ್ಥೆಯ ವಿವರಗಳು
ಹನಿ ನೀರಾವರಿ ವ್ಯವಸ್ಥೆಯ ಮುಖ್ಯ ಘಟಕಗಳೆಂದರೆ ಕೇಂದ್ರೀಯ ನಿಯಂತ್ರಣ ಭಾಗ, ಕೊಳವೆಗಳ ಜಾಲ, ಹನಿ ಸಾಧನಗಳು ಹಾಗೂ ನೀರು ನಿಯಂತ್ರಣಾ ಸಾಧನಗಳು (ಚಿತ್ರ 3.1). 1.
ಕೇಂದ್ರೀಯ ನಿಯಂತ್ರಣ ಭಾಗ
- ವ್ಯವಸ್ಥೆಯಲ್ಲಿ ಬೇಕಾದ ಒತ್ತಡವನ್ನುಂಟು ಮಾಡುವ ಸಾಧನಗಳಾದ ಪಂಪು ಅಥವಾ ತೊಟ್ಟಿ.
- ನೀರು ಶುದ್ಧೀಕರಣ ಘಟಕಗಳಾದ ಜಾಲರಿ ಶೋಧಕ, ಮರಳು ಮಾಧ್ಯಮ ಶೋಧಕ, ಬಿಲ್ಲೆ ಶೋಧಕ, ಮರಳು ಬೇರ್ಪಡಿಸುವ ಯಂತ್ರ, ತಿಳಿಗೊಳಗಳು ಮುಂತಾದವು.
- ರಾಸಾಯನಿಕಗಳನ್ನು ನೀರಿನೊಡನೆ ಬೆರೆಸುವ ಸಾಧನಗಳು.
- ವ್ಯವಸ್ಥೆಯನ್ನು ನಿಯಂತ್ರಿಸುವ ಸ್ವಿಚ್ಚುಗಳು ಹಾಗೂ ಕವಾಟಗಳು.
2. ಕೊಳವೆಗಳ ಜಾಲ
- ಮುಖ್ಯ ಕೊಳವೆ
- ಉಪಮುಖ್ಯ ಕೊಳವೆ
- ಕವಲು ಕೊಳವೆ
- ಮೇಲೇರುವ ವಿಸ್ತರಿಸುವ ಕೊಳವೆಗಳು
- ಕೊಳವೆಯ ಜೋಡಣೆಗಳು-ಪ್ರಾರಂಭಿಕ ಜೋಡಣೆ, ನೇರ ಜೋಡಣೆ, ತುದಿ ಮುಚ್ಚಳ, ‘ಖಿ’ ಆಕಾರದ ಜೋಡನೆ ಮುಂತಾದವುಗಳು.
ನೀರು ಹೊರ ಬರುವ ಪ್ರಮಾಣ, ಕನಿಷ್ಠ ಮಾರ್ಗದ ಅಳತೆ, ಕಾರ್ಯತತ್ವ, ಕಾರ್ಯ ನಿರ್ವಹಣೆಗೆ ಬೇಕಾದ ಒತ್ತಡ, ಕಲ್ಮಶ ಹೊರತೆಗೆಯುವ ವ್ಯವಸ್ಥೆ ಮುಂತಾದವುಗಳ ಆಧಾರದ ಮೇಲೆ ವಿಂಗಡಿಸಲಾಗಿರುವ ಅನೇಕ ರೀತಿಯ ಸಾಧನಗಳು ಬಳಕೆಯಲ್ಲಿವೆ. ವಿವರಗಳನ್ನು ಮುಂದೆ ಕೊಡಲಾಗಿದೆ.
4. ನೀರು ನಿಯಂತ್ರಣಾ ಸಾಧನಗಳು
ಪಂಪು ಅಥವಾ ತೊಟ್ಟಿಯ ಮೂಲಕ, ಹನಿ ನೀರಾವರಿ ವ್ಯವಸ್ಥೆಯಲ್ಲಿ ಒದಗಿಸಬೇಕಾದ ಒತ್ತಡ ನಿರ್ಧರಿಸುವಾಗ, ಹನಿ ಸಾಧನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕವಲು ಕೊಳವೆಯಲ್ಲಿರಬೇಕಾದ ಒತ್ತಡ, ಮುಖ್ಯ ಮತ್ತು ಉಪಮುಖ್ಯ ಕೊಳವೆಗಳಲ್ಲಿ ನೀರು ರಭಸದಿಂದ ಹರಿದಾಗ ಉಂಟಾಗುವ ಒತ್ತಡದ ನಷ್ಟ ಹಾಗೂ ಜಮೀನಿನ ಏರುತಗ್ಗುಗಳನ್ನು ಪರಿಗಣಿಸಬೇಕಾಗುತ್ತದೆ.
ಚಿತ್ರ
3.1 ಹನಿ
ನೀರಾವರಿ ವ್ಯವಸ್ಥೆಯ ಮುಖ್ಯ
ಘಟಕಗಳು.
4. ನೀರು ನಿಯಂತ್ರಣಾ ಸಾಧನಗಳು
- ನೀರಿನ ಪ್ರಮಾಣವನ್ನು ನಿಯಂತ್ರಿಸುವ ಕವಾಟಗಳು
- ಒತ್ತಡವನ್ನು ನಿಯಂತ್ರಿಸುವ ಕವಾಟಗಳು
- ನೀರು ಮಾಪಕ
- ಒತ್ತಡ ಮಾಪಕ
- ಕಲ್ಮಶಗಳನ್ನು ಹೊರತಳ್ಳುವ ಕವಾಟಗಳು
- ಗಾಳಿ ಬಿಡುಗಡೆ ಕವಾಟಗಳು
- ತಳ್ಳು ತಡೆ (ಥ್ರಸ್ಟ್ಬ್ಲಾಕ್)
- ಅಲೆತಡೆ ತೊಟ್ಟಿ (ಸರ್ಜ್ಟ್ಯಾಂಕ್) ಮುಂತಾದವುಗಳು.
1. ಕೇಂದ್ರೀಯ ನಿಯಂತ್ರಣ ಭಾಗ
1. ಒತ್ತಡ ಒದಗಿಸುವ ಸಾಧನಗಳು
ನೀರನ್ನು ಕೊಳವೆಗಳ ಮೂಲಕ ಗಿಡದ ಬುಡಕ್ಕೆ ತಲುಪಿಸಲು ಬೇಕಾದ ಒತ್ತಡವನ್ನು, ವ್ಯವಸ್ಥೆಯಲ್ಲಿ ಜೋಡಿಸಿರುವ ಪಂಪಿನಿಂದ ಅಥವಾ ಎತ್ತರದ ಸ್ಥಳದಲ್ಲಿರುವ ತೊಟ್ಟಿಗಳಿಂದ ಒದಗಿಸಬಹುದು. ಇವೆರಡು ವಿಧಾನಗಳಲ್ಲಿ, ತೊಟ್ಟಿಗಳಿಗೆ ಹೋಲಿಸಿದರೆ ವ್ಯವಸ್ಥೆಯಲ್ಲಿ ಪಂಪುಗಳನ್ನು ಜೋಡಿಸುವುದರಿಂದ ಕೆಳಕಾಣಿಸಿದ ಹಲವಾರು ಲಾಭಗಳುಂಟು.
- ಕಡಿಮೆ ಪ್ರಾರಂಭಿಕ ವೆಚ್ಚ
- ದೀರ್ಘ, ಸುರಕ್ಷಿತ ಬಾಳಿಕೆ
- ಕಡಿಮೆ ಸ್ಥಳಾವಕಾಶದ ಅವಶ್ಯಕತೆ
- ಬೇಕಾದ ಒತ್ತಡವನ್ನು ಸುಲಭವಾಗಿ ಪಡೆಯುವ ಸಾಧ್ಯತೆ
- ತೊಟ್ಟಿಯಲ್ಲಿನ ನೀರನ್ನು ಶುಚಿಯಾಗಿರಿಸಲು ಬೇಕಾದ ನಿರ್ವಹಣಾ ಕ್ರಮಗಳು ಈ ಕ್ರಮದಲ್ಲಿ ಅನವಶ್ಯಕ.
ಅ.
ಒದಗಿಸಬೇಕಾದ
ಒತ್ತಡ
ಪಂಪು ಅಥವಾ ತೊಟ್ಟಿಯ ಮೂಲಕ, ಹನಿ ನೀರಾವರಿ ವ್ಯವಸ್ಥೆಯಲ್ಲಿ ಒದಗಿಸಬೇಕಾದ ಒತ್ತಡ ನಿರ್ಧರಿಸುವಾಗ, ಹನಿ ಸಾಧನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕವಲು ಕೊಳವೆಯಲ್ಲಿರಬೇಕಾದ ಒತ್ತಡ, ಮುಖ್ಯ ಮತ್ತು ಉಪಮುಖ್ಯ ಕೊಳವೆಗಳಲ್ಲಿ ನೀರು ರಭಸದಿಂದ ಹರಿದಾಗ ಉಂಟಾಗುವ ಒತ್ತಡದ ನಷ್ಟ ಹಾಗೂ ಜಮೀನಿನ ಏರುತಗ್ಗುಗಳನ್ನು ಪರಿಗಣಿಸಬೇಕಾಗುತ್ತದೆ.
ಹನಿ ಸಾಧನಗಳು ಸಾಮಾನ್ಯವಾಗಿ ಪ್ರತಿ ಚ.ಸೆಂ.ಮೀಟರ್ಗೆ 0.5 ರಿಂದ 1.0 ಕೆ.ಜಿ. ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತವೆ. ಕೆಲವು ನಿರಾವಲಂಬಿ ರೀತಿಯ ಹನಿ ಸಾಧನಗಳು ಪ್ರತಿ ಚ.ಸಂ.ಮೀ.ಗೆ 0.5 ರಿಂದ 4 ಕೆ.ಜಿ. ಒತ್ತಡದಲ್ಲಿ, ನೀರಿನ ವಿಸರ್ಜನೆಯಲ್ಲಿ ಯಾವುದೇ ರೀತಿಯ ಬದಲಾವಣೆ ತೋರಿಸದೆ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲವು. ಆದಾಗ್ಯೂ, ಹನಿ ಸಾಧನಗಳ ಕಾರ್ಯಕ್ಷಮತೆ ಮತ್ತು ನೀರಿನ ಹಂಚಿಕೆಯಲ್ಲಿನ ಸಮಾನತೆಯು ಕಡಿಮೆ ಒತ್ತಡದಲ್ಲಿ ಉತ್ತಮವಾಗಿರುವುದರಿಂದ ಮತ್ತು ಅನಾವಶ್ಯಕವಾಗಿ ಶಕ್ತಿ ವ್ಯಯವಾಗುವುದನ್ನು ತಪ್ಪಿಸಿ, ವ್ಯವಸ್ಥೆಯ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಅವಕಾಶವಿರುವುದರಿಂದ, ಆದಷ್ಟೂ ನೀರಾವರಿ ವ್ಯವಸ್ಥೆಗಳು ಕಡಿಮೆ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡಿಸುವುದು ಉತ್ತಮ.
ಆ. ತೊಟ್ಟಿ-ವಿಧಗಳು ಮತ್ತು ವಿನ್ಯಾಸ
ಹನಿ ನೀರಾವರಿಗಾಗಿ ಬಳಸಬಹುದಾದ ತೊಟ್ಟಿಗಳೆಂದರೆ (ಚಿತ್ರ 3.2)
- ಕಾಂಕ್ರೀಟ್ ತೊಟ್ಟಿಗಳು
- ಇಟ್ಟಿಗೆ ಅಥವಾ ಕಲ್ಲುಗೋಡೆಗಳಿಂದ ಕಟ್ಟಿದ ತೊಟ್ಟಿಗಳು
- ಪ್ಲಾಸ್ಟಿಕ್ ಅಥವಾ ಕಬ್ಬಿಣದ ಸಿದ್ಧ ತೊಟ್ಟಿಗಳು
ಕಾಂಕ್ರೀಟ್, ಇಟ್ಟಿಗೆ ಅಥವಾ ಕಲ್ಲಿನ ತೊಟ್ಟಿಗಳನ್ನು ಸರಿಯಾಗಿ ವಿನ್ಯಾಸ ಮಾಡಿ, ಸೂಕ್ತ ಮೇಲ್ವಿಚಾರಣೆಯೊಂದಿಗೆ ಕಟ್ಟಿ ಹದಗೊಳಿಸುವುದು ಅತಿ ಅವಶ್ಯಕ. ಹೀಗೆ ಮಾಡದಿದ್ದಲ್ಲಿ ತೊಟ್ಟಿಗಳು ಬೇಗನೆ ಬಿರುಕು ಬಿಡಬಹುದಲ್ಲದೇ ಅವುಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಹೆಚ್ಚಿನ ವೆಚ್ಚ ತಗಲುವುದು.
ಯಾವ ರೀತಿಯ ತೊಟ್ಟಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸುವಾಗ ಪ್ರತಿ ಲೀಟರ್ ನೀರು ಸಂಗ್ರಹಣೆಗೆ ತಗಲುವ ಪ್ರಾರಂಭಿಕ ವೆಚ್ಚ, ಮುಂದೆ ಅವುಗಳ ನಿರ್ವಹಣೆಗೆ ತಗಲುವ ವೆಚ್ಚ ಮತ್ತು ಅವುಗಳ ಬಾಳಿಕೆಯನ್ನು ಗಮನಿಸಬೇಕು.
ಸಿದ್ಧ ತೊಟ್ಟಿಗಳಲ್ಲಿ ಕಬ್ಬಿಣದ ತೊಟ್ಟಿಗಳು ಪ್ಲಾಸ್ಟಿಕ್ ತೊಟ್ಟಿಗಳಿಗಿಂತ ದುಬಾರಿ. ಕಬ್ಬಿಣದ ತೊಟ್ಟಿಗಳಿಗೆ ಆಗಾಗ್ಗೆ ಬಣ್ಣ ಹೊಡೆದು ನಿರ್ವಹಿಸಬೇಕಲ್ಲದೆ, ಅವುಗಳ ನಿರ್ವಹಣಾ ವೆಚ್ಚವೂ ಹೆಚ್ಚು. ಪ್ಲಾಸ್ಟಿಕ್ ತೊಟ್ಟಿಗಳಿಗೆ ನಿರ್ವಹಣಾ ವೆಚ್ಚ ಕಡಿಮೆ.
ತೊಟ್ಟಿಗಳನ್ನು ಸಾಕಷ್ಟು ನೀರು ಹಿಡಿಯುವಷ್ಟು ಗಾತ್ರವಿರುವಂತೆ ಹಾಗೂ ವ್ಯವಸ್ಥೆಗೆ ಅವಶ್ಯಕವಿರುವ ಒತ್ತಡವನ್ನು ಕೊಡುವಷ್ಟು ಎತ್ತರದಲ್ಲಿರುವಂತೆ ವಿನ್ಯಾಸಗೊಳಿಸಬೇಕು. ತೊಟ್ಟಿಗಳಿಗೆ ನೀರು ಒದಗಿಸುವ ಕೊಳವೆಯನ್ನು ತೊಟ್ಟಿಯ ಮೇಲು ಭಾಗದಲ್ಲಿಯೂ, ತೊಟ್ಟಿಯಿಂದ ವ್ಯವಸ್ಥೆಗೆ ಜೋಡಿಸುವ ಕೊಳವೆಯನ್ನು ತೊಟ್ಟಿಯ ಕೆಳಭಾಗದಿಂದ 10 ರಿಂದ 15 ಸೆಂ.ಮೀ. ಎತ್ತರದಲ್ಲಿ ಜೋಡಿಸಬೇಕು. ಈ ರೀತಿ ಎತ್ತರದಲ್ಲಿ ಜೋಡಿಸುವುದರಿಂದ ಮರಳು, ಮತ್ತಿತರೆ ಭಾರವಾದ ಕಣಗಳು ತೊಟ್ಟಿಯಲ್ಲೇ ಉಳಿಯುವುದರಿಂದ ವ್ಯವಸ್ಥೆಯಲ್ಲಿ ಕಲ್ಮಶಗಳು ಸೇರಿಕೊಂಡು ಹಾನಿಮಾಡುವುದು ತಪ್ಪುತ್ತದೆ. ತೊಟ್ಟಿಯನ್ನು ಆಗಾಗ್ಗೆ ತೊಳೆಯಲು ಅನುಕೂಲವಾಗುವಂತೆ ತೊಟ್ಟಿಯ ತಳದಲ್ಲಿ ಒಂದು ಮುಚ್ಚಬಹುದಾದ ರಂಧ್ರವನ್ನು ಇಡಬೇಕು (ಚಿತ್ರ 3.3).
ಇ. ಪಂಪು-ವಿಧಗಳು ಆಯ್ಕೆ
ಹನಿ ನೀರಾವರಿಗೆ ಬಳಸಬಹುದಾದ ಪಂಪುಗಳೆಂದರೆ,
- ಕೇಂದ್ರಾಪಗಮ (ಸೆಂಟ್ರಿಫ್ಯೂಗಲ್) ಪಂಪುಗಳು
- ಜೆಟ್ ಪಂಪುಗಳು
- ಆಳ ಬಾವಿಯ ಮುಳುಗುವ (ಡೀಪ್ ವೆಲ್ ಸಬ್ಮರ್ಸಿಬಲ್) ಪಂಪುಗಳು,
- ಮುಂತಾದವುಗಳು.
ಕೇಂದ್ರಾಪಗಮನ ಪಂಪುಗಳನ್ನು ನೀರಿನ ಮಟ್ಟದಿಂದ ಸುಮಾರು 6-7 ಮೀಟರ್ಗಳ ಎತ್ತರದೊಳಗೆ ಸ್ಥಾಪಿಸಬೇಕು. ಆದರೆ ಮೇಲಕ್ಕೆ ಬೇಕಾದ ಎತ್ತರಕ್ಕೆ ಎತ್ತುವ ಹಾಗೂ ಬೇಕಾದ ಪ್ರಮಾಣದ ನೀರನ್ನು ಎತ್ತುವ ವೈವಿಧ್ಯಮಯ ಕೇಂದ್ರಾಪಗಮನ ಪಂಪುಗಳು ದೊರೆಯುತ್ತವೆ. ಕಡಿಮೆ ಆಳದ ತೆರೆದ ಬಾವಿಗಳಲ್ಲಿ ಈ ಪಂಪುಗಳು ಅನುಕೂಲಕರ. ಕಡಿಮೆಯಿಂದ ಮಧ್ಯಮಯ ಕೇಂದ್ರಾಪಗಮನ ಪಂಪುಗಳು ದೊರೆಯುತ್ತವೆ. ಕಡಿಮೆ ಆಳದ ತೆರೆದ ಬಾವಿಗಳಲ್ಲಿ ಈ ಪಂಪುಗಳು ಅನುಕೂಲಕರ. ಕಡಿಮೆಯಿಂದ ಮಧ್ಯಮ ಆಳದ ಕೊಳವೆ ಬಾವಿಗಳಿಂದ, ಕಡಿಮೆ ಪ್ರಮಾಣದ ನೀರನ್ನು ಎತ್ತಲು ಜೆಟ್ ಪಂಪುಗಳನ್ನು ಬಳಸಬಹುದು. ಆಳ ಬಾವಿಯ ಮುಳುಗುವ ಪಂಪುಗಳನ್ನು ಆಳವಾದ ಕೊಳವೆ ಬಾವಿಗಳಲ್ಲಿ ವಿವಿಧ ಪ್ರಮಾಣದ ನೀರನ್ನು ಎತ್ತಲು ಬಳಸಬಹುದು.
ಆಯ್ಕೆ ಮಾಡುವ ಪಂಪು, ಬೇಕಾದ ಪ್ರಮಾಣದ ನೀರನ್ನು ನಿಗದಿತ ಎತ್ತರಕ್ಕೆ ಎತ್ತುವ ಮತ್ತು ವ್ಯವಸ್ಥೆಯಲ್ಲಿ ಬೇಕಾದ ಒತ್ತಡವನ್ನುಂಟು ಮಾಡುವ ಸಾಮಥ್ರ್ಯವುಳ್ಳ ಅಶ್ವಶಕ್ತಿಯನ್ನು ಹೊಂದಿರಬೇಕಲ್ಲದೇ, ಬೇಕಾದ ಒತ್ತಡ ಮತ್ತು ನೀರೆತ್ತುವ ಪ್ರಮಾಣದಲ್ಲಿ ಅತ್ಯಧಿಕ ಕಾರ್ಯ ಸಾಮಥ್ರ್ಯವನ್ನು ಹೊಂದಿದ ಮಾದರಿಯಾಗಬೇಕು.
ಪಂಪಿನ ಅಶ್ವಶಕ್ತಿಯ ನಿರ್ಧಾರ
ಪಂಪಿನ ಅಶ್ವಶಕ್ತಿಯನ್ನು ವ್ಯವಸ್ಥೆಯಲ್ಲಿ ಎತ್ತಬೇಕಾದ ನೀರಿನ ಪ್ರಮಾಣ, ನೀರನ್ನು ಎತ್ತಬೇಕಾದ ಎತ್ತರ, ಕೊಳವೆಗಳಲ್ಲಿ ಘರ್ಷಣೆಯಿಂದ ಆಗುವ ಒತ್ತಡದ ನಷ್ಟ ಮತ್ತು ಪಂಪಿನ ಕಾರ್ಯದಕ್ಷತೆ ಮುಂತಾದವುಗಳನ್ನು ಪರಿಗಣಿಸಿ ಕೆಳಕಾಣಿಸಿದಂತೆ ನಿರ್ಧರಿಸಲಾಗುತ್ತದೆ.
ಪಂಪಿನ ಅಶ್ವಶಕ್ತಿ = ((ನೀರೆತ್ತಬೇಕಾದ ಪ್ರಮಾಣ(ಸೆಕೆಂಡಿಗೆ ಲೀಟರುಗಳಲ್ಲಿ) x ಬೇಕಾದ ಒಟ್ಟು ಒತ್ತಡ (ಘರ್ಷಣಾ ನಷ್ಟವೂ ಸೇರಿ ಮೀಟರುಗಳಲ್ಲಿ)) / 75 x ಪಂಪಿನ ಕಾರ್ಯದಕ್ಷತೆ (ಪ್ರತಿಶತ)) x 100
ಅ. ಆರ್.ಸಿ.ಸಿ. ತೊಟ್ಟಿ
ಆ. ಕಲ್ಲು ಅಥವಾ ಇಟ್ಟಿಗೆಯ ತೊಟ್ಟಿ
ಚಿತ್ರ 3.2 ವಿವಿಧ ರೀತಿಯ ತೊಟ್ಟಿಗಳು
ಚಿತ್ರ 3.3 ತೊಟ್ಟಿಯ ಮಾದರಿ ಒಳ ವಿನ್ಯಾಸ
ಹನಿ ನೀರಾವರಿ ವ್ಯವಸ್ಥೆಯಲ್ಲಿ ನೀರೆತ್ತಬೇಕಾದ ಪ್ರಮಾಣವನ್ನು ಒಟ್ಟು ಹನಿ ಸಾಧನಗಳ ಸಂಖ್ಯೆ, ಸರಾಸರಿ ನೀರು ಹನಿಯುವ ಪ್ರಮಾಣ, ವ್ಯವಸ್ಥೆಯಲ್ಲಿರುವ ವಿಭಾಗಗಳು ಮುಂತಾದವುಗಳನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ.
ವ್ಯವಸ್ಥೆಯಲ್ಲಿ ಬೇಕಾದ ಒಟ್ಟು ಒತ್ತಡವನ್ನು ನಿರ್ಧರಿಸಲು ನೀರಿನ ಮೂಲದಿಂದ ನೀರು ವಿಸರ್ಜನೆಯಾಗುವ ಅತಿ ಎತ್ತರದ ಸ್ಥಳ, ಕೊಳವೆಗಳಲ್ಲಿ ಮತ್ತು ಜೋಡಣೆಗಳಲ್ಲಿ ಘರ್ಷಣೆಯಿಂದ ಆಗುವ ಒತ್ತಡದ ನಷ್ಟ (ಸಾಮಾನ್ಯವಾಗಿ ಕೊಳವೆಯ ಉದ್ದದ ಪ್ರತಿಶತ 2-3ರಷ್ಟು) ಮತ್ತು ಹನಿ ನೀರಾವರಿ ವ್ಯವಸ್ಥೆಯು ನಡೆಯಲು ಬೇಕಾದ ಒತ್ತಡ (ಸಾಮಾನ್ಯವಾಗಿ ಹತ್ತು ಮೀಟರುಗಳು) ಇವುಗಳನ್ನು ಪರಿಗಣಿಸಲಾಗುತ್ತದೆ.
2. ನೀರು ಶುದ್ಧೀಕರಣ ಘಟಕಗಳು
ಹನಿ ನೀರಾವರಿಯ ಉದ್ದೇಶಕ್ಕೆ ನೀರಿನ ಶುದ್ಧೀಕರಣ ಮಾಡುವುದರಲ್ಲಿ ಭೌತಿಕ ಕಲ್ಮಶಗಳನ್ನು ಬೇರ್ಪಡಿಸುವುದಲ್ಲದೇ ರಾಸಾಯನಿಕ ಮತ್ತು ಜೈವಿಕ ಕಲ್ಮಶಗಳನ್ನು ನಿರುಪದ್ರವಿಯನ್ನಾಗಿ ಮಾಡಲಾಗುತ್ತದೆ. ಹೀಗೆ ಮಾಡುವಲ್ಲಿ, ಕಲ್ಮಶಗಳು ವ್ಯವಸ್ಥೆಗೆ ಸೇರುವ ಮುನ್ನ “ಮುನ್ಶುಚಿ” ಮಾಡಲು ಹಾಗೂ ವ್ಯವಸ್ಥೆಯ ಒಳಸೇರಿದ ಕಲ್ಮಶಗಳು ಕಟ್ಟಿಕೊಳ್ಳುವುದನ್ನು ಕೊಳವೆಗಳಲ್ಲಿ ತಡೆಗಟ್ಟಲು “ಒಳಶುಚಿ” ಮಾಡಲು ಕೆಲವು ‘ಭೌತಿಕ’ ಹಾಗೂ ‘ರಾಸಾಯನಿಕ’ ವಿಧಾನಗಳನ್ನು ಅನುಸರಿಸಲಾಗುತ್ತದೆ.
ಭೌತಿಕ ವಿಧಾನಗಳು
ಮುಖ್ಯವಾದ ಭೌತಿಕ ಶುದ್ಧೀಕರಣ ವಿಧಾನಗಳೆಂದರೆ, ನೀರು ತಿಳಿಗೊಳಗಳು, ಮರಳು ಬೇರ್ಪಡಿಸುವ ಸಾಧನ, ಜಾಲರಿ ಶೋಧಕ, ಮರಳು ಮಾಧ್ಯಮ ಶೋಧಕ ಮುಂತಾದವುಗಳು ಬೇರ್ಪಡಿಸುವ ಸಾಧನ, ಜಾಲರಿ ಶೋಧಕ, ಮರಳು ಮಾಧ್ಯಮ ಶೋಧಕ ಮುಂತಾದವುಗಳು.
ಅ. ನೀರು ತಿಳಿಗೊಳಗಳು
ನೀರಿನಲ್ಲಿರುವ ಮಣ್ಣು ಮತ್ತು ಮರಳಿನ ಕಣಗಳು ‘ತಳವೂರಿ’ ನೀರು ತಿಳಿಯಾಗಲು ಅವಕಾಶ ಮಾಡಿಕೊಡುವ ಕೊಳಗಳೇ ‘ತಿಳಿಗೊಳಗಳು’. ನೀರಿನಲ್ಲಿ ಮುಳುಗುವ ಭೌತಿಕ ನಿರವಯವ ಕಲ್ಮಶಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ತಿಳಿಗೊಳಗಳನ್ನು ಬಳಸಲಾಗುತ್ತದೆ. ಎರಡು ಮೈಕ್ರಾನ್ಗಿಂತಲೂ ದಪ್ಪ (ಎಂದರೆ ಮರಳಿನ ಕಣಗಳು ಮತ್ತು ವೊಂಡು) ಕಣಗಳಲ್ಲಿ ಹೆಚ್ಚಿನ ಭಾಗ ತಳಸೇರಲು ಸಾಮಾನ್ಯವಾಗಿ ಹದಿನೈದು ನಿಮಿಷಗಳು ಬೇಕು. ಆದ ಕಾರಣ, ತಿಳಿಗೊಳಗಳ ಕನಿಷ್ಠ ಗಾತ್ರವು ಈ ಕೆಳಕಂಡಂತೆ ಇರಬೇಕು:
ತಿಳಿಗೊಳದ ಕನಿಷ್ಠ ಸಂಗ್ರಹಣಾ ಶಕ್ತಿ (ಲೀಟರುಗಳಲ್ಲಿ) = 15 x ಹನಿ ನೀರಾವರಿ ವ್ಯವಸ್ಥೆಯಲ್ಲಿ ಹೊರಬೀಳುವ ಒಟ್ಟು ನೀರಿನ ಪ್ರಮಾಣ (ಪ್ರತಿ ನಿಮಿಷಕ್ಕೆ ಲೀಟರುಗಳಲ್ಲಿ)
ತಿಳಿಗೊಳಗಳು ಸಾಧ್ಯವಾದಷ್ಟು ಅಗಲ ಕಡಿಮೆ ಇದ್ದು ಉದ್ದವಾಗಿರಬೇಕು. ಆಳವು ಒಂದು ಮೀಟರ್ನಷ್ಟಿರಬಹುದು. ಹೆಚ್ಚು ಸಂಗ್ರಹಣಾ ಶಕ್ತಿಯುಳ್ಳ ತಿಳಿಗೊಳಗಳನ್ನು ಕಟ್ಟಲು ಸ್ಥಳಾವಕಾಶವಿಲ್ಲದಿದ್ದರೆ, ಸುತ್ತು ದಾರಿಯಲ್ಲಿ ತಿಳಿಗೊಳಗಳನ್ನು ಕಟ್ಟಬಹುದು ಅಥವಾ ಎರಡು ಕೊಳಗಳನ್ನು ಹೊಂದಿ, ಒಂದಾದ ನಂತರ ಒಂದರಂತೆ ಪರ್ಯಾಯವಾಗಿ ಬಳಸಬಹುದು (ಚಿತ್ರ 3.4).
ತಿಳಿಗೊಳಗಳಲ್ಲಿ, ಕಳೆಗಿಡಗಳು ಬೆಳೆಯದಂತೆ, ಮಣ್ಣು ನೀರಿನಲ್ಲಿ ಸೇರದಂತೆ ಸಿಮೆಂಟ್ ತೊಟ್ಟಿಗಳಾದರೆ ಉತ್ತಮ. ತಿಳಿಗೊಳಗಳಿಂದ ನೀರು ಹೊರ ಬೀಳುವ ಬಾಯಿ, ತಿಳಿನೀರು ಮಾತ್ರ ಬರುವಂತೆ ಆದಷ್ಟು ಮೇಲಿದ್ದರೆ ಉತ್ತಮ. ಮೇಲಿನಿಂದ ಬಿದ್ದ ಕಸಕಡ್ಡಿಗಳನ್ನು ತಡೆಯಲು ಹೊರಬಾಯಿಗೆ ಒಂದು ಜಾಲರಿಯನ್ನು ಹೊಂದಿಸಬೇಕು.
ಅ. ಸಾಧಾರಣ ತಿಳಿಗೊಳದ ಮೇಲ್ನೋಟ
ಆ. ಸಾಧಾರಣ ತಿಳಿಗೊಳದ ಪಾಶ್ರ್ವನೋಟ
ಇ. ಹಿಂತಿರುವುಗಳುಳ್ಳ ತಿಳಿಗೊಳ
ಚಿತ್ರ 3.4 ವಿವಿಧ ರೀತಿಯ ತಿಳಿಗೊಳಗಳು
ತಿಳಿಗೊಳಗಳಿಂದ ಬಂದ ನೀರನ್ನು ಮತ್ತೆ ಎರಡನೇ ಹಂತದ ಶುದ್ಧೀಕರಣಕ್ಕೆ ಶೋಧಕಗಳ ಮೂಲಕ ಹಾಯಿಸುವುದು ಅವಶ್ಯಕ.
ಆ. ಮರಳು ಬೇರ್ಪಡೆ ಸಾಧನ:
ನೀರನ್ನು ಒತ್ತಡದಲ್ಲಿ ಈ ಸಾಧನಗಳ ಮೂಲಕ ಹಾಯಿಸಿದಾಗ ಕೇಂದ್ರಾಪಗಮನ ಒತ್ತಡದಿಂದಾಗಿ, ನೀರಿಗಿಂತ ಭಾರವಾಗಿರುವ ಮತ್ತು 75 ಮೈಕ್ರಾನ್ಗಿಂತಲೂ ಅಧಿಕ ಗಾತ್ರವಿರುವ ಭೌತಿಕ ಕಲ್ಮಶಗಳಲ್ಲಿ ಹೆಚ್ಚಿನ ಭಾಗವನ್ನು ಈ ಸಾಧನಗಳು ಬೇರ್ಪಡಿಸುತ್ತವೆ (ಚಿತ್ರ 3.5). ಇವುಗಳಲ್ಲಿ ಶುದ್ಧೀಕರಿಸಿದ ನೀರನ್ನು ಮತ್ತೆÉ ಎರಡನೆಯ ಹಂತದ ಶುದ್ಧೀಕರಣದ ಶೋಧಕಗಳ ಮೂಲಕ ಹಾಯಿಸಬೇಕು.
ಇ. ಜಾಲರಿ ಶೋಧಕಗಳು: ಸ್ಟೈನ್ಲೆಸ್ ಸ್ಟೀಲ್, ನೈಲಾನ್ ಅಥವಾ ಪಾಲಿಯೆಸ್ಟರ್ ಜಾಲರಿಗಳನ್ನೊಳಗೊಂಡ ವಿವಿಧ ಸಾಮಥ್ರ್ಯದ ಶೋಧಕಗಳನ್ನು ಸಾಮಾನ್ಯವಾಗಿ ಅಂತಿಮ ಹಂತದ ಶುದ್ಧೀಕರಣಕ್ಕಾಗಿ ಬಳಸುತ್ತಾರೆ (ಚಿತ್ರ 3.6).
ಜಾಲರಿ ಶೋಧಕಗಳ ಆಯ್ಕೆಯಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಗಮನವಿರಬೇಕು:
i. ಜಾಲರಿಯ ರಂಧ್ರದ ಅಳತೆಯು ಹನಿ ನೀರಾವರಿ ವ್ಯವಸ್ಥೆಯಲ್ಲಿರುವ ಕನಿಷ್ಠ ಮಾರ್ಗದ ಅಳತೆಗಿಂತಲೂ 7-10 ಪಟ್ಟು ಚಿಕ್ಕದಾಗಿರಬೇಕು. ಬೇರೆ ಬೇರೆ ಅಳತೆಯ ಕಲ್ಮಶಗಳನ್ನು ಬೇರ್ಪಡಿಸಲು ಬಳಸಬೇಕಾದ ಜಾಲರಿಯ ರಂಧ್ರದ ಅಳತೆಗಳನ್ನು ಕೋಷ್ಟಕ 3.1ರಲ್ಲಿ ಕೊಡಲಾಗಿದೆ.
ii. ಶೋಧಕದ ಪರಿಣಾಮಕಾರಿ ವಿಸ್ತೀರ್ಣ: ಶೋಧಕದಲ್ಲಿರುವ ರಂಧ್ರಗಳ ಒಟ್ಟು ವಿಸ್ತೀರ್ಣವೇ ಶೋಧಕದ ಪರಿಣಾಮಕಾರಿ ವಿಸ್ತೀರ್ಣ. ಶೋಧಕದ ಮೂಲಕ ಹರಿಯುವ ನೀರಿನ ಪ್ರಮಾಣವು ಪ್ರತಿ ಚ.ಸೆಂ.ಮೀ. ಪರಿಣಾಮಕಾರಿ ವಿಸ್ತೀರ್ಣ ಪ್ರತಿ ಗಂಟೆಗೆ 50 ಲೀಟರ್ ಒಳಗೆ ಇರಬೇಕೆಂದು ಶಿಫಾರಸ್ಸು ಮಾಡಲಾಗಿದೆ.
iii. ಶೋಧಕದ ಅನುಪಾತ: ಶೋಧಕದ ಪರಿಣಾಮಕಾರಿ ವಿಸ್ತೀರ್ಣ ಮತ್ತು ಶೋಧಕದ ‘ಒಳಹರಿ’ ಕೊಳವೆಯ ವಿಸ್ತೀರ್ಣದ ನಡುವಿನ ಅನುಪಾತವೇ ‘ಶೋಧಕದ ಅನುಪಾತ’.
ಶೋಧಕದ ಅನುಪಾತ = ಶೋಧಕದ ಪರಿಣಾಮಕಾರಿ ವಿಸ್ತೀರ್ಣ / ‘ಒಳಹರಿ’ ಕೊಳವೆಯ ವಿಸ್ತೀರ್ಣ
ಚಿತ್ರ 3.5 ಮರಳು ಬೇರ್ಪಡಿಸುವ ಸಾಧನ
ಚಿತ್ರ 3.6 ಜಾಲರಿ ಶೋಧಕ
ದೀರ್ಘಕಾಲ ತೊಂದರೆಯಿಲ್ಲದಂತೆ ಕಾರ್ಯ ನಿರ್ವಹಿಸಲು ಶೋಧಕದ ಅನುಪಾತವು ಎರಡು ಅಥವಾ ಹೆಚ್ಚು ಇರಬೇಕು.
ಕೋಷ್ಟಕ 3.1: ವ್ಯವಸ್ಥೆಯಲ್ಲಿನ ಕನಿಷ್ಠ ಮಾರ್ಗದ ಅಳತೆ ಆಧಾರದ ಮೇಲೆ ಜಾಲರಿ ಶೋಧಕಗಳ ಆಯ್ಕೆಗೆ ಮಾರ್ಗದರ್ಶಿ.
ಕೋಷ್ಟಕ 3.1: ವ್ಯವಸ್ಥೆಯಲ್ಲಿನ ಕನಿಷ್ಠ ಮಾರ್ಗದ ಅಳತೆ ಆಧಾರದ ಮೇಲೆ ಜಾಲರಿ ಶೋಧಕಗಳ ಆಯ್ಕೆಗೆ ಮಾರ್ಗದರ್ಶಿ.
ಕ್ರ.ಸಂ.
|
ವ್ಯವಸ್ಥೆಯಲ್ಲಿನ ಕನಿಷ್ಠ ಮಾರ್ಗದ ಅಳತೆ ಮಿ.ಮೀ. (ಇಂಚುಗಳು)
|
ನೀರಿನಿಂದ ಹೊರ ತೆಗೆಯ ಬೇಕಾದ ಕಲ್ಮಶದ ಕನಿಷ್ಠ ಗಾತ್ರ (ಮೈಕ್ರೋ ಮೀ.ಗಳಲ್ಲಿ)
|
ಶೋಧಕದಲ್ಲಿ ಬಳಸಬೇಕಾದ ಜಾಲರಿಯಲ್ಲಿನ ಕಂಡಿಗಳ ಸಂಖ್ಯೆ (ಮೆಶ್ಗಳ ಸಂಖ್ಯೆ)
|
1
|
1.52(0.06)
|
210
|
70
|
2
|
1.27(0.05)
|
175
|
80
|
3
|
1.02(0.04)
|
150
|
100
|
4
|
0.76(0.03)
|
105
|
140
|
5
|
0.51(0.02)
|
75
|
200
|
6
|
0.38(0.015)
|
50
|
270
|
7
|
0.25(0.01)
|
44
|
325
|
iv. ಹೊರತೊಳೆಯುವ ವ್ಯವಸ್ಥೆ: ಶೋಧಕದಲ್ಲಿ ಕಟ್ಟಿಕೊಂಡ ಕೊಳೆಯನ್ನು ಆಗಾಗ್ಗೆ ಹೊರತೊಳೆಯಲು ಕವಾಟವಿರಬೇಕು. ಕೆಲವು ಸ್ವಯಂಚಾಲಿತ ತೊಳೆಯುವ ವ್ಯವಸ್ಥೆಯುಳ್ಳ ಶೋಧಕಗಳೂ ಸಹ ದೊರೆಯುತ್ತವೆ.
ಈ. ಮರಳು ಮಾಧ್ಯಮ ಶೋಧಕಗಳು:
ಒತ್ತಡ ತಡೆಯುವ ಕಡಾಯಿಗಳಲ್ಲಿ ತುಂಬಿದ (ಚಿತ್ರ 3.7), ಆಯ್ದಗಾತ್ರದ ಮರಳಿನ ಪದರಗಳ ಮೂಲಕ ನೀರನ್ನು ಹಾಯಿಸುವುದರಿಂದ ಸಾವಯವ ಮತ್ತು ನಿರವಯವ ಕಲ್ಮಶಗಳನ್ನು ನೀರಿನಿಂದ ಪರಿಣಾಮಕಾರಿಯಾಗಿ ಬೇರ್ಪಡಿಸಲು ಸಾಧ್ಯ. ಅತಿ ಸಣ್ಣ ಗಾತ್ರದ ಸಾವಯವ ಕಲ್ಮಶಗಳು ಹೆಚ್ಚಿಗೆ ಇದ್ದಾಗ ಅಥವಾ ಜಾಲರಿ ಶೋಧಕಗಳು ಮೇಲಿಂದ ಮೇಲೆ ಕಟ್ಟಿಕೊಳ್ಳುವಂತಿದ್ದಾಗ ಮರಳು ಮಾಧ್ಯಮ ಶೋಧಕಗಳು ಬಹಳ ಉಪಯೋಗಕರ.
ಮರಳು ಮಾಧ್ಯಮ ಶೋಧಕದ ಆಯ್ಕೆಯಲ್ಲಿ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು
i. ಶೋಧಕದ ಸಾಮಥ್ರ್ಯ: ಶೋಧಕದ ಮೂಲಕ ಹರಿಯಬಹುದಾದ ಒಟ್ಟು ನೀರಿನ ಪ್ರಮಾಣವೇ ಶೋಧಕದ ಸಾಮಥ್ರ್ಯ. ಶೋಧಕದ ಸಾಮಥ್ರ್ಯವನ್ನು ಮರಳು ಪದರದ ವಿಸ್ತೀರ್ಣದ ಮೇಲೆ ನಿರ್ಧರಿಸಲಾಗುತ್ತದೆ. ಶೋಧಕದ ಮರಳು ಪದರದ ಪ್ರತಿ ಚದುರ ಸೆಂ.ಮೀ. ವಿಸ್ತೀರ್ಣಕ್ಕೆ ಪ್ರತಿ ಗಂಟೆಗೆ 7.5 ಲೀಟರ್ ಅಥವಾ ಕಡಿಮೆ ಪ್ರಮಾಣದಲ್ಲಿ ಶೋಧಕದ ಸಾಮಥ್ರ್ಯವನ್ನು ಶಿಫಾರಸ್ಸು ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದರೆ ಕಲ್ಮಶಗಳು ಪರಿಣಾಮಕಾರಿಯಾಗಿ ಬೇರ್ಪಡದೇ ಹೋಗಬಹುದು.
ii. ಶೋಧಕದ ಪರಿಣಾಮಕತೆ: ಎಂದರೆ ನೀರಿನಿಂದ ಕಲ್ಮಶಗಳ ಬೇರ್ಪಡೆಯ ಮಟ್ಟ; ಹೆಚ್ಚಾಗಿ ಮಾಧ್ಯಮದಲ್ಲಿನ ಮರಳಿನ ಕಣಗಳ ಗಾತ್ರ, ಮರಳಿನ ಪದರದ ಆಳ ಮತ್ತು ಹರಿಯುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಮರಳಿನ ಕಣಗಳಲ್ಲಿ ಸಾಮಾನ್ಯವಾಗಿ ಮೇಲಿನ ಪದರಗಳಲ್ಲಿ ಸಂಗ್ರಹವಾಗುವ ಅತಿಸಣ್ಣ ಶೇ.10ರಷ್ಟು ಮರಳಿನ ಕಣಗಳ ಗಾತ್ರವನ್ನು ಪರಿಣಾಮಕಾರಿ ಮಾಧ್ಯಮ ಗಾತ್ರದ ಹನ್ನೆರಡನೇ ಒಂದರಿಂದ ಹದಿನೈದನೇ ಒಂದರಷ್ಟು ಗಾತ್ರದ ಕಲ್ಮಶಗಳು ನೀರಿನಿಂದ ಬೇರ್ಪಡುತ್ತವೆ. ಪರಿಣಾಮಕಾರಿ ಮಾಧ್ಯಮ ಗಾತ್ರ ಕಡಿಮೆಯಾದಷ್ಟೂ ಶೋಧಕದ ಪರಿಣಾಮಕತೆ ಹೆಚ್ಚಾಗುತ್ತದೆಯಾದರೂ ಶೋಧಕದ ಮೂಲಕ ಆಗುವ ನೀರಿನ ಒತ್ತಡದಲ್ಲಿನ ನಷ್ಟವು ಹೆಚ್ಚಾಗುತ್ತದೆ.
iii. ಹಿಂತೊಳೆಯುವ ವ್ಯವಸ್ಥೆ: ಮರಳು ಮಾಧ್ಯಮ ಶೋಧಕಗಳು ಕಟ್ಟಿಕೊಂಡಾಗ ಹಿಂತೊಳೆಯುವಿಕೆಯಿಂದ ಶುದ್ಧಿ ಮಾಡಲಾಗುತ್ತದೆ. ಹಿಂತೊಳೆಯುವಿಕೆಯಲ್ಲಿ ನೀರನ್ನು (ಇನ್ನೊಂದು ಶೋಧಕದಲ್ಲಿ ಶುದ್ಧಿ ಮಾಡಿದ ನೀರಾದರೆ ಉತ್ತಮ) ಶೋಧಕದ ಮೂಲಕ, ವಿರುದ್ಧ ದಿಕ್ಕಿನಲ್ಲಿ ಹರಿಸಿ, ಕಲ್ಮಶ ಬೆರೆತ ನೀರನ್ನು ಹೊರಬಿಡಲಾಗುತ್ತದೆ (ಚಿತ್ರ 3.8).
iv. ಚದುರು ಫಲಕ: ನೀರು ಒಂದೇ ಕಡೆ ಮರಳನ್ನು ತೋಡಿಕೊಂಡು ಹರಿಯದೇ ಮರಳಿನ ಹಾಸಿಗೆಯ ಪೂರ್ಣ ವಿಸ್ತೀರ್ಣದಲ್ಲಿ ಹರಿಯಲು ಅನುವಾಗುವಂತೆ, ನೀರಿನ ‘ಒಳಹರಿ’ ಕೊಳವೆಗೆ ಒಂದು ಚದುರು ಫಲಕವನ್ನು ಅಳವಡಿಸಲಾಗುತ್ತದೆ. ಮರಳು ಮಾಧ್ಯಮ ಶೋಧಕಗಳಲ್ಲಿ ಶೋಧಿಸಿದ ನೀರನ್ನು ಮತ್ತೆ ಜಾಲರಿ ಶೋಧಕಗಳ ಮೂಲಕ ಹರಿಸಬೇಕಾಗುತ್ತದೆ.
ಚಿತ್ರ 3.7 ಮರಳು ಮಾಧ್ಯಮ ಶೋಧಕ-ಚಾಲನೆಯಲ್ಲಿದ್ದಾಗ
ಚಿತ್ರ 3.8 ಮರಳು ಮಾಧ್ಯಮ ಶೋಧಕ ಹಿಂತೊಳೆಯುವಾಗ
3. ರಾಸಾಯನಿಕ ವಿಧಾನಗಳು:
ಕೆಲವು ರಾಸಾಯನಿಕ ವಸ್ತುಗಳನ್ನು ನೀರಿನೊಡನೆ ಬೆರೆಸುವುದರಿಂದ ನೀರಿನ ರಾಸಾಯನಿಕ ಲಕ್ಷ್ಷಣಗಳನ್ನು ಬದಲಿಸಿ, ಕೊಳವೆಗಳು ಕಟ್ಟಿಕೊಳ್ಳುವ ಅಪಾಯವನ್ನೊಡ್ಡುವ ರಾಸಾಯನಿಕ ಹಾಗೂ ಜೈವಿಕ ಕಲ್ಮಶಗಳನ್ನು ನಿರುಪದ್ರವಿಯನ್ನಾಗಿ ಮಾಡಲಾಗುತ್ತದೆ. ರಾಸಾಯನಿಕಗಳನ್ನು ನೀರಿನೊಡನೆ ಒಂದೇ ಸಮನೆ ಕಡಿಮೆ ಪ್ರಮಾಣದಲ್ಲಿ ಅಥವಾ ಅಗಾಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಲಾಗುವುದು.i. ಮುಖ್ಯ ಪಂಪಿನ ಮೂಲಕ ಈ ವಿಧಾನದಲ್ಲಿ ಮುಖ್ಯ ಪಂಪಿನ ಒಳಸೇರುವ ಕೊಳವೆಯ ಮೂಲಕ ಆಗಾಗ್ಗೆ ಅಲ್ಪ ಅವಧಿಯಲ್ಲಿ ರಾಸಾಯನಿಕಗಳನ್ನು ಕೊಡಲಾಗುತ್ತದೆ. ರಾಸಾಯನಿಕಗಳನ್ನು ಕೊಟ್ಟ ತಕ್ಷಣ ರಾಸಾಯನಿಕ ಬೆರೆಸದ ನೀರಿನಿಂದ ವ್ಯವಸ್ಥೆಯನ್ನು ತೊಳೆಯಬೇಕಾಗುತ್ತದೆ. ಪಂಪು, ಕೊಳವೆಗಳು, ಕವಾಟಗಳು ಮತ್ತಿತರ ಭಾಗಗಳು ರಾಸಾಯನಿಕಗಳಿಂದ, ಮುಖ್ಯವಾಗಿ ಆಮ್ಲದಿಂದ, ಹಾನಿಯಾಗದಂತೆ ಪ್ಲಾಸ್ಟಿಕ್ನವುಗಳಾಗಿರಬೇಕು (ಚಿತ್ರ 3.9).
ii. ಪ್ರತ್ಯೇಕ ಸಣ್ಣ ಪಂಪುಗಳನ್ನು ಉಪಯೋಗಿಸಿ ಮುಖ್ಯ ವಿತರಕ ಕೊಳವೆಯೊಳಗಿನ ನೀರಿನೊಡನೆ ರಾಸಾಯನಿಕಗಳು ಬೆರೆಯುವಂತೆ, ಪ್ರತ್ಯೇಕ ಸಣ್ಣ ಪಂಪುಗಳನ್ನು ಬಳಸಿ, ಹೆಚ್ಚಿನ ಒತ್ತಡದಿಂದ ಒಳ ಸೇರಿಸಲಾಗುತ್ತದೆ (ಚಿತ್ರ 3.10). ಮುಖ್ಯ ವಿತರಕ ಕೊಳವೆಯಲ್ಲಿ ರಾಸಾಯನಿಕ ವಸ್ತು ಬೆರೆತ ನೀರು ಹಿಂತಿರುಗಿ ಹರಿಯದಂತೆ, ಪ್ಲಾಸ್ಟಿಕ್ನ ‘ಹಿಂದಿರುಗದ ಕವಾಟ’ (ಏಕಮುಖ ಕವಾಟ)ವನ್ನು ಅಳವಡಿಸಬೇಕು.
iii. ಎತ್ತರದಲ್ಲಿರುವ ಕಡಾಯಿಯಿಂದ ಈ ವಿಧಾನದಲ್ಲಿ ರಾಸಾಯನಿಕ ವಸ್ತುಗಳನ್ನೊಳಗೊಂಡ ಕಡಾಯಿಯನ್ನು ನೀರಿನ ತೊಟ್ಟಿಗಿಂತಲೂ ಎತ್ತರದಲ್ಲಿಟ್ಟು, ಹೆಚ್ಚಿನ ಒತ್ತಡದಿಂದ ರಾಸಾಯನಿಕ ವಸ್ತುಗಳು ಮುಖ್ಯ ಕೊಳವೆಯನ್ನು ಒಳಸೇರುವಂತೆ ಮಾಡಲಾಗುತ್ತದೆ (ಚಿತ್ರ 3.11).
iv. ವೆಂಚುರಿ ಸಾಧನದ ಮೂಲಕ ಕಡಿಮೆ ಅಗಲವಿರುವ ಕೊಳವೆಯ ಭಾಗದಲ್ಲಿ ವೇಗವಾಗಿ ನೀರನ್ನು ನುಗ್ಗಿಸಿ ಒತ್ತಡವನ್ನು ಕಡಿಮೆ ಮಾಡುವ ವೆಂಚುರಿ ಸಾಧನವನ್ನು ಬಳಸಿ, ವಿತರಕ ಕೊಳವೆಯಲ್ಲಿ ಒಳಸೆಳೆತವನ್ನುಂಟು ಮಾಡಿ ಅಲ್ಲಿ ರಾಸಾಯನಿಕ ವಸ್ತುಗಳನ್ನು ಒಳಸೇರುವಂತೆ ಮಾಡಲಾಗುತ್ತದೆ(ಚಿತ್ರ 3.12 ಮತ್ತು 3.13).
ಈ ನಾಲ್ಕು ವಿಧಾನಗಳಲ್ಲಿ ವೆಂಚುರಿ ಸಾಧನದ ಮೂಲಕ ರಾಸಾಯನಿಕಗಳನ್ನು ಕೊಡುವುದು ಸುಲಭವಾಗಿದೆ. ಸಾಮಾನ್ಯವಾಗಿ ಅನುಸರಿಸಲಾಗುವ ಪ್ರಮುಖ ರಾಸಾಯನಿಕ ಶುದ್ಧೀಕರಣ ವಿಧಾನಗಳೆಂದರೆ, ಆಮ್ಲ ಬೆರೆಸುವುದು ಮತ್ತು ಕ್ಲೋರಿನೀಕರಣ.
ಚಿತ್ರ 3.9 ಮುಖ್ಯ ಪಂಪಿನ ಮೂಲಕ ರಾಸಾಯನಿಕ ವಸ್ತುಗಳನ್ನು ಬೆರೆಸುವುದು.
ಚಿತ್ರ 3.11 ಎತ್ತರದಲ್ಲಿರುವ ಕಡಾಯಿಯಿಂದ ರಾಸಾಯನಿಕ ವಸ್ತುಗಳನ್ನು ಬೆರೆಸುವುದು.
ಚಿತ್ರ 3.12 ವೆಂಚುರಿ ಸಾಧನದ ವಿವರಗಳು
ಚಿತ್ರ 3.13 ವೆಂಚುರಿ ಸಾಧನವನ್ನು ಬಳಸಿ ರಾಸಾಯನಿಕ ವಸ್ತುಗಳನ್ನು ಬೆರೆಸುವುದು.
ಅ. ಆಮ್ಲ ಬೆರೆಸುವುದು
ಸಾಮಾನ್ಯವಾಗಿ ಹೈಡ್ರೋಕ್ಲೋರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ ಅಥವಾ ಫಾಸ್ಪಾರಿಕ್ ಆಮ್ಲಗಳನ್ನು ನೀರಿನೊಡನೆ ಗೊತ್ತಾದ ಪ್ರಮಾಣದಲ್ಲಿ ಬೆರೆಸುವುದರಿಂದ ನೀರಿನ ರಸಸಾರ ಕಡಿಮೆಯಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಗರಣೆಯಾಗಿ ಮತ್ತು ಕಬ್ಬಿಣ ಅಂಟಾಗಿ ಕಟ್ಟಿಕೊಳ್ಳುವುದು ಕಡಿಮೆಯಾಗುತ್ತದೆ. ನೀರಿನ ರಸಸಾರವನ್ನು ನಿಗದಿಯಾದ ಮಟ್ಟಕ್ಕೆ ತರಲು (ಅಲ್ಪಾವಧಿಗೆ 4.0 ಅಥವಾ ದೀರ್ಘಾವಧಿಗೆ 6.0 ರಸಸಾರ) ಬಳಸಬೇಕಾದ ಆಮ್ಲದ ಪ್ರಮಾಣವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನಿರ್ಧರಿಸಬೇಕು.
ಆಮ್ಲವನ್ನು ಬೆರೆಸುವಾಗ ವಹಿಸಬೇಕಾದ ಎಚ್ಚರಿಕೆಗಳು
ಸಾಮಾನ್ಯವಾಗಿ ಹೈಡ್ರೋಕ್ಲೋರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ ಅಥವಾ ಫಾಸ್ಪಾರಿಕ್ ಆಮ್ಲಗಳನ್ನು ನೀರಿನೊಡನೆ ಗೊತ್ತಾದ ಪ್ರಮಾಣದಲ್ಲಿ ಬೆರೆಸುವುದರಿಂದ ನೀರಿನ ರಸಸಾರ ಕಡಿಮೆಯಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಗರಣೆಯಾಗಿ ಮತ್ತು ಕಬ್ಬಿಣ ಅಂಟಾಗಿ ಕಟ್ಟಿಕೊಳ್ಳುವುದು ಕಡಿಮೆಯಾಗುತ್ತದೆ. ನೀರಿನ ರಸಸಾರವನ್ನು ನಿಗದಿಯಾದ ಮಟ್ಟಕ್ಕೆ ತರಲು (ಅಲ್ಪಾವಧಿಗೆ 4.0 ಅಥವಾ ದೀರ್ಘಾವಧಿಗೆ 6.0 ರಸಸಾರ) ಬಳಸಬೇಕಾದ ಆಮ್ಲದ ಪ್ರಮಾಣವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನಿರ್ಧರಿಸಬೇಕು.
ಆಮ್ಲವನ್ನು ಬೆರೆಸುವಾಗ ವಹಿಸಬೇಕಾದ ಎಚ್ಚರಿಕೆಗಳು
- ಪಂಪು ಕವಾಟ, ಕೊಳವೆ ಮತ್ತಿತರ ನೀರು ನಿಯಂತ್ರಣ ಸಾಧನಗಳು ಆಮ್ಲನಿರೋಧಕ ಶಕ್ತಿಯುಳ್ಳವಾಗಿರಬೇಕು.
- ಆಮ್ಲ ಅಥವಾ ಆಮ್ಲ ಬೆರೆತ ನೀರು, ಹಿಂದಿರುಗಿ ಹರಿಯದಂತೆ, ಏಕಮುಖ ಕವಾಟಗಳನ್ನು ಅಳವಡಿಸಬೇಕು.
- ಆಮ್ಲ ಬೆರೆಸಿದ ನೀರನ್ನು ಮನುಷ್ಯರು, ಪಶುಪಕ್ಷಿಗಳು ಕುಡಿಯದಂತೆ, ಗೃಹಬಳಕೆಗೆ ಬಳಸದಂತೆ ಮತ್ತು ಆ ನೀರು ಯಾವುದೇ ನೀರಿನ ಸಂಗ್ರಹವನ್ನು ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು.
- ಆಮ್ಲವನ್ನು ನೀರಿಗೆ ಬೆರೆಸಬೇಕೇ ಹೊರತು, ನೀರನ್ನು ಆಮ್ಲಕ್ಕೆ ಯಾವ ಕಾರಣಕ್ಕೂ ಬೆರೆಸಬಾರದು.
- ಪಂಪು ಮಾಡುವ ನೀರಿನ ಪ್ರಮಾಣದಲ್ಲಿ ಆಕಸ್ಮಿಕವಾಗಿ ವ್ಯತ್ಯಾಸವಾದರೆ, ಬೆರೆಸುವ ಆಮ್ಲದ ಪ್ರಮಾಣವನ್ನು ತಕ್ಕಂತೆ ವ್ಯತ್ಯಾಸ ಮಾಡಬೇಕು.
- ಹನಿ ನೀರಾವರಿ ವ್ಯವಸ್ಥೆಯನ್ನು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ, ವಿತರಣಾ ಕೊಳವೆಗಳೆಲ್ಲವೂ ನೀರಿನಿಂದ ತುಂಬಿಕೊಂಡ ಮೇಲೆ ಆಮ್ಲ ಬೆರೆಸಲು ಪ್ರಾರಂಭಿಸಬೇಕು.
- ಆಮ್ಲ ಬೆರೆಸುವುದು ಪೂರೈಸಿದ ನಂತರ, ವಿತರಣಾ ಕೊಳವೆಗಳೆಲ್ಲವೂ ನೀರಿನಿಂದ ತುಂಬಿಕೊಂಡ ಮೇಲೆ ಆಮ್ಲ ಬೆರೆಸಲು ಪ್ರಾರಂಭಿಸಬೇಕು.
- ಬೆರೆಸಬೇಕಾದ ಆಮ್ಲದ ಪ್ರಮಾಣವನ್ನು ಪ್ರಯೋಗಾಲಯಗಳಲ್ಲಿ, ಬಳಸಬೇಕಾದ ನೀರಿನೊಡನೆ ಪರೀಕ್ಷೆಯ ಮೂಲಕ ಕಂಡುಕೊಳ್ಳಬೇಕು. ಆಗಾಗ್ಗೆ, ವ್ಯವಸ್ಥೆಯ ವಿವಿಧ ಭಾಗಗಳಲ್ಲಿ ಸಂಗ್ರಹಿಸಿದ ಆಮ್ಲ ಬೆರೆತ ನೀರಿನ ಮಾದರಿಯ ರಸಸಾರವನ್ನು ಪರೀಕ್ಷಿಸಿ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು.
ಆ. ಕ್ಲೋರಿನೀಕರಣ
ಪಾಚಿ ಮತ್ತು ಏಕಾಣುಜೀವಿಗಳನ್ನು (ಬ್ಯಾಕ್ಟೀರಿಯಾ)ನಿಯಂತ್ರಿಸಲು, ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಟಿನ (ಸ್ಲೈಮ್) ತೊಂದರೆಯನ್ನು ತಪ್ಪಿಸಲು, ನೀರಿನೊಡನೆ ಕ್ಲೋರಿನ್ ಬೆರೆಸಲಾಗುತ್ತದೆ. ಕ್ಯಾಲ್ಸಿಯಂ ಹೈಪೋಕ್ಲೋರೈಟ್ (ಬ್ಲೀಚಿಂಗ್ ಪೌಡರ್), ಸೋಡಿಯಂ ಹೈಪೋಕ್ಲೋರೈಟ್ (ಹೈಪೋ) ಮತ್ತು ಕ್ಲೋರಿನ್ ಅನಿಲವನ್ನು ಕ್ಲೋರಿನೀಕರಣಕ್ಕಾಗಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಕ್ಯಾಲ್ಸಿಯಂ/ಸೋಡಿಯಂ ಹೈಪೋಕ್ಲೋರೈಡ್ ಬಳಸಿದಾಗ ನೀರಿನಲ್ಲಿ ಕ್ಷಾರೀಯ ಪರಿಣಾಮವುಂಟಾಗುವುದರಿಂದ, ರಸಸಾರ ಈಗಾಗಲೇ ಹೆಚ್ಚಿಗೆ ಇರುವ ನೀರಿನಲ್ಲಿ ಇವುಗಳನ್ನು ಬಳಸುವಾಗ ಜೊತೆಯಲ್ಲಿ ಆಮ್ಲವನ್ನೂ ಸಹ ನೀರಿಗೆ ಬೆರೆಸುವುದು ಉತ್ತಮ. ಕ್ಲೋರಿನ್ ಅನಿಲವು ಒತ್ತಡದ ಅನಿಲ ಸಿಲಿಂಡರುಗಳಲ್ಲಿ ಬರುತ್ತದೆ. ಇದನ್ನು ಸಾಗಿಸುವಾಗ, ಸಂಗ್ರಹಿಸುವಾಗ ಮತ್ತು ಬಳಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ದೊಡ್ಡ ತೋಟಗಳಿಗೆ ಇದು ಕಡಿಮೆ ವೆಚ್ಚವಾಗಿದ್ದು ಉಪಯುಕ್ತವಾಗುತ್ತದೆ. ಕ್ಲೋರಿನ್ ಅನಿಲ ನೀರಿನಲ್ಲಿ ಬೆರೆತಾಗ ಆಮ್ಲೀಯ ಪರಿಣಾಮವುಂಟಾಗುತ್ತದೆ. ಕ್ಲೋರಿನೀಕರಣ ಮಾಡಿದ ನೀರನ್ನು ಮರಳು ಮಾಧ್ಯಮ ಶೋಧಕದ ಮೂಲಕ ಹಾಯಿಸುವುದು ಉತ್ತಮ.
4. ನಿಯಂತ್ರಣಾ ಸ್ವಿಚ್ ಮತ್ತು ಕವಾಟಗಳು
ಪಾಚಿ ಮತ್ತು ಏಕಾಣುಜೀವಿಗಳನ್ನು (ಬ್ಯಾಕ್ಟೀರಿಯಾ)ನಿಯಂತ್ರಿಸಲು, ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಟಿನ (ಸ್ಲೈಮ್) ತೊಂದರೆಯನ್ನು ತಪ್ಪಿಸಲು, ನೀರಿನೊಡನೆ ಕ್ಲೋರಿನ್ ಬೆರೆಸಲಾಗುತ್ತದೆ. ಕ್ಯಾಲ್ಸಿಯಂ ಹೈಪೋಕ್ಲೋರೈಟ್ (ಬ್ಲೀಚಿಂಗ್ ಪೌಡರ್), ಸೋಡಿಯಂ ಹೈಪೋಕ್ಲೋರೈಟ್ (ಹೈಪೋ) ಮತ್ತು ಕ್ಲೋರಿನ್ ಅನಿಲವನ್ನು ಕ್ಲೋರಿನೀಕರಣಕ್ಕಾಗಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಕ್ಯಾಲ್ಸಿಯಂ/ಸೋಡಿಯಂ ಹೈಪೋಕ್ಲೋರೈಡ್ ಬಳಸಿದಾಗ ನೀರಿನಲ್ಲಿ ಕ್ಷಾರೀಯ ಪರಿಣಾಮವುಂಟಾಗುವುದರಿಂದ, ರಸಸಾರ ಈಗಾಗಲೇ ಹೆಚ್ಚಿಗೆ ಇರುವ ನೀರಿನಲ್ಲಿ ಇವುಗಳನ್ನು ಬಳಸುವಾಗ ಜೊತೆಯಲ್ಲಿ ಆಮ್ಲವನ್ನೂ ಸಹ ನೀರಿಗೆ ಬೆರೆಸುವುದು ಉತ್ತಮ. ಕ್ಲೋರಿನ್ ಅನಿಲವು ಒತ್ತಡದ ಅನಿಲ ಸಿಲಿಂಡರುಗಳಲ್ಲಿ ಬರುತ್ತದೆ. ಇದನ್ನು ಸಾಗಿಸುವಾಗ, ಸಂಗ್ರಹಿಸುವಾಗ ಮತ್ತು ಬಳಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ದೊಡ್ಡ ತೋಟಗಳಿಗೆ ಇದು ಕಡಿಮೆ ವೆಚ್ಚವಾಗಿದ್ದು ಉಪಯುಕ್ತವಾಗುತ್ತದೆ. ಕ್ಲೋರಿನ್ ಅನಿಲ ನೀರಿನಲ್ಲಿ ಬೆರೆತಾಗ ಆಮ್ಲೀಯ ಪರಿಣಾಮವುಂಟಾಗುತ್ತದೆ. ಕ್ಲೋರಿನೀಕರಣ ಮಾಡಿದ ನೀರನ್ನು ಮರಳು ಮಾಧ್ಯಮ ಶೋಧಕದ ಮೂಲಕ ಹಾಯಿಸುವುದು ಉತ್ತಮ.
4. ನಿಯಂತ್ರಣಾ ಸ್ವಿಚ್ ಮತ್ತು ಕವಾಟಗಳು
ವ್ಯವಸ್ಥೆಯನ್ನು ಸಂಪೂರ್ಣವಾಗಿ ಆರಂಭಿಸಲು ಮತ್ತು ನಿಲ್ಲಿಸಲು ಪಂಪುಗಳನ್ನು ನಡೆಸುವ ಸ್ವಿಚ್ಗಳನ್ನು ಅಥವಾ ವ್ಯವಸ್ಥೆಗೆ ನೀರುಣಿಸುವ ಕೊಳವೆಯ ಕವಾಟಗಳನ್ನು ಬಳಸಬಹುದು. ವ್ಯವಸ್ಥೆಯನ್ನು ಭಾಗಶಃ ನಿಯಂತ್ರಿಸಲು ಕವಾಟಗಳನ್ನು ಬಳಸಬಹುದು.
ಸ್ವಿಚ್ ಮತ್ತು ಕವಾಟಗಳನ್ನು ವಿವಿಧ ರೀತಿಯಲ್ಲಿ ಎಂದರೆ, ಮಾನವ ಚಾಲಿತ, ಭಾಗಶಃ ಸ್ವಯಂಚಾಲಿತ ಅಥವಾ ಸ್ವಯಂಚಾಲಿತ ವಿಧಾನಗಳಲ್ಲಿ ನಿಯಂತ್ರಿಸಬಹುದು. ಭಾಗಶಃ ಸ್ವಯಂ ಚಾಲಿತ ವಿಧಾನದಲ್ಲಿ ವ್ಯವಸ್ಥೆಯ ಪ್ರಾರಂಭವು ಮಾನವ ಚಾಲಿತವಾದರೆ, ಮೊದಲೇ ನಿಗದಿ ಪಡಿಸಿದ ವೇಳೆಯ ನಂತರ ಅಥವಾ ನಿಗದಿ ಪಡಿಸಿದ ಪ್ರಮಾಣದ ನೀರು ಹೊರ ಹರಿದ ನಂತರ ತನ್ನಷ್ಟಕ್ಕೆ ತಾನೇ ನಿಲ್ಲುವ ವ್ಯವಸ್ಥೆಯಿರುತ್ತದೆ.
ಸ್ವಯಂ ಚಾಲಿತ ವಿಧಾನದಲ್ಲಿ, ವ್ಯವಸ್ಥೆ ಪೂರ್ವ ನಿರ್ಧಾರಿತ ಸಮಯಕ್ಕೆ ಸರಿಯಾಗಿ ತನ್ನಷ್ಟಕ್ಕೆ ತಾನೇ ಕಾರ್ಯಾರಂಭ ಮಾಡಲು ಪ್ರಾರಂಭಿಸಿ ನಿಗದಿತ ಸಮಯದ ನಂತರ ಅಥವಾ ನಿಗದಿತ ಪ್ರಮಾಣದ ನೀರು ಹೊರಬಿದ್ದ ನಂತರ ತನ್ನಿಂದ ತಾನೇ ನಿಲ್ಲುವ ವ್ಯವಸ್ಥೆ ಇರುತ್ತದೆ. ಇದರಲ್ಲಿ ಪ್ರತಿದಿನ ನಿಗದಿತ ವೇಳೆಯಲ್ಲಿ ವ್ಯವಸ್ಥೆ ಪ್ರಾರಂಭವಾಗುವಂತಿರಬಹುದು ಅಥವಾ ಮಣ್ಣಿನ ತೇವಾಂಶವು ನಿಗದಿತ ಮಟ್ಟಕ್ಕಿಂತ ಕೆಳಗಿಳಿದಾಗ ಪ್ರಾರಂಭವಾಗುವಂತಿರಬಹುದು. ಸ್ವಯಂಚಾಲಿತ ವಿಧಾನದಲ್ಲಿ, ವಿದ್ಯುತ್ ಸಂಜ್ಞೆಯ ಮೇಲೆ ಕೆಲಸ ಮಾಡುವ ‘ಸೊಲೆನೈಡ್ ಕವಾಟ’ಗಳನ್ನೂ, sಸ್ವಯಂಚಾಲಿತ ಕಾಲ ನಿಯಂತ್ರಿತ ಸ್ವಿಚ್ಗಳನ್ನೂ, ಮಣ್ಣಿನ ತೇವ ಅಳೆಯುವ ಸಾಧನಗಳನ್ನೂ, ಗಣಕ ಯಂತ್ರಗಳನ್ನೂ ಬಳಸಲಾಗುತ್ತದೆ.
II. ಕೊಳವೆಗಳ ಜಾಲ
ಮೂಲತಃ ನೀರನ್ನು ವಿವಿಧ ಭಾಗಗಳಲ್ಲಿ ಬೇಕಾದ ಪ್ರಮಾಣದಲ್ಲಿ ಸಮನಾದ ಒತ್ತಡದಲ್ಲಿ ಹಂಚಲು ಅನುಕೂಲವಾಗುವಂತೆ ಕೊಳವೆಗಳ ಜಾಲವನ್ನು ವಿನ್ಯಾಸಗೊಳಿಸಲಾಗಿರುತ್ತದೆ.
1. ಮುಖ್ಯ ಕೊಳವೆ:
ಮುಖ್ಯ ಕೊಳವೆಯು ನೀರಿನ ಮೂಲದಿಂದ ಅಥವಾ ಪಂಪಿನಿಂದ ನೀರನ್ನು ಬೇರೆ ಭಾಗಗಳಲ್ಲಿರುವ ಉಪಮುಖ್ಯ ಕೊಳವೆಗಳಿಗೆ ಸಾಗಿಸುತ್ತದೆ. ಒಂದೊಂದೇ ಉಪಮುಖ್ಯ ಕೊಳವೆಗೆ ನೀರೊದಗಿಸಿದಂತೆಲ್ಲಾ ಮುಖ್ಯ ಕೊಳವೆಯಲ್ಲಿ ನೀರು ಹರಿಯುವ ಪ್ರಮಾಣ ವ್ಯತ್ಯಾಸವಾಗುವುದರಿಂದ, ವಿವಿಧ ಭಾಗಗಳಲ್ಲಿ ಮುಖ್ಯ ಕೊಳವೆಯ ವ್ಯಾಸವೂ ಸಹ ವ್ಯತ್ಯಾಸವಾಗುತ್ತದೆ. ವಿವಿಧ ಭಾಗಗಳಲ್ಲಿ ಹರಿಯುವ ನೀರಿನ ಪ್ರಮಾಣ, ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಬೇಕಾದ ಕನಿಷ್ಟ ಒತ್ತಡ, ದೊರೆಯುತ್ತಿರುವ ಒತ್ತಡ, ಕೊಳವೆಯ ಮಾರ್ಗದ ಗುಂಟ ಇರುವ ಇಳಿಜಾರು, ಕೊಳವೆಯ ಒಳಮೈನ ಲಕ್ಷಣಗಳು ಮುಂತಾದವುಗಳನ್ನವಲಂಬಿಸಿ ವಿವಿಧ ಭಾಗಗಳಲ್ಲಿರಬೇಕಾದ ಕೊಳವೆಯ ಗಾತ್ರವನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಮುಖ್ಯ ಕೊಳವೆಗೆ ಸುಮಾರು 40 ಮಿ.ಮೀ. ಮತ್ತು ಹೆಚ್ಚು ಒಳವ್ಯಾಸವುಳ್ಳ ಗಟ್ಟಿ ಪಿ.ವಿ.ಸಿ. ಕೊಳವೆಗಳನ್ನು ಬಳಸಲಾಗುತ್ತದೆ.
2. ಉಪಮುಖ್ಯ ಕೊಳವೆ:
ಉಪಮುಖ್ಯ ಕೊಳವೆಯು ನೀರನ್ನು ಮುಖ್ಯ ಕೊಳವೆಗಳಿಂದ ಕವಲು ಕೊಳವೆಗಳಿಗೆ ಒದಗಿಸುತ್ತದೆ. ಸಾಮಾನ್ಯವಾಗಿ ಕವಲು ಕೊಳವೆಗಳನ್ನು ಇಳಿಜಾರಿಗೆ ಅಡ್ಡಲಾಗಿ ಬರುವಂತೆ ಮಾಡಿರುವುದರಿಂದ ಹಾಗೂ ಉಪಮುಖ್ಯ ಕೊಳವೆಗಳು ಕವಲುಕೊಳವೆಗಳಿಗೆ ಲಂಬವಾಗಿ ಜೋಡಿಸಿರುವುದರಿಂದ ಉಪಮುಖ್ಯ ಕೊಳವೆಯು ಇಳಿಜಾರಿನ ದಿಕ್ಕಿನಲ್ಲಿಯೇ ಇರುವುದರಿಂದ ಒತ್ತಡದಲ್ಲಿ ಹೆಚ್ಚು ಏರುಪೇರಾಗಲು ಅವಕಾಶವಿರುತ್ತದೆ. ಇದರಿಂದ, ಇಳಿಜಾರಿನಿಂದಾಗುವ ವ್ಯತ್ಯಾಸಗಳನ್ನು ಸರಿಪಡಿಸಲು ಕೊಳವೆಯ ವ್ಯಾಸದಲ್ಲಿ ವ್ಯತ್ಯಾಸ ಮಾಡಬೇಕಾಗಬಹುದು.
ಉಪಮುಖ್ಯ ಕೊಳವೆಯ ಉದ್ದವು ಹೆಚ್ಚಾಗಿದ್ದರೆ, ಒತ್ತಡದಲ್ಲಿ ಹಾಗೂ ನೀರಿನ ಹಂಚಿಕೆಯಲ್ಲಿ ಸಮಾನತೆಯು ಕಡಿಮೆಯಾಗುತ್ತದೆ. ಈ ರೀತಿ ಉಪಮುಖ್ಯ ಕೊಳವೆಯ ಉದ್ದ ಹೆಚ್ಚಾಗುವ ಸಂದರ್ಭದಲ್ಲಿ ಮುಖ್ಯ ಕೊಳವೆಯ ಸಂಪರ್ಕವನ್ನು ಉಪಮುಖ್ಯ ಕೊಳವೆಯ ಮಧ್ಯ ಏರ್ಪಡಿಸಿ, ತತ್ವಶಃ ಎರಡು ದಿಕ್ಕಿನಲ್ಲಿ ನೀರು ಹರಿಯುವ ಎರಡು ಕಡಿಮೆ ಉದ್ದದ ಉಪಮುಖ್ಯ ಎರಡು ದಿಕ್ಕಿನಲ್ಲಿ ನೀರು ಹರಿಯುವ ಎರಡು ಕಡಿಮೆ ಉದ್ದದ ಉಪಮುಖ್ಯ ಕೊಳವೆಗಳನ್ನಾಗಿ ಮಾಡಲಾಗುತ್ತದೆ (ಚಿತ್ರ 3.14).
ಉಪಮುಖ್ಯ ಕೊಳವೆಗೆ ಸಾಮಾನ್ಯವಾಗಿ 32 ಮಿ.ಮೀ. ನಿಂದ 75 ಮಿ.ಮೀ. ಒಳ ವ್ಯಾಸವುಳ್ಳ ಗಟ್ಟಿ ಪಿ.ವಿ.ಸಿ. ಕೊಳವೆಗಳನ್ನು ಅಥವಾ ಅಧಿಕ ಸಾಂದ್ರತೆಯ ಪಾಲಿ ಎಥಿಲೀನ್ ಕೊಳವೆಗಳನ್ನು ಬಳಸುತ್ತಾರೆ. ಮುಖ್ಯ ಮತ್ತು ಉಪಮುಖ್ಯ ಕೊಳವೆಗಳ ಅಳತೆಗಳನ್ನು ಕೋಷ್ಟಕ 3.2ರಲ್ಲಿ ಕೊಡಲಾಗಿದೆ.
ಮುಖ್ಯ ಕೊಳವೆಯೊಡನೆ ಉಪಮುಖ್ಯ ಕೊಳವೆಯ ಸಂಪರ್ಕವನ್ನು ‘ಖಿ’ ಜೋಡಣೆ ಅಥವಾ ಸರ್ವೀಸ್ ಸ್ಯಾಡಲ್ ಉಪಯೋಗಿಸಿ ಮಾಡಬಹುದು (ಚಿತ್ರ 3.15).
ಒಂದು ತೋಟದಲ್ಲಿ ಎಷ್ಟು ಉಪಮುಖ್ಯ ಕೊಳವೆಗಳನ್ನು ಕೊಡಬೇಕೆನ್ನುವುದನ್ನು ಮತ್ತು ಅವುಗಳ ಸ್ಥಾನವನ್ನು ಮುಖ್ಯವಾಗಿ ಇರುವ ನೀರಿನ ಪ್ರಮಾಣ, ಮತ್ತು ಕೊಡಬೇಕಾಗಿರುವ ನೀರಿನ ಪ್ರಮಾಣ ಈ ಕೆಳಗಿನ ಅಂಶಗಳನ್ನು ಅವಲಂಬಿಸಿರುತ್ತದೆ. ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಜಮೀನಿನ ಮೇಲ್ಮೈ ಲಕ್ಷ್ಷಣಗಳು, ಇಳಿಜಾರಿನಲ್ಲಿನ ವ್ಯತ್ಯಾಸಗಳು, ಒಂದೇ ವ್ಯವಸ್ಥೆಯಲ್ಲಿ ಬರುವ ಬೇರೆ ಬೇರೆ ಬೆಳೆಗಳು ಇತ್ಯಾದಿಗಳನ್ನನುಸರಿಸಿ ನೀರಿನ ಸಮ ಹಂಚಿಕೆಯಾಗುವ ರೀತಿಯಲ್ಲಿ ನಿರ್ಧರಿಸಲಾಗುತ್ತದೆ.
ಅ. ಉಪಮುಖ್ಯ ಕೊಳವೆಯ ಒಂದು ತುದಿಯಿಂದ ಜೋಡಿಸಲ್ಪಟ್ಟಿದೆ.ಕವಲು ಕೊಳವೆಗಳಲ್ಲಿ ನೀರಿನ ಅಸಮ ಹಂಚಿಕೆ
ಆ. ಉಪಮುಖ್ಯ ಕೊಳವೆಯು ಮಧ್ಯದಿಂದ ಜೋಡಿಸಲ್ಪಟ್ಟಿದೆ. ನೀರಿನ ಹಂಚಿಕೆ ಸಮನಾಗಿದೆ.
ಚಿತ್ರ 3.14 ನೀರಿನ ಸಮನಾದ ಹಂಚಿಕೆಗೆ ಉಪಮುಖ್ಯ ಕೊಳವೆಯ ಸರಿಯಾದ ವಿನ್ಯಾಸ
ಅ. ‘T’ ಜೋಡಣೆ ಮತ್ತು ಕಿರಿದಾಗಿಸುವ ಜೋಡಣೆ ಬಳಸಿ.
ಆ. ಕಿರಿದಾಗಿಸುವ ‘T’ ಜೋಡಣೆ ಬಳಸಿ.
ಇ. ಸರ್ವಿಸ್ ಸ್ಯಾಡಲ್ ಬಳಸಿ.
ಚಿತ್ರ 3.15 ಮುಖ್ಯ ಕೊಳವೆಯೊಡನೆ ಉಪಮುಖ್ಯ ಕೊಳವೆಯ ಜೋಡಣೆಗಳು.
ಕ್ರ. ಸಂ.
|
ಸಾಗಿಸಬೇಕಾದ ನೀರಿನ ಪ್ರಮಾಣ (ಗಂಟೆಗೆ ಗ್ಯಾಲನ್ಗಳಲ್ಲಿ)
|
ಸಾಮಾನ್ಯ ಸನ್ನಿವೇಶಗಳಲ್ಲಿ ಬಳಸಬಹುದಾದ ಪಿ.ವಿ.ಸಿ. ಕೊಳವೆಯ ಹೊರವಿನ್ಯಾಸ ಮಿ.ಮೀ. (ರೂಢಿಯಲ್ಲಿರುವಂತೆ ಇಂಚುಗಳು)
|
1
|
40 ರಿಂದ 70
|
16(½)
|
2
|
70 ರಿಂದ 120
|
25(¾)
|
3
|
120 ರಿಂದ 500
|
32(1)
|
4
|
500 ರಿಂದ 900
|
40(1¼)
|
5
|
900 ರಿಂದ 1500
|
50(1½)
|
6
|
1500 ರಿಂದ 2800
|
63(2)
|
7
|
2800 ರಿಂದ 4500
|
75(2½)
|
8
|
4500 ರಿಂದ 9000
|
90(3)
|
9
|
9000 ರಿಂದ 18,000
|
110(4)
|
10
|
18,000 ರಿಂದ 27,000
|
135(5)
|
11
|
27,000 ರಿಂದ 48,000
|
160(6)
|
12
|
48,000 ರಿಂದ 84,000
|
210(8)
|
ಕವಲು ಕೊಳವೆಗಳನ್ನು ಉಪಮುಖ್ಯ ಕೊಳವೆಗೆ ಜೋಡಿಸುವ ಜೋಡಣೆಗಳೆಂದರೆ, ಪ್ರಾರಂಭಿಕ ಬುಗುಟು ಜೋಡಣೆ, ಕಿರಿಬಾಯಿನ ‘ಖಿ’ ಜೋಡಣೆ, ಸ್ಯಾಡಲ್ಗಳು, ಸಪ್ಲೈ ಕೊಳವೆಯ ಮೂಲಕ ಅಥವಾ ನೇರವಾಗಿ ಸೇರಿಸುವುದು (ಚಿತ್ರ 3.19).
ಕವಲು ಕೊಳವೆಯ ಉದ್ದ, ವ್ಯಾಸ ಮುಂತಾದ ಅಳತೆಗಳನ್ನು ನಿರ್ಧರಿಸುವಾಗ, ಒತ್ತಡದ ಹಂಚಿಕೆ ಮತ್ತು ನೀರಿನ ಒಂದೇ ಸಮನೆ ಇರುವಂತೆ ನೋಡಿಕೊಳ್ಳಲಾಗುತ್ತಿದ್ದು ಜೋಡಣೆ, ವ್ಯವಸ್ಥೆಯ ಆರಂಭಿಕ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸುವ ದೃಷ್ಟಿಯ ಅವಶ್ಯಕತೆ ಇದೆ.
ಕವಲು ಕೊಳವೆಯ ಉದ್ದ ಹೆಚ್ಚಾದರೆ, ನೀರುಣಿಸುವ ಗಿಡ/ಮರಗಳ ಸಂಖ್ಯೆ, ಸಾಗಿಸಬೇಕಾದ ನೀರಿನ ಪ್ರಮಾಣ ಮತ್ತು ಘರ್ಷಣೆಯಿಂದಾಗಿ ಒತ್ತಡದಲ್ಲಿ ಆಗುವ ನಷ್ಟ ಹೆಚ್ಚಾಗಿ, ನೀರಿನ ಹಂಚಿಕೆಯು ಒಂದೇ ಸಮನೆ ಉಳಿಯುವುದಿಲ್ಲ ಮತ್ತು ವ್ಯವಸ್ಥೆಯಲ್ಲಿನ ಒತ್ತಡದ ನಷ್ಟದಿಂದಾಗಿ ನಿರ್ವಹಣಾ ವೆಚ್ಚವು ಅಧಿಕವಾಗುತ್ತದೆ. ನೀರಿನ ಸಮನಾದ ಹಂಚಿಕೆಯ ದೃಷ್ಟಿಯಿಂದ ಕವಲು ಕೊಳವೆಯ ಉದ್ದ ಕಡಿಮೆಯಾದರೆ, ಇರುವ ಗಿಡಗಳಿಗೆ ನೀರುಣಿಸಲು ಹೆಚ್ಚು ಸಂಖ್ಯೆಯಲ್ಲಿ ಉಪಮುಖ್ಯ ಕೊಳವೆಗಳು ಬೇಕಾಗುತ್ತವೆಯಾದ್ದರಿಂದ ಆರಂಭಿಕ ವೆಚ್ಚ ಅಧಿಕವಾಗುತ್ತದೆ.
ಕವಲು ಕೊಳವೆಯ ಉದ್ದ ಹೆಚ್ಚಾದಾಗ ಅದರಲ್ಲಿ ಸಾಗಿಸಬೇಕಾದ ಅಧಿಕ ನೀರಿನ ಪ್ರಮಾಣವನ್ನು ನಿರ್ವಹಿಸಲು ದೊಡ್ಡ ವ್ಯಾಸದ ಕವಲು ಕೊಳವೆಯು ಬೇಕಾಗುತ್ತದೆ. ಆದರೆ ಅಧಿಕ ವ್ಯಾಸದ ಕೊಳವೆಯಿಂದಾಗಿ ಪ್ರಾರಂಭಿಕ ವೆಚ್ಚ ಹೆಚ್ಚಾಗುತ್ತದೆ. ಕಡಿಮೆ ವ್ಯಾಸದ ಕೊಳವೆಯಿಂದ ಪ್ರಾರಂಭಿಕ ವೆಚ್ಚ ಕಡಿಮೆಯಾದರೂ ಸಹ, ಮುಂದೆ ಒತ್ತಡದ ನಷ್ಟ ಹೆಚ್ಚಾಗಿ, ನಿರ್ವಹಣಾ ವೆಚ್ಚ ಹೆಚ್ಚಾಗುತ್ತದೆ. ಹೀಗೆ ಕವಲು ಕೊಳವೆಯ ಉದ್ದ ಮತ್ತು ವ್ಯಾಸಗಳ ಆಯ್ಕೆ ಮಾಡುವಾಗ, ಪ್ರಾರಂಭಿಕ ವೆಚ್ಚ ಮತ್ತು ನಿರ್ವಹಣಾ ವೆಚ್ಚಗಳಲ್ಲಿ ಸರಿದೂಗಿಸಬೇಕಾಗುತ್ತದೆ. ವ್ಯವಸ್ಥೆಯ ಒಟ್ಟು ವೆಚ್ಚದ ಪ್ರತಿಶತ ಸುಮಾರು 25-35ರಷ್ಟು ಕವಲು ಕೊಳವೆಗಳ ಮೇಲೆ, ಪ್ರತಿಶತ 45-55ರಷ್ಟು ಒಟ್ಟು ಕೊಳವೆಗಳ ಜಾಲದ ಮೇಲೆ ಆಗುವುದರಿಂದ ವೆಚ್ಚವನ್ನು ಸರಿದೂಗಿಸುವಲ್ಲಿ ಅನವಶ್ಯಕವಾಗಿ ಕೊಳವೆಗಳ ವ್ಯಾಸ ಹೆಚ್ಚಾಗಿರದಂತೆ ನೋಡಿಕೊಳ್ಳಬೇಕು. ಕಡಿಮೆ ಸಮಯದಲ್ಲಿ ಹೆಚ್ಚಿನ ದರದಲ್ಲಿ ನೀರು ಕೊಡುವ ವ್ಯವಸ್ಥೆಗಿಂತ, ಹೆಚ್ಚು ಸಮಯದಲ್ಲಿ ಕಡಿಮೆ ದರದಲ್ಲಿ ನೀರು ಕೊಡುವ ವ್ಯವಸ್ಥೆಯಲ್ಲಿ ಕಡಿಮೆ ಗಾತ್ರದ ಕೊಳವೆಗಳು ಸಾಕಾಗುತ್ತವೆ.
ಅ.
ಒಂಟಿ ಕವಲು
ಕೊಳವೆ ಆ.
ಜೋಡಿ ಕವಲು
ಕೊಳವೆ
ಚಿತ್ರ
3.16 ಹೆಚ್ಚು
ಅಂತರದ ತೋಟದ ಬೆಳೆಗಳಲ್ಲಿ ಕವಲು
ಕೊಳವೆಗಳ ಜೋಡಣೆ
ಅ.
ಜೋಡಿಸಾಲು
ನೆನೆಸಲು ಆ.
ಬಹು ಸಾಲು
ನೆನೆಸಲು
ಚಿತ್ರ
3.17 ಕಡಿಮೆ
ಅಂತರದ ಬೆಳೆಗಳಲ್ಲಿ ಕವಲು ಕೊಳವೆಗಳ
ಜೋಡಣೆ
ಅ.
ಏಕಸಾಲು
ವಿಧಾನ ಆ.
ಜೋಡಿಸಾಲು
ವಿಧಾನ
ಚಿತ್ರ
3.18 ಸಾಲು
ನೆನೆಸುವ ಹನಿ ಸಾಧನಗಳ ಜೋಡಣೆ
ಅ.
ಪ್ರಾರಂಭಿಕ
ಬುಗುಟು ಜೋಡಣೆಯ ಮೂಲಕ
ಚಿತ್ರ
3.17 ಕಡಿಮೆ
ಅಂತರದ ಬೆಳೆಗಳಲ್ಲಿ ಕವಲು ಕೊಳವೆಗಳ
ಜೋಡಣೆ
ಆ.
ಕಿರಿದಾಗಿಸುವ
‘T’ ಜೋಡಣೆಯ ಮೂಲಕ
ಇ.
‘T’ ಜೋಡಣೆ
ಮತ್ತು ಕಿರಿದಾಗಿಸುವ ಜೋಡಣೆಯ
ಮೂಲಕ
ಈ.
ಸರ್ವಿಸ್
ಸ್ಯಾಡಲ್ ಮೂಲಕ
ಉ.
ಸಪ್ಲೈ
ಕೊಳವೆಗಳ ಮೂಲಕ
ಊ.
ನೇರವಾಗಿ
ಸೇರಿಸುವ್ಯದರಿಂದ
ಚಿತ್ರ
3.19 ಕವಲು
ಕೊಳವೆಗಳನ್ನು ಉಪಮುಖ್ಯ ಕೊಳವೆಗೆ
ಸೇರಿಸುವ ಜೋಡಣೆಗಳು
ಉಪಮುಖ್ಯ ಕೊಳವೆಯಿಂದ ಎರಡೂ ದಿಕ್ಕಿನಲ್ಲಿ ಕವಲು ಕೊಳವೆಗಳನ್ನು ತೆಗೆದುಕೊಳ್ಳುವುದರಿಂದ ಕವಲು ಕೊಳವೆಗಳ ಉದ್ದವನ್ನು ಕಡಿಮೆ ಮಾಡಲು ಸಾಧ್ಯ (ಚಿತ್ರ 3.20). ಈ ರೀತಿ ಜೋಡಿಸಿದಾಗ ಒಂದು ಭಾಗವು ಇಳಿಜಾರಿನಲ್ಲಿ ಇನ್ನೊಂದು ಭಾಗವು ಏರಿಕೆಯಲ್ಲಿ ಸಾಗುತ್ತದೆ. ಇಳಿಜಾರಿನಲ್ಲಿ ಸಾಗುವ ಭಾಗದ ಕೊಳವೆಯಲ್ಲಿ ಒತ್ತಡಕ್ಕೆ ಸೇರ್ಪಡೆಯಾಗುವುದರಿಂದ, ಕೊಳವೆಯ ಉದ್ದವನ್ನು ಹೆಚ್ಚಿಗೆ ಇರಿಸಬಹುದು ಅಥವಾ ಕೊಳವೆಯ ಗಾತ್ರವನ್ನು ಸ್ವಲ್ಪ ಕಡಿಮೆ ಮಾಡಬಹುದು. ಆದರೆ ಏರಿಕೆಯಲ್ಲಿ ಸಾಗುವ ಕೊಳವೆಯಲ್ಲಿ ಒತ್ತಡದ ಕಡಿತವುಂಟಾಗುವುದರಿAದ, ಕೊಳವೆಯ ಉದ್ದವು ಕಡಿಮೆ ಇರಬೇಕಲ್ಲದೇ ಕೊಳವೆಯ ವ್ಯಾಸವೂ ಹೆಚ್ಚಿರಬೇಕಾಗಬಹುದು.
ಬಹಳ ಉದ್ದನೆಯ ಕವಲು ಕೊಳವೆಗಳನ್ನು ಉಪಯೋಗಿಸಬೇಕಾದಾಗ, ನೀರಿನ ಹರಿವು ಹೆಚ್ಚಿರಬೇಕಾದುದರಿಂದ ಕೊಳವೆಯ ಗಾತ್ರವೂ ಸಹ ದೊಡ್ಡದಿರಬೇಕಾಗುತ್ತದೆ ಹಾಗೂ ಇದರಿಂದ ಪ್ರಾರಂಭಿಕ ವೆಚ್ಚವು ಹೆಚ್ಚಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತುದಿಯಲ್ಲಿ ಸ್ವಲ್ಪ ದೂರ ಸಣ್ಣ ಗಾತ್ರದ ಕೊಳವೆಯನ್ನೂ ಕ್ರಮೇಣ ಉಪಕೊಳವೆಯೆಡೆ ಬಂದAತೆಲ್ಲಾ ದೊಡ್ಡ ಗಾತ್ರದ ಕೊಳವೆಯನ್ನೂ ಬಳಸಿ ಆರಂಭಿಕ ವೆಚ್ಚವನ್ನು ಕಡಿಮೆಗೊಳಿಸಬಹುದು. ಕವಲು ಕೊಳವೆಗಳ ತುದಿಯಲ್ಲಿ ಚಿತ್ರ 3.21ರಲ್ಲಿ ತೋರಿಸಿರುವಂತೆ ವಿವಿಧ ರೀತಿಯ ತುದಿ ಮುಚ್ಚಳಗಳನ್ನು ಬಳಸಲಾಗುತ್ತದೆ.
4. ಕೊಳವೆಗಳನ್ನು ಆಳದಲ್ಲಿ ಹೂಳುವ ಬಗೆ
ಕೊಳವೆಗಳನ್ನು ಉಳುಮೆಗೆ ಸಿಗದಂತೆ ಸುಮಾರು 40 ರಿಂದ 50 ಸೆಂ.ಮೀ. ಆಳದಲ್ಲಿ ನೆಲದಲ್ಲಿ ಹೂಳಬಹುದು ಅಥವಾ ಭೂಮಿಯ ಮೇಲೆ ಸಾಲಿನ ಪಕ್ಕಗಳಲ್ಲಿ ಇರಿಸಬಹುದು. ಆಳವಾಗಿ ನೆಲದಲ್ಲಿ ಹೂಳುವುದರಿಂದ ಆಗುವ ಕೆಲವು ಅನುಕೂಲಗಳೆಂದರೆ, ಬೇಸಾಯದಲ್ಲಿ ಅಡಚಣೆಗಳಿಲ್ಲದಿರುವುದು, ಸೂರ್ಯ ರಶ್ಮಿಯಲ್ಲಿರುವ ನೀಲಾತೀತ ಕಿರಣಗಳಿಂದ ಪ್ಲಾಸ್ಟಿಕ್ ಕೊಳವೆಗಳು ಹಾಳಾಗದಿರುವುದು, ಇಲಿ, ಅಳಿಲು ಮುಂತಾದ ಪ್ರಾಣಿಗಳ ಕಡಿತಕ್ಕೆ ಸುಲಭವಾಗಿ ದೊರೆಯದಿರುವುದು ಮುಂತಾದವುಗಳು. ಆದರೆ ಈ ರೀತಿ ಹೂಳುವುದರಿಂದ ಮುಖ್ಯ ಅನಾನುಕೂಲತೆಗಳೆಂದರೆ ಕೊಳವೆಗಳು ಕಟ್ಟಿಕೊಂಡಾಗ ಅಥವಾ ಹಾನಿಗೊಳಗಾದಾಗ ಸರಿಪಡಿಸಲು ತೊಂದರೆ ಹಾಗೂ ಹೂಳಲು ತಗಲುವ ಆರಂಭಿಕ ವೆಚ್ಚ ಅಧಿಕವಾಗಿರುತ್ತದೆ.
ಅ.
ಉಪಮುಖ್ಯ
ಕೊಳವೆಯು ಒಂದು ಬದಿಯಲ್ಲಿದೆ.
ನೀರಿನ
ಹಂಚಿಕೆ ಅಸಮ.
ಆ. ಉಪಮುಖ್ಯ ಕೊಳವೆಯ ಮಧ್ಯದಲ್ಲಿದೆ. ನೀರಿನ ಹಂಚಿಕೆ ಸಮ.
ಚಿತ್ರ 3.20 ಉಪಮುಖ್ಯ ಕೊಳವೆಗಳಿಂದ ಕವಲು ಕೊಳವೆಗಳ ಉಗಮದ ಸ್ಥಾನ
ಅ. ಜೋಡಿ ಉಂಗುರದ ತುದಿ ಮುಚ್ಚಳ
ಆ. ಉಬ್ಬು ಬೆಣೆ ತುದಿ ಮುಚ್ಚಳ
ಇ. ದೊಡ್ಡ ಅಳತೆಯ ಕೊಳವೆಯ ತುಂಡು
ಈ. ಕೊಳವೆಯನ್ನು ಮಡಚಿ ದಾರ/ತಂತಿ ಕಟ್ಟುವ್ಯದರಿಂದ
ಚಿತ್ರ 3.21 ಕವಲು ಕೊಳವೆಗಳ ತುದಿಯಲ್ಲಿ ಬಳಸುವ ವಿವಿಧ ತುದಿಮುಚ್ಚಳಗಳು.
ಕೊಳವೆಗಳನ್ನು ಹೂಳುವುದರ ಅನುಕೂಲ, ಅನಾನುಕೂಲಗಳನ್ನು ತುಲನಾತ್ಮಕ ದೃಷ್ಟಿಯಿಂದ ನೋಡಿದಾಗ, ಕಾಣುವ ಅಂಶವೆಂದರೆ ಅಧಿಕ ಅಂತರದ ಬೆಳೆಗಳಲ್ಲಿ ಕೊಳವೆಗಳನ್ನು ಹೂಳುವುದು ಹೆಚ್ಚು ಅನುಕೂಲಕರ ಹಾಗೂ ಕಡಿಮೆ ಅಂತರದ ಬೆಳೆಗಳಲ್ಲಿ, ಅನುಕೂಲಗಳಿದ್ದರೂ, ಅಧಿಕ ಆರಂಭಿಕ ವೆಚ್ಚವು ಅಡ್ಡಿಯಾಗುತ್ತದೆ. ಲೋಹ, ಪಿ.ವಿ.ಸಿ., ಎಲ್.ಡಿ.ಪಿ.ಇ., ಎಚ್.ಡಿ.ಪಿ.ಇ. ಮುಂತಾದ ವಿವಿಧ ರೀತಿಯ ಕೊಳವೆಗಳನ್ನು ಒಂದಕ್ಕೊAದು ಸೇರಿಸುವ ಸರಿಯಾದ ವಿಧಾನಗಳನ್ನು ಚಿತ್ರ 3.22ರಲ್ಲಿ ತೋರಿಸಲಾಗಿದೆ.
5. ಹನಿ ಸಾಧನಗಳು
ಹನಿ ಸಾಧನವು ಹನಿ ನೀರಾವರಿ ವ್ಯವಸ್ಥೆಯ ಅತಿ ಮುಖ್ಯವಾದ ಭಾಗ, ಪ್ರತಿ ಗಿಡಕ್ಕೆ ದೊರಕುವ ನೀರಿನ ಪ್ರಮಾಣ ಹಾಗೂ ವ್ಯವಸ್ಥೆಯಲ್ಲಿ ಬೇರೆ ಬೇರೆ ಭಾಗಗಳಿಗೆ ಸಮನಾದ ನೀರಿನ ಹಂಚಿಕೆಯು ಮುಖ್ಯವಾಗಿ ಹನಿ ಸಾಧನವನ್ನವಲಂಬಿಸಿರುತ್ತದೆ. ಉತ್ತಮ ಹನಿ ಸಾಧನವು ನಿಗದಿತ ಪ್ರಮಾಣದ ನೀರನ್ನು ಅತಿ ಕಡಿಮೆ ಒತ್ತಡದಿಂದ ಹೊರ ಹರಿಯಲು ಬಿಡುತ್ತದೆ.
ಹನಿ ಸಾಧನಗಳನ್ನು ಮುಖ್ಯವಾಗಿ, ನೆನೆಸುವ ಆಕಾರಕ್ಕನುಗುಣವಾಗಿ ಸಾಲು ನೆನೆಸುವ ಹಾಗೂ ಬಿಂದುವಿನಲ್ಲಿ ನೆನೆಸುವ ಹನಿ ಸಾಧನಗಳನ್ನಾಗಿ ವಿಂಗಡಿಸಲಾಗುತ್ತದೆ (ಚಿತ್ರ 3.23).
ಸಾಲು ನೆನೆಸುವ ಹನಿ ಸಾಧನಗಳು ಸಾಮಾನ್ಯವಾಗಿ ಕವಲು ಕೊಳವೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಸಾಲಿನಲ್ಲಿ ಬಹಳ ಹತ್ತಿರದಲ್ಲಿಯೇ ಹನಿಯುವ ಬಿಂದುಗಳು ಬರುವಂತೆ ಏರ್ಪಾಡು ಮಾಡಿರುವುದರಿಂದ, ನೀರು ಹೊರಬಿದ್ದಾಗ ತೇವಗೊಂಡ ವಲಯಗಳು ಒಂದಕ್ಕೊAದು ಬೆರೆತು ಸಾಲು ಪೂರ್ತಿ ನೆನೆದಂತೆ ತೋರುತ್ತದೆ. ಬಿಂದು ನೆನೆಸುವ ಹನಿ ಸಾಧನಗಳು ಕವಲು ಕೊಳವೆಗಳಲ್ಲಿ ನಿರ್ದಿಷ್ಟ ಅಂತರದಲ್ಲಿ ಬರುವಂತೆ ಜೋಡಿಸಿರುತ್ತಾರೆ. ಇವುಗಳಲ್ಲಿ ನೀರು ಹನಿಯುವ ಬಿಂದುವಿನ ಸುತ್ತಲೂ ವೃತ್ತಾಕಾರದಲ್ಲಿನ ಮಣ್ಣು ತೇವಗೊಳ್ಳುತ್ತದೆ ಹಾಗೂ ತೇವಗೊಂಡ ವಲಯಗಳು ಒಂದಕ್ಕೊAದು ಬೆರೆಯುವುದಿಲ್ಲ. ಬಿಂದು ನೆನೆಸುವ ಹನಿ ಸಾಧನಗಳನ್ನು ಅಧಿಕ ಅಂತರದ ತೋಟಗಾರಿಕೆ ಬೆಳೆಗಳಲ್ಲಿ ಲಾಭದಾಯಕವಾಗಿ ಬಳಸಿಕೊಂಡರೆ, ಸಾಲು ನೆನೆಸುವ ಹನಿ ಸಾಧನಗಳನ್ನು ಕಡಿಮೆ ಅಂತರದ ಸಾಲು ಬೆಳೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ.
ಹನಿ ಸಾಧನಗಳ ಕಾರ್ಯತತ್ವಗಳ ಆಧಾರದ ಮೇಲೆ ಬಿಂದು ನೆನೆಸುವ ಹನಿಸಾಧನಗಳನ್ನು ಒತ್ತಡ ಅವಲಂಬಿತ ಹಾಗೂ ಒತ್ತಡ ನಿರಾವಲಂಬಿತ ಹನಿ ಸಾಧನಗಳೆಂದು ವಿಂಗಡಿಸಲಾಗಿದೆ. ಒತ್ತಡ ಅವಲಂಬಿ ಹನಿ ಸಾಧನಗಳಲ್ಲಿ, ಕವಲು ಕೊಳವೆಯಲ್ಲಿನ ಒತ್ತಡ ವ್ಯತ್ಯಾಸಗೊಂಡAತೆಲ್ಲಾ ನೀರು ಹೊರ ಬೀಳುವ ಪ್ರಮಾಣವು ಬದಲಾಗುತ್ತದೆ (ಚಿತ್ರ 3.24). ಈ ರೀತಿಯ ಹನಿಸಾಧಗಳಿಗೆ ಉದಾಹರಣೆಗಳೆಂದರೆ - ಅ. ಸೂಕ್ಷ್ಮ ರಂದ್ರ ಹನಿ ಸಾಧನ ಮತ್ತು ಇ. ವರ್ಟೆಕ್ಸ್ ಹನಿ ಸಾಧನ.
ಅ. ಲೋಹದ ಕೊಳವೆಯಿಂದ ಲೋಹದ ಕೊಳವೆಗೆ-ತಿರುಪುಳ್ಳ ಕಾಲರ್ ಬಳಸಿ
ಆ. ಲೋಹದ ಕೊಳವೆಯಿಂದ ಲೋಹದ ಕೊಳವೆಗೆ-ತಟ್ಟೆ ಬಿಲ್ಲೆ ಜೋಡಣೆ ಬಳಸಿ.
ಇ. ಲೋಹದ ಕೊಳವೆಯಿಂದ ಪಿವಿಸಿ ಕೊಳವೆಗೆ-ಒಳ ತಿರುಪಿನ ಜೋಡಣೆ ಬಳಸಿ.
ಈ. ಲೋಹದ ಕೊಳವೆಯಿಂದ ಪಿವಿಸಿ ಕೊಳವೆಗೆ-ತಿರುಪಿನ ಜೋಡಣೆ ಬಳಸಿ.
ಉ. ಲೋಹದ ಕೊಳವೆಯಿಂದ ಎಚ್.ಡಿ.ಪಿ.ಇ./ಎಲ್.ಎಲ್.ಡಿ.ಪಿ.ಇ.ಕೊಳವೆಗೆ
ಊ. ಎಚ್.ಡಿ.ಪಿ.ಇ./ಎಲ್.ಎಲ್.ಡಿ.ಪಿ.ಇ. ಕೊಳವೆಯಿಂದ ಎಚ್.ಡಿ.ಪಿ.ಇ./ಎಲ್.ಎಲ್.ಡಿ.ಪಿ.ಇ. ಕೊಳವೆಗೆ.
ಋ. ಪಿ.ವಿ.ಸಿ. ಕೊಳವೆಯಿಂದ ಎಚ್.ಡಿ.ಪಿ.ಇ./ಎಲ್.ಎಲ್.ಡಿ.ಪಿ.ಇ. ಕೊಳವೆಗೆ.
ಋ. ಪಿ.ವಿ.ಸಿ. ಕೊಳವೆಯಿಂದ ಪಿ.ವಿ.ಸಿ. ಕೊಳವೆಗೆ.
ಚಿತ್ರ 3.22 ವಿವಿಧ ಕೊಳವೆಗಳ ಜೋಡಣಾ ವಿಧಾನಗಳು.
ಅ. ಸಾಲು ನೆನೆಸುವ ಹನಿ ಸಾಧನ ಆ. ಬಿಂದುವಿನಲ್ಲಿ ನೆನೆಸುವ ಹನಿ ಸಾಧನ
ಚಿತ್ರ 3.23 ನೆನೆಸುವ ಆಕಾರಕ್ಕನುಗುಣವಾಗಿ ಹನಿ ಸಾಧನಗಳ ವಿಂಗಡಣೆ
ಅ. ಒತ್ತಡ ಅವಲಂಬಿತ ಹನಿ ಸಾಧನ ಆ. ಒತ್ತಡ ನಿರಾವಲಂಬಿತ ಹನಿ ಸಾಧನ
ಚಿತ್ರ 3.24 ವಿವಿಧ ರೀತಿಯ ಹನಿ ಸಾಧನಗಳಲ್ಲಿ ನೀರು ಹೊರ ಬೀಳುವ ಪ್ರಮಾಣದ ಮೇಲೆ ಒತ್ತಡದ ಪರಿಣಾಮ.
ಒತ್ತಡ ನಿರಾವಲಂಬಿತ ಹನಿಸಾಧನಗಳಲ್ಲಿ, ಕವಲು ಕೊಳವೆಗಳಲ್ಲಿ ನೀರಿನ ಒತ್ತಡ ವ್ಯತ್ಯಾಸವಾದರೂ ಸಹ ನೀರು ಹೊರಬೀಳುವ ಪ್ರಮಾಣದಲ್ಲಿ, ಹೆಚ್ಚಿನ ವ್ಯತ್ಯಾಸಗಳಿರುವುದಿಲ್ಲ (ಚಿತ್ರ 3.24). ಈ ರೀತಿಯ ಹನಿ ಸಾಧನಗಳಿಗೆ ಉದಾಹರಣೆಗಳೆಂದರೆ,
ಅ. ಹಿಗ್ಗುವ ಸೂಕ್ಷ್ಮ ರಂಧ್ರದ ಹನಿ ಸಾಧನ,
ಆ. ಉದ್ದ ತಿರುವು ಮುರುವು ಹರಿವಿನ ಹನಿ ಸಾಧನ,
ಇ. ಉದ್ದ ಸುರುಳಿ ಹರಿವಿನ ಹನಿ ಸಾಧನ,
ಈ. ತಿರುವು ಮುರುವಿನ ದಾರಿ ಮತ್ತು ಪೊರೆಯ ಹನಿಸಾಧನ ಮತ್ತು
ಉ. ಚಂಡು ಮತ್ತು ಸೀಳು ಪೀಠದ ಹನಿ ಸಾಧನ.
ಸಾಲು ನೆನೆಸುವ ಹನಿಸಾಧನಗಳಿಗೆ ಕೆಲವು ಉದಾಹರಣೆಗಳೆಂದರೆ,
ಅ. ಜಿನುಗು ಕೊಳವೆಗಳು,
ಆ. ದ್ವಿ-ಕೋಶ ಕೊಳವೆಗಳು,
ಇ. ಒಸರುವ ಸಚ್ಛಿದ್ರ ಕೊಳವೆಗಳು,
ಈ. ‘T’ ಪಟ್ಟಿಗಳು,
ಉ. ಹೊರ ಹರಿಯುವ ಮಾರ್ಗಗಳ ಕೊಳವೆಗಳು ಮುಂತಾದವುಗಳು.
6. ಹನಿ ಸಾಧನಗಳ ಗುಣ ವಿಶೇಷಣಗಳು:
ನೀರು ಹೊರಬರುವ ಪ್ರಮಾಣ, ನೀರು ಹರಿಯುವ ಮಾರ್ಗದ ಕನಿಷ್ಟ ಅಳತೆ, ನೀರು ಹೊರಬೀಳುವ ಬಿಂದುಗಳ ಸಂಖ್ಯೆ, ಕಾರ್ಯನಿರ್ವಹಣೆಗೆ ಬೇಕಾದ ಒತ್ತಡ, ಕಲ್ಮಶಗಳನ್ನು ಹೊರದೂಡುವ ವ್ಯವಸ್ಥೆ ಮುಂತಾದ ಅನೇಕ ಲಕ್ಷ್ಷಣಗಳನ್ನನುಸರಿಸಿ, ಹನಿ ಸಾಧನಗಳ ಗುಣ ವಿಶೇಷಣಗಳನ್ನು ಕೆಳತೋರಿಸಿದಂತೆ ಗುರುತಿಸಲಾಗುತ್ತದೆ.
i. ಹನಿಯುವ ನೀರಿನ ದರದ ಆಧಾರದ ಮೇಲೆ
ಅ. ಕಡಿಮೆ ಹನಿಯುವ ಸಾಧನಗಳು -ಪ್ರತಿ ಗಂಟೆಗೆ ನಾಲ್ಕು ಲೀಟರಿಗಿಂತ ಕಡಿಮೆ.
ಆ. ಮಧ್ಯಮ ಹನಿಯುವ ಹನಿಸಾಧನಗಳು -ಪ್ರತಿ ಗಂಟೆಗೆ ನಾಲ್ಕರಿಂದ ಹನ್ನೆರಡು ಲೀಟರುಗಳು
ಇ. ಅಧಿಕ ಹನಿಯುವ ಹನಿಸಾಧನಗಳು -ಪ್ರತಿ ಗಂಟೆಗೆ ಹನ್ನೆರಡು ಲೀಟರುಗಳಿಗಿಂತ ಹೆಚ್ಚು
ii. ನೀರು ಹನಿಯುವ ಕನಿಷ್ಠ ಮಾರ್ಗದ ಅಳತೆಯ ಆಧಾರದ ಮೇಲೆ
ಅ. ಕಿರಿದಾದ ಮಾರ್ಗದ ಹನಿಸಾಧನಗಳು -ಕನಿಷ್ಠ ಮಾರ್ಗ, 0.8 ಮಿ.ಮೀ. ಗಿಂತ ಚಿಕ್ಕದು
ಆ. ಮಧ್ಯಮ ಮಾರ್ಗದ ಹನಿಸಾಧನಗಳು -ಕನಿಷ್ಠ ಮಾರ್ಗ, 0.8 ರಿಂದ 1.5 ಮಿ.ಮೀ.
ಇ. ಅಗಲ ಮಾರ್ಗದ ಹನಿಸಾಧನಗಳು -ಕನಿಷ್ಠ ಮಾರ್ಗ, 1.5ಮಿ.ಮೀ.ಗಿಂತ ದೊಡ್ಡದು.
iii. ಕಾರ್ಯನಿರ್ವಹಣೆಗೆ ಅವಶ್ಯಕವಾದ ಒತ್ತಡದ ಆಧಾರದ ಮೇಲೆ
ಅ. ಕಡಿಮೆ ಒತ್ತಡದ ಹಿನಿಸಾಧನಗಳು -ಕಾರ್ಯ ನಿರ್ವಹಣೆಗೆ ಬೇಕಾದ ಒತ್ತಡ, 2 ರಿಂದ 5ಮೀ.ಗಳು
ಆ. ಮಧ್ಯಮ ಒತ್ತಡದ ಹನಿಸಾಧನಗಳು, ಒತ್ತಡ 5 ರಿಂದ 10ಮೀ.ಗಳು
ಇ. ಅಧಿಕ ಒತ್ತಡದ ಹನಿಸಾಧನಗಳು, ಒತ್ತಡ 10 ರಿಂದ 25 ಮೀ.ಗಳು
iv ನೀರು ಹನಿಸುವ ಬಿಂದುಗಳ ಸಂಖ್ಯೆಯ ಆಧಾರದ ಮೇಲೆ
ಅ. ಏಕ ಬಿಂದು ಹನಿಸಾಧನಗಳು
ಆ. ದ್ವಿ ಬಿಂದು ಹನಿಸಾಧನಗಳು
ಇ. ಬಹು ಬಿಂದು ಹನಿಸಾಧನಗಳು
v. ಕಲ್ಮಶಗಳನ್ನು ಹೊರದೂಡುವ ವ್ಯವಸ್ಥೆಯ ಆಧಾರದ ಮೇಲೆ
ಅ. ಆಗಾಗ್ಗೆ ಹೊರದೂಡುವ ಹನಿಸಾಧನಗಳು
ಆ. ಸದಾ ಹೊರದೂಡುವ ಹನಿಸಾಧನಗಳು
ಇ. ಹೊರದೂಡದ ಹನಿಸಾಧನಗಳು
7. ಹನಿಸಾಧನಗಳ ಆಯ್ಕೆ ಮತ್ತು ಜೋಡಣಾ ವಿನ್ಯಾಸ
ಹನಿ ನೀರಾವರಿ ವ್ಯವಸ್ಥೆಯ ಪೂರ್ಣ ಪ್ರಯೋಜನ ಪಡೆಯುವಲ್ಲಿ ಹನಿಸಾಧನಗಳ ಪಾತ್ರ ಬಹು ಮುಖ್ಯ, ಸರಿಯಾದ ರೀತಿಯ ಹನಿಸಾಧನಗಳ ಆಯ್ಕೆ, ನೀರು ಹನಿಯುವ ದರದ ಆಯ್ಕೆ, ಹನಿಸಾಧನಗಳ ಸಂಖ್ಯೆ ಹಾಗೂ ಜೋಡಣಾ ವಿನ್ಯಾಸಗಳನ್ನು ಯಾವುದೇ ಸನ್ನಿವೇಶದಲ್ಲಿನ ಬೆಳೆ, ಮಣ್ಣು ಮತ್ತು ನೀರಿಗನುಗುಣವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
8. ಹನಿಸಾಧನಗಳ ಆಯ್ಕೆ
ಹನಿ ಸಾಧನಗಳ ಅನೇಕ ಗುಣ ವಿಶೇಷಗಳನ್ನು ಪರಿಗಣಿಸಿ, ಸನ್ನಿವೇಶಕ್ಕೆ ತಕ್ಕಂತೆ ಆರಿಸಿಕೊಳ್ಳಬೇಕು.
ಅ. ಹನಿಯುವ ನೀರಿನ ಪ್ರಮಾಣ
ಆದಷ್ಟು ಕಡಿಮೆ ಹನಿ ಸಾಧನಗಳನ್ನು ಬಳಸಿ ಪರಿಣಾಮಕಾರಿ ಬೇರಿನ ವಲಯದ ಹೆಚ್ಚು ಭಾಗವನ್ನು ತೇವಗೊಳಿಸುವಂತಿದ್ದು, ಮಣ್ಣಿನ ಮೇಲ್ಮೆöÊಯಲ್ಲಿ ಆದಷ್ಟು ಕಡಿಮೆ ತೇವಗೊಳಿಸುವತ್ತ ಹಾಗೂ ನೀರು ಬೇರಿಗೆ ದೊರಕದಂತೆ ಆಳವಾಗಿ ಬಸಿದು ಹೋಗುವುದನ್ನು ತಪ್ಪಿಸುವತ್ತ ಗುರಿ ಇರಿಸಿಕೊಳ್ಳಬೇಕು. ಈ ದಿಶೆಯಲ್ಲಿ ನೀರು ಸುಲಭವಾಗಿ ಬಸಿಯುವ ಮರಳು ಮಣ್ಣು ಹಾಗೂ ಜಂಬಿಟ್ಟಿಗೆ ಮಣ್ಣುಗಳಲ್ಲಿ, ಬೇರಿಗಿಂತ ಆಳವಾಗಿ ಬಸಿಯದಂತೆ ಕಡಿಮೆ ದರದಲ್ಲಿ ಹನಿಸುವ ಹನಿಸಾಧನಗಳನ್ನು ಬಳಸಬೇಕು. ನೀರು ಚೆನ್ನಾಗಿ ಬಸಿಯದ ಜೇಡಿ ಮುಂತಾದ ಮಣ್ಣುಗಳಲ್ಲಿ ಬೇರಿನ ಆಳದವರೆಗೂ ಮಣ್ಣು ಪೂರ್ತಿ ನೆನೆಯುವಂತೆ ಮಾಡಲು, ಅಧಿಕ ದರದಲ್ಲಿ ಹನಿಸುವ ಹನಿಸಾಧನಗಳನ್ನು ಬಳಸಬೇಕು. ಸಾಮಾನ್ಯವಾಗಿ ಮಧ್ಯಮ ದರದಲ್ಲಿ (ಗಂಟೆಗೆ ನಾಲ್ಕರಿಂದ ಹನ್ನೆರಡು ಲೀಟರು) ಹನಿಸುವ ಹನಿಸಾಧನಗಳನ್ನು ಎಲ್ಲಾ ಸನ್ನಿವೇಶಗಳಲ್ಲಿಯೂ ಉಪಯೋಗಿಸಬಹುದು.
ಒಂದು ಸನ್ನಿವೇಶಕ್ಕೆ ಸೂಕ್ತವೆಂದು ಕಂಡು ಬಂದ ನೀರು ಹರಿಸುವ ದರದ ವ್ಯಾಪ್ತಿಯೊಳಗೆ ಆದಷ್ಟು ಕಡಿಮೆ ಹನಿಸುವ ದರವನ್ನು ಆರಿಸಿಕೊಳುವುದರಿಂದ ಕವಲು ಕೊಳವೆಗಳಲ್ಲಿ ಹಾಗೂ ವ್ಯವಸ್ಥೆಯಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿ ಚಿಕ್ಕ ಅಳತೆಯ ಕೊಳವೆಗಳನ್ನು ಆರಿಸಿಕೊಳ್ಳಲು ಸಾಧ್ಯವಾಗಿ ಪ್ರಾರಂಭಿಕ ವೆಚ್ಚದಲ್ಲಿ ಉಳಿತಾಯವಾಗುತ್ತದೆ.
ಕೆಲವು ಸನ್ನಿವೇಶಗಳಲ್ಲಿ ದೊರೆಯುವ ನೀರಿನ ಪ್ರಮಾಣಕ್ಕನುಗುಣವಾಗಿ ಅಥವಾ ಈಗಾಗಲೇ ಇರುವ ಪಂಪನ್ನೇ ಬಳಸಬೇಕಾದಾಗ, ಅದರಿಂದ ಹೊರಬರುವ ನೀರನ್ನು ಪೂರ್ಣ ಬಳಸಿಕೊಳ್ಳಲು ಅನುವಾಗುವಂತೆ ನೀರು ಹನಿಯುವ ದರವನ್ನು ಆರಿಸಿಕೊಳ್ಳಲಾಗುತ್ತದೆ.
ಆ. ನೀರು ಹರಿಯುವ ಕನಿಷ್ಠ ಮಾರ್ಗದ ಅಳತೆ
ನೀರು ಹರಿಯುವ ಕನಿಷ್ಠ ಮಾರ್ಗದ ಅಳತೆಯು ಸಾಧ್ಯವಾದಷ್ಟೂ ದೊಡ್ಡದಿದ್ದರೆ, ಮಾರ್ಗ ಕಟ್ಟಿಕೊಳ್ಳುವ ತೊಂದರೆ ಕಡಿಮೆಯಾಗುತ್ತದೆ. ಆದರೆ ಇದರಿಂದ ನೀರು ಹನಿಯುವ ದರವೂ ಸಹ ಹೆಚ್ಚಾಗುತ್ತದೆ. ಯಾವುದೇ ಒಂದು ನಿಗದಿತ ನೀರು ಹನಿಯುವ ದರವನ್ನು ಉಳಿಸಿಕೊಂಡು ಸಾಧ್ಯವಾದಷ್ಟು ದೊಡ್ಡ, ನೀರು ಹರಿಯುವ ಮಾರ್ಗವನ್ನುಳ್ಳ ಹನಿಸಾಧನಗಳನ್ನು ಆರಿಸಿಕೊಳ್ಳಬೇಕು.
ಇ. ಕಾರ್ಯನಿರ್ವಹಣಾ ಒತ್ತಡ
ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಒತ್ತಡವನ್ನು ವ್ಯವಸ್ಥೆಯಲ್ಲಿ ತರಲು ಸಾಧ್ಯವೇ ಎನ್ನುವುದನ್ನು ಪರಿಗಣಿಸಬೇಕು. ಈಗಾಗಲೇ ಇರುವ ತೊಟ್ಟಿ ಅಥವಾ ಪಂಪನ್ನು ಬಳಸಿಕೊಳ್ಳಬೇಕಾದರೆ, ದೊರೆಯುವ ಒತ್ತಡಕ್ಕನುಗುಣವಾಗಿ ಹನಿಸಾಧನಗಳನ್ನು ಆರಿಸಿಕೊಳ್ಳಬೇಕು.
ಈ. ಕಲ್ಮಶಗಳನ್ನು ಹೊರದೂಡುವ ವ್ಯವಸ್ಥೆ
ಕಲ್ಮಶಗಳನ್ನು ಹೊರದೂಡುವ ಸ್ವಯಂಚಾಲಿತ ವ್ಯವಸ್ಥೆಯನ್ನುಳ್ಳ ಹನಿಸಾಧನಗಳನ್ನು, ವಿಶೇಷವಾಗಿ ತೊಂದರೆ ಕೊಡಬಹುದಾದ ಕಲ್ಮಶಯುಕ್ತ ನೀರಿನಲ್ಲಿ ಬಳಸಿಕೊಳ್ಳಬಹುದು.
ಉ. ಹನಿ ಸಾಧನದ ಜೋಡಣೆಯ ಲಕ್ಷ್ಷಣಗಳು
ಹನಿ ಸಾಧನವನ್ನು ಕವಲು ಕೊಳವೆಯಲ್ಲಿ ಜೋಡಿಸಿದಾಗ ಜೋಡಣೆಗಳು ಕವಲು ಕೊಳವೆಯಲ್ಲಿ ಹೆಚ್ಚು ಸ್ಥಳವನ್ನು ಆಕ್ರಮಿಸಿ ನೀರಿನ ಹರಿಯುವಿಕೆಗೆ ಅಡ್ಡಿಯನ್ನುಂಟು ಮಾಡಬಾರದು.
ಊ. ಕಟ್ಟಿಕೊಂಡ ಹನಿಸಾಧನಗಳ ಮರು ಬಳಕೆಯ ಸಾಧ್ಯತೆ
ಕಟ್ಟಿಕೊಂಡು ಹಾಳಾದ ಹನಿಸಾಧನಗಳನ್ನು ಮರುಬಳಕೆ ಮಾಡಲು ಸರಿಪಡಿಸುವಂತಿದ್ದರೆ ಉತ್ತಮ.
ಋ. ಒತ್ತಡ ನಿರಾವಲಂಬಿ ಗುಣ
ದೊಡ್ಡ ತೋಟಗಳಲ್ಲಿ ಅಥವಾ ಹೆಚ್ಚು ಇಳಿಜಾರಿನಿಂದ ಕೂಡಿದ ಸ್ಥಳಗಳಲ್ಲಿ ಬಳಸುವಾಗ, ಒತ್ತಡ ನಿರಾವಲಂಬಿ ಗುಣಗಳನ್ನುಳ್ಳ ಹನಿ ಸಾಧನಗಳನ್ನು ಬಳಸುವುದು ಸೂಕ್ತ.
ಇದಲ್ಲದೇ ಕಡಿಮೆ ಬೆಲೆ, ವರ್ಷ ಕಳೆದಂತೆಲ್ಲಾ ಸ್ಥಿರವಾದ ನೀರು ಹನಿಸುವ ದರವನ್ನುಳಿಸಿಕೊಳ್ಳುವ ಗುಣ, ಮಾರುಕಟ್ಟೆಯಲ್ಲಿ ಸುಲಭ ಲಭ್ಯತೆ ಮುಂತಾದ ಅನೇಕ ಗುಣಗಳನ್ನು ಪರಿಗಣಿಸಿ ಹನಿಸಾಧನಗಳನ್ನು ಆರಿಸಿಕೊಳ್ಳಬೇಕು.
9. ಹನಿಸಾಧನಗಳ ಜೋಡಣೆ
ಹನಿ ಸಾಧನಗಳನ್ನು ಕವಲು ಕೊಳವೆಗಳಿಗೆ ಕೆಳಗೆ ತೋರಿಸಿದ ವಿವಿಧ ರೀತಿಗಳಲ್ಲಿ ಜೋಡಿಸಲಾಗುತ್ತದೆ.




















































william hill【WG】Casinoland.jp
ReplyDeleteCasinoland.com is a reliable casino information leovegas site. Get the latest william hill casino games, slots, table starvegad games, live casino, bingo, live blackjack, roulette,
Casinos in New Jersey (2021) | Mapyro
ReplyDeleteCasinos in New Jersey (2021) · Mohegan 태백 출장샵 Sun: 3470 Highway 여주 출장샵 183, Wilkes-Barre, PA 18702 · Harrah's/Casino Tunica: 충주 출장안마 2312 Hwy 183, 안성 출장샵 United States · Casinos Near 광명 출장안마
The reels during free spins are further wealthy, with extra stacked wilds creating the prospect to amass huge wins. Low variance slots are those who have a low element of threat. You will hit profitable combinations regularly as you play, yet the payouts will be comparatively small. The benefit of one of the best low variance slots is that frequent wins assist to stretch out your bankroll, providing you with loads of taking 카지노 사이트 part in} time in your money. They let you play for long durations without seeing a huge fluctuation to your bankroll.
ReplyDelete